ಮಹಾರಾಷ್ಟ್ರ ಸರ್ಕಾರಕ್ಕೆ ತಲೆನೋವಾದ ಏಕನಾಥ್ ಶಿಂಧೆ ; ಇಂದು ಮಹತ್ವದ ನಡೆ ಸಾಧ್ಯತೆ

ಮುಂಬೈನಲ್ಲಿರುವ ಶಿವಸೇನೆ ಶಾಸಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಏಕನಾಥ್ ಶಿಂಧೆ ಸತತ ಪ್ರಯತನ್ ನಡೆಸುತ್ತಿದ್ದಾರೆ ಎನ್ನಲಾಗಿದೆ. 

Written by - Ranjitha R K | Last Updated : Jun 22, 2022, 09:30 AM IST
  • ಗುವಾಹಟಿಯಲ್ಲಿ ಬಂಡಾಯ ಶಾಸಕರು
  • ಇಂದು ಮಹತ್ವದ ನಿರ್ಧಾರ ಸಾಧ್ಯತೆ
  • ಮಧ್ಯಾಹ್ನ 1 ಗಂಟೆಗೆ ಸಚಿವರೊಂದಿಗೆ ಉದ್ಧವ್ ಠಾಕ್ರೆ ಸಭೆ
 ಮಹಾರಾಷ್ಟ್ರ ಸರ್ಕಾರಕ್ಕೆ ತಲೆನೋವಾದ  ಏಕನಾಥ್ ಶಿಂಧೆ ;  ಇಂದು ಮಹತ್ವದ ನಡೆ ಸಾಧ್ಯತೆ  title=
Eknath Shindhe (file photo)

ನವದೆಹಲಿ : 40 ಶಾಸಕರೊಂದಿಗೆ ಅಸ್ಸಾಂನ ಗುವಾಹಟಿ ತಲುಪಿರುವ ಶಿವಸೇನೆ ಶಾಸಕ ಏಕನಾಥ್ ಶಿಂಧೆ ಇಂದು ಮಹತ್ವದ ಹೆಜ್ಜೆ ಇದುವ ಸಾಧ್ಯತೆ ಇದೆ. ಸರ್ಕಾರದ ವಿದುದ್ದ ಬಂಡಾಯವೆದ್ದಿರುವ ಏಕನಾಥ್ ಶಿಂಧೆ,  ಠಾಕ್ರೆ ಸರ್ಕಾರದ ಸಂಕಷ್ಟಗಳನ್ನು ಹೆಚ್ಚಿಸಿದ್ದಾರೆ.  ಗುವಾಹಟಿ ತಲುಪಿರುವ  ಶಾಸಕರ ಪೈಕಿ ಶಿವಸೇನೆಯ 34, ಇತರ ಪಕ್ಷಗಳ 6  ಶಾಸಕರು ಇದ್ದಾರೆ ಎನ್ನಲಾಗಿದೆ. 

ಇಂದು ಮಹತ್ವದ ನಿರ್ಧಾರ ಸಾಧ್ಯತೆ : 
ಮೂಲಗಳ ಪ್ರಕಾರ, ಏಕನಾಥ್ ಶಿಂಧೆ ಅವರು ಇಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಫ್ಯಾಕ್ಸ್  ಮೂಲಕ ಪತ್ರ ರವಾನಿಸುವ ಸಾಧ್ಯತೆ ಇದೆ. ಈ ಪತ್ರದ ಮೂಲಕ ಮಹಾವಿಕಾಸ್ ಅಘಾಡಿ ಸರ್ಕಾರದಿಂದ 40 ಜನ ಶಾಸಕರು ತಮ್ಮ ಬೆಂಬಲವನ್ನು ಹಿಂತೆಗೆದುಕೊಳ್ಳುವ ಬಗ್ಗೆ ತಮ್ಮ ಹಕ್ಕು ಮಂಡಿಸಬಹುದು. ಹೀಗಾದರೆ ಈ ಪತ್ರದ ಆಧಾರದ ಮೇಲೆ, ಉದ್ಧವ್ ಸರ್ಕಾರ ಬಹುಮತವನ್ನು ಸಾಬೀತುಪಡಿಸಬೇಕಾದ  ನಿರ್ಧಾರವನ್ನು ನಂತರ ರಾಜ್ಯಪಾಲರು  ತೆಗೆದುಕೊಳ್ಳುತ್ತಾರೆ. 

ಇದನ್ನೂ ಓದಿ :  Presidential Election: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಗಿ ದ್ರೌಪದಿ ಮುರ್ಮು ಹೆಸರು ಘೋಷಣೆ

ಮತ್ತೊಂದೆಡೆ, ಮುಂಬೈನಲ್ಲಿರುವ ಶಿವಸೇನೆ ಶಾಸಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಏಕನಾಥ್ ಶಿಂಧೆ ಸತತ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ತನ್ನ ಬೆಂಬಲಿಗರ ಸಂಖ್ಯೆಯನ್ನು ಮೂರನೇ ಎರಡರ ಗಡಿ ದಾಟಿಸುವ ಉದ್ದೇಶ ಅವರದ್ದು. ಈ ಗುರಿ ಸಾಧಿಸುವಲ್ಲಿ ಶಿಂಧೆ ಯಶಸ್ವಿಯಾಗುವ ಸಾಧ್ಯತೆಯಿದೆ ಎಂದು ಹೇಳುತ್ತವೆ ಮೂಲಗಳು. ಮತ್ತೊಂದೆಡೆ, ಸಿಎಂ ಉದ್ಧವ್ ಠಾಕ್ರೆ ಬೆಂಬಲಿಗ ಶಾಸಕರನ್ನು ಕೂಡಾ ಮುಂಬೈನ ಹೋಟೆಲ್‌ನಲ್ಲಿ ಇರಿಸಲಾಗಿದೆ. ಮಾತ್ರವಲ್ಲ, ಏಕನಾಥ್ ಶಿಂಧೆ ಅವರ ಪ್ರತಿಯೊಂದು ಕ್ರಮದ ಮೇಲೆ ಸಿಎಂ ಠಾಕ್ರೆ ನಿಗಾವಹಿಸಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಎಂವಿಎ ಸಚಿವರೊಂದಿಗೆ ಉದ್ಧವ್ ಠಾಕ್ರೆ  ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಹತ್ವದ ನಿರ್ಧಾರ  ಹಿರ ಬರುವ ಸಾಧ್ಯತೆ ಕೂಡಾ ಇದೆ. 

ಗುವಾಹಟಿಯಲ್ಲಿ ಬಂಡಾಯ ಶಾಸಕರು :
ಏಕನಾಥ್ ಶಿಂಧೆ ಮತ್ತು ಇತರ ಶಾಸಕರು ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿದ್ದಾರೆ. ಈ ಶಾಸಕರ ಜೊತೆಯಲ್ಲಿ ಅಸ್ಸಾಂ ಸರ್ಕಾರದ ಕೆಲವು ಮಂತ್ರಿಗಳು ಇದ್ದಾರೆ ಎನ್ನಲಾಗಿದೆ. ಬಂಡಾಯ ಶಾಸಕರು ಹಾಗೂ ಬಿಜೆಪಿ ಸೇರಿ ಮಹಾರಾಷ್ಟದಲ್ಲಿ  ಸರ್ಕಾರ ರಚಿಸುವ ಮಾತು ಕೇಳಿ ಬರುತ್ತಿದೆ. 

ಇದನ್ನೂ ಓದಿ : ‘ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬೇಕೆ?’: ವಿವಾದಕ್ಕೆ ಎಡೆಮಾಡಿಕೊಟ್ಟ ನಾಗರಿಕ ಸೇವಾ ಪರೀಕ್ಷೆಯ ಪ್ರಶ್ನೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News