ನವದೆಹಲಿ: ಭಾರತದ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್, ನಿಫ್ಟಿಯಲ್ಲಿ ಶುಕ್ರವಾರವೂ ರಕ್ತದೋಕುಳಿ ಕಂಡುಬಂತು. ಮಧ್ಯಾಹ್ನ 3.30ರ ವಹಿವಾಟು ಮುಕ್ತಾಯದ ಹಂತಕ್ಕೆ ಸೆನ್ಸೆಕ್ 135.37(ಶೇ.026) ಪಾಯಿಂಟ್ ಇಳಿಕೆ ಕಂಡು 51,360 ಅಂಕಗಳಲ್ಲಿ ವ್ಯವಹಾರ ನಡೆಸಿತು. ಇನ್ನು ನಿಫ್ಟಿ50 67.10(ಶೇ.0.44) ಅಂಕ ಕುಸಿತ ಕಂಡಿದ್ದು, 15,293.50 ಪಾಯಿಂಟ್‍ನಲ್ಲಿ ವ್ಯಹಾರ ನಡೆಸಿತು.
ಭಾರತೀಯ ಮಾನದಂಡ ಸೂಚ್ಯಂಕ(Indian benchmark indices)ಗಳು ಶುಕ್ರವಾರ ಹೊಸ 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರಿಂದ ದಲಾಲ್ ಸ್ಟ್ರೀಟ್‌ನಲ್ಲಿ ರಕ್ತದೋಕುಳಿ ಮುಂದುವರೆದಿದೆ. ವಿತ್ತೀಯ ನೀತಿ ಬಿಗಿಗೊಳಿಸುವಿಕೆ, ಹಣದುಬ್ಬರ ಮತ್ತು ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ಹೂಡಿಕೆದಾರರು ಕೈಸುಟ್ಟುಕೊಳ್ಳುವಂತಾಗಿದೆ.
ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಎದುರಾಗಿದೆ ಪೆಟ್ರೋಲ್ ಡಿಸೇಲ್ ಕೊರತೆ..!
ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ನಿಫ್ಟಿ 50 ಮತ್ತು ಬಿಎಸ್‌ಇ ಸೆನ್ಸೆಕ್ಸ್ ವಾರ್ಷಿಕ ಕನಿಷ್ಠ ಮಟ್ಟವನ್ನು ತಲುಪಿದ್ದು, ನೇರ 6ನೇ ಸೆಷನ್‌ಗೆ ತನ್ನ ದೌರ್ಬಲ್ಯವನ್ನು ವಿಸ್ತರಿಸಿತು. ‘ಮುಂದಿನ ಎರಡ್ಮೂರು ತಿಂಗಳು ಆರ್ಥಿಕತೆಗೆ ಪರಿವರ್ತನೆಯ ಹಂತವಾಗಿದೆ. ನಾವು ಮಾರುಕಟ್ಟೆ volatilityಯ ಲಾಭ ಪಡೆದುಕೊಳ್ಳಬೇಕಾಗಿದ್ದು, ಗುಣಮಟ್ಟದ ಸ್ಟಾಕ್‍ಗಳನ್ನು ಹೆಚ್ಚು ಹೆಚ್ಚು ಖರೀದಿಸಬೇಕಿದೆ. ಯಾವುದೇ ಕಾರಣಕ್ಕೂ Bear ಮಾರ್ಕೆಟ್‍ನಿಂದ ಭಯಭೀತರಾಗಿ ಹಿಂದೆ ಸರಿಯಬಾರದು. ಈಗಾಗಲೇ ಖರೀದಿಸಿರುವ ಸ್ಟಾಕ್‍ಗಳ ಜೊತೆಗೆ ಅತ್ಯುತ್ತಮವಾದ ಷೇರುಗಳನ್ನು ಕೊಳ್ಳಲು ಇದು ಸುವರ್ಣಾವಕಾಶ’ವೆಂದು ರೀಟೆಲ್ ರಿಸರ್ಜ್‍ನ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.
ಮಾರುಕಟ್ಟೆ Correction ನಡುವೆ ಕೆಲವು ಷೇರುಗಳು ತಮ್ಮ ಮೌಲ್ಯಗಳಲ್ಲಿ ಶೇ.6 ರಿಂದ ಶೇ.41ರಷ್ಟು ಕುಸಿತ ಕಂಡಿವೆ. 8 ಸೂಚ್ಯಂಕ ಷೇರುಗಳು 12.76 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತನ್ನು ಕರಗಿಸಿವೆ. ಈ ಸೂಚ್ಯಂಕ ಷೇರುಗಳಲ್ಲಿ ಹೆಚ್ಚಿನವು ತಂತ್ರಜ್ಞಾನ, ಹಣಕಾಸು ಅಥವಾ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸೇರಿವೆ. ಇವು ಸೂಚ್ಯಂಕದಲ್ಲಿ ದೊಡ್ಡ ತೂಕವನ್ನು ಹೊಂದಿವೆ. ಅಕ್ಟೋಬರ್ 19ರಿಂದ ಈ ಪ್ರತಿಯೊಂದು ಷೇರುಗಳು ತಲಾ 1 ಲಕ್ಷ ಕೋಟಿ ರೂ.ನಷ್ಟು ಸಂಪತ್ತನ್ನು ಕರಗಿಸಿವೆ.
ಇದನ್ನೂ ಓದಿ: ಎಟಿಎಫ್ ದರದಲ್ಲಿ ದಾಖಲೆ ಹೆಚ್ಚಳ; ವಿಮಾನ ಪ್ರಯಾಣ ಇನ್ನು ಬಲು ದುಬಾರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.