ಸಂಸತ್ತು ನಿಮ್ಮ ಪಕ್ಷದ ಆಫೀಸ್ ಅಲ್ಲ,ಇಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ- ಬಿಜೆಪಿಗೆ ಟಾಂಗ್ ಕೊಟ್ಟ ತೃಣಮೂಲ

   "ಇದು ಪಾರ್ಲಿಮೆಂಟ್, ಬಿಜೆಪಿ ಆಫಿಸ್ ಅಲ್ಲ... ಕೇವಲ ಅಧ್ಯಕ್ಷರೋಬ್ಬರೆ ಮಾತನಾಡಲಿಕ್ಕೆ...ಒಂದು ವೇಳೆ ಅಮಿತ್ ಶಾ ಮಾತನಾಡಬೇಕೆಂದರೆ ತಮ್ಮ ಹೊಸ ಫ್ಯಾನ್ಸಿ ಗ್ರಾಂಡ್  ಆಫೀಸ್ ನಲ್ಲಿ ಮಾತನಾಡಲಿ ..ಪಾರ್ಲಿಮೆಂಟ್ ನಲ್ಲಿ  ನಾವಿರುವುದು ಗೃಹ ಸಚಿವರ ಮಾತನ್ನು ಆಲಿಸಲು"

Last Updated : Aug 2, 2018, 08:51 PM IST
ಸಂಸತ್ತು ನಿಮ್ಮ ಪಕ್ಷದ ಆಫೀಸ್ ಅಲ್ಲ,ಇಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ- ಬಿಜೆಪಿಗೆ ಟಾಂಗ್ ಕೊಟ್ಟ ತೃಣಮೂಲ  title=

ನವದೆಹಲಿ: ಇಂದು ಸದನದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತನಾಡುವ ಸಂದರ್ಭದಲ್ಲಿ ಅಡ್ಡಿಪಡಿಸಿದ್ದಕ್ಕೆ ಬಿಜೆಪಿ ಪಕ್ಷ ತೃಣಮೂಲ ಕಾಂಗ್ರೆಸ್ ವಿರುದ್ದ ಕಿಡಿಕಾರಿದೆ.

ಇದಕ್ಕೆ ಎದುರೇಟು ನೀಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಡೆರೆಕ್ ಓ ಬ್ರೇನ್ " ಪಾರ್ಲಿಮೆಂಟ್ ನ್ನು ಬಿಜೆಪಿ ಬೆಂಬಲಿತ ತೋಟದ ಹಾಗೆ ನಡೆಸಲು ತೃಣಮೂಲ ಪಕ್ಷ ಅವಕಾಶ ನೀಡುವುದಿಲ್ಲ,ಇದು ಪಾರ್ಲಿಮೆಂಟ್, ಬಿಜೆಪಿ ಆಫಿಸ್ ಅಲ್ಲ... ಕೇವಲ ಅಧ್ಯಕ್ಷರೋಬ್ಬರೆ ಮಾತನಾಡಲಿಕ್ಕೆ...ಒಂದು ವೇಳೆ ಅಮಿತ್ ಶಾ ಮಾತನಾಡಬೇಕೆಂದರೆ ತಮ್ಮ ಹೊಸ ಫ್ಯಾನ್ಸಿ ಗ್ರಾಂಡ್  ಆಫೀಸ್ ನಲ್ಲಿ ಮಾತನಾಡಲಿ ..ಪಾರ್ಲಿಮೆಂಟ್ ನಲ್ಲಿ  ನಾವಿರುವುದು ಗೃಹ ಸಚಿವರ ಮಾತನ್ನು ಆಲಿಸಲು" ಎಂದು ತಿಳಿಸಿದರು. 

ಕಳೆದ ಮೂರು ದಿನಗಳಿಂದ ಸಂಸತ್ತು ಅಸ್ಸಾಂ ನಾಗರಿಕರ ಪಟ್ಟಿ ವಿಚಾರವಾಗಿ ಪ್ರತಿಪಕ್ಷಗಳಿಂದ ಪ್ರತಿಭಟನೆಗೆ ಸಾಕ್ಷಿಯಾಗಿತ್ತು.ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ  ಪ್ರತಿಪಕ್ಷಗಳಿಂದ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. 

Trending News