Vedha Teaser: ಶಿವಣ್ಣ ನಟನೆಯ ʻವೇದʼ ಸಿನಿಮಾ ಮೋಷನ್ ಪೋಸ್ಟರ್‌ ರಿಲೀಸ್‌, ಗೀತಾ ಪಿಕ್ಚರ್ ಅಧ್ಯಾಯ ಆರಂಭ

Vedha Teaser:  ಸೆಂಚೂರಿ ಸ್ಟಾರ್‌ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ ಸಿದ್ಧವಾಗುತ್ತಿದೆ. ಮಾಸ್‌ ಲುಕ್‌ನಿಂದಲೇ ಅಭಿಮಾನಿಗಳ ಮನಗೆದ್ದ ಶಿವಣ್ಣ, ದೊಡ್ಮನೆಯ ಹಿರಿಯ ಪುತ್ರ. ಈಗಾಗಲೇ 124 ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವರಾಜ್‌ ಕುಮಾರ್‌ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. 

Written by - Chetana Devarmani | Last Updated : Jun 23, 2022, 03:20 PM IST
  • ಸೆಂಚೂರಿ ಸ್ಟಾರ್‌ ಶಿವರಾಜ್ ಕುಮಾರ್
  • ಶಿವಣ್ಣನ 125ನೇ ಸಿನಿಮಾ ʻವೇದʼ
  • ಗೀತಾ ಪಿಕ್ಚರ್ ಅಧ್ಯಾಯ ಆರಂಭ
Vedha Teaser: ಶಿವಣ್ಣ ನಟನೆಯ ʻವೇದʼ ಸಿನಿಮಾ ಮೋಷನ್ ಪೋಸ್ಟರ್‌ ರಿಲೀಸ್‌, ಗೀತಾ ಪಿಕ್ಚರ್ ಅಧ್ಯಾಯ ಆರಂಭ title=
ವೇದ

Vedha Teaser: ಸೆಂಚೂರಿ ಸ್ಟಾರ್‌ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ ಸಿದ್ಧವಾಗುತ್ತಿದೆ. ಮಾಸ್‌ ಲುಕ್‌ನಿಂದಲೇ ಅಭಿಮಾನಿಗಳ ಮನಗೆದ್ದ ಶಿವಣ್ಣ, ದೊಡ್ಮನೆಯ ಹಿರಿಯ ಪುತ್ರ. ಈಗಾಗಲೇ 124 ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವರಾಜ್‌ ಕುಮಾರ್‌ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಶಿವರಾಜ್‌ ಕುಮಾರ್‌ ಅವರ ಮುಂದಿನ ಸಿನಿಮಾದ ಪೋಸ್ಟರ್‌ ಮತ್ತು ಟೀಸರ್‌ ರಿಲೀಸ್‌ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. 

ಇದನ್ನೂ ಓದಿ: ಇವತ್ತು ಅಥವಾ ನಾಳೆ ಡಿಸ್ಚಾರ್ಜ್: ನಟ ದಿಗಂತ್ ಆರೋಗ್ಯದ ಬಗ್ಗೆ ಭಾವುಕರಾದ ಪತ್ನಿ ಐಂದ್ರಿತಾ

ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್​ನ ವೈಟ್ ಪೆಟಲ್ಸ್​ನಲ್ಲಿ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ 'ವೇದ' ಚಿತ್ರದ ಟೀಸರ್ ರಿಲೀಸ್‌ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಇದೇ ವೇಳೆ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಪಿಕ್ಚರ್ ಲಾಂಚ್ ಕೂಡ ಮಾಡಲಾಯಿತು. 

ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ವೇದ. ಈ ಚಿತ್ರದ ಟೀಸರ್ ಇದೀಗ ರಿಲೀಸ್‌ ಆಗಿದ್ದು, ಇದರಲ್ಲಿ ಶಿವಣ್ಣನ ಲುಕ್‌ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ಅತ್ತೆ ಪಾರ್ವತಮ್ಮ ರಾಜ್ ಕುಮಾರ್ ರೀತಿ ಚಿತ್ರ ನಿರ್ಮಾಣದತ್ತ ಗೀತಾ ಶಿವರಾಜ್​ಕುಮಾರ್ ಮುನ್ನೆಡೆಯುತ್ತಿದ್ದಾರೆ. 

 

 

ಶಿವರಾಜ್‌ ಕುಮಾರ್‌ ಅಭಿನಯದ 125ನೇ ಚಿತ್ರ ವೇದ ಚಿತ್ರದ ಮೋಷನ್ ಪೋಸ್ಟರ್ ಅನ್ನು ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಡುಗಡೆ ಮಾಡಿದ್ದಾರೆ. ಹಿರಿಯ ನಟ ಅನಂತ್ ನಾಗ್ ಗೀತಾ ಪಿಕ್ಚರ್ಸ್ ಲೋಗೊ ಬಿಡುಗಡೆಗೊಳಿಸಿದ್ದಾರೆ. ನಿರ್ದೇಶಕ ಎ.ಹರ್ಷ ವೇದ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಭಜರಂಗಿ, ವಜ್ರಕಾಯ, ಭಜರಂಗಿ- 2 ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಅನುಭವ ಹರ್ಷ ಅವರಿಗಿದೆ. 

ಇದನ್ನೂ ಓದಿ: MS Dhoni: ಕ್ರಿಕೆಟಿಗ ಧೋನಿ ನಿರ್ಮಾಣದ ಮೊದಲ ಚಿತ್ರಕ್ಕೆ ದಳಪತಿ ವಿಜಯ್ ಹೀರೋ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News