Zodiac Sign: ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಅದು ನಮ್ಮನ್ನು ಕೆಟ್ಟ ದೃಷ್ಟಿ ಅಥವಾ ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎನ್ನಲಾಗುತ್ತದೆ. ಇನ್ನೊಂದೆಡೆ ಕೆಲವರು ಕಾಲು ನೋವು ಕಮ್ಮಿ ಮಾಡಿಕೊಳ್ಳಲು ಅದನ್ನು ತಮ್ಮ ಕಾಲಿಗೆ ಕಟ್ಟುತ್ತಾರೆ. ಹಲವು ಬಾರಿ ಗ್ರಹಗಳ ದೆಸೆ ಹಾಗೂ ರಾಶಿಗಳ ಆಧಾರದ ಮೇಲೆಯೂ ಕೂಡ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಕೆಲವರಿಗೆ ಹಾನಿಯೂ ಕೂಡ ಸಂಭವಿಸುತ್ತದೆ
ಎರಡು ರಾಶಿಗಳ ಜನರು ಅಪ್ಪಿತಪ್ಪಿಯೂ ಕೂಡ ತಮ್ಮ ಕಾಲುಗಳಿಗೆ ಕಪ್ಪುದಾರ ಕಟ್ಟಿಕೊಳ್ಳಬಾರದು. ಯಾವುದೇ ರೀತಿಯ ಯೋಚನೆ ಇಲ್ಲದೆಯೇ ಕಪ್ಪು ದಾರ ಧರಿಸಿದರೆ ಅದು ದುಬಾರಿಯಾಗಿ ಪರಿಣಮಿಸಲಿದೆ. ಹಾಗಾದರೆ ಬನ್ನಿ ಯಾವ ರಾಶಿಗಳ ಜನರು ಕಪ್ಪು ದಾರ ಧರಿಸಬಾರದು ಅಥವಾ ಯಾವ ರಾಶಿಗಳ ಜನರಿಗೆ ಕಪ್ಪುದಾರ ಧರಿಸುವುದು ಅಶುಭ ತಿಳಿದುಕೊಳ್ಳೋಣ,
ಈ ಎರಡು ರಾಶಿಗಳ ಜನರು ಕಪ್ಪು ದಾರ ಧರಿಸಬಾರದು
ವೃಶ್ಚಿಕ ರಾಶಿ- ವೃಶ್ಚಿಕ ರಾಶಿಗೆ ಮಂಗಳ ಅಧಿಪತಿ, ಮಂಗಳನ ಬಣ್ಣ ಕೆಂಪು. ಮಂಗಳ ದೇವನಿಗೆ ಕಪ್ಪು ಬಣ್ಣ ಇಷ್ಟವಾಗುವುದಿಲ್ಲ. ಹೀಗಾಗಿ ಈ ರಾಶಿಯ ಜನರು ಕಪ್ಪು ದಾರವನ್ನು ಧರಿಸಬಾರದು.
ಮೇಷ ರಾಶಿ- ಮೇಷ ರಾಶಿಗೂ ಕೂಡ ಮಂಗಳ ಅಧಿಪತಿ. ಈ ರಾಶಿಯ ಜನರು ಕಪ್ಪು ದಾರವನ್ನು ಧರಿಸಿದರೆ ಜೀವನದಲ್ಲಿ ಸಂಕಷ್ಟಗಳು ಹೆಚ್ಚಾಗುತ್ತವೆ ಎನ್ನಲಾಗುತ್ತದೆ. ಹೀಗಾಗಿ ಮೇಷ ರಾಶಿಯ ಜನರು ಕಪ್ಪು ದಾರ ಕಟ್ಟಿಕೊಳ್ಳುವ ತಪ್ಪು ಮಾಡಬಾರದು.
ಇದನ್ನೂ ಓದಿ-Morning Vastu Tips: ಈ ಕೆಲಸ ಮಾಡಿದ್ರೆ ಲಕ್ಷ್ಮಿದೇವಿಯ ಆಶೀರ್ವಾದದಿಂದ ಹಣದ ಮಳೆ..!
ಕಪ್ಪು ದಾರ ಕಟ್ಟಿಕೊಳ್ಳುವವರು ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು
>> ಶನಿವಾರದಂದು ಕಪ್ಪು ದಾರ ಕಟ್ಟಿಕೊಳ್ಳುವುದು ತುಂಬಾ ಮಂಗಳಕರ. ಹೀಗಾಗಿ ಕಪ್ಪು ದಾರ ಕಟ್ಟಿಕೊಳ್ಳುವಾಗ ದಿನ ಶನಿವಾರ ಇರಬೇಕು ಎಂಬುದನ್ನು ನೆನಪಿನಲ್ಲಿಡಿ.
>> ಕಪ್ಪು ದಾರವನ್ನು ಕಟ್ಟಿರುವ ಕೈಯಲ್ಲಿ ಬೇರೆ ಯಾವುದೇ ಬಣ್ಣದ ದಾರವನ್ನು ಕಟ್ಟಬಾರದು.
>> ದುಷ್ಟ ಶಕ್ತಿಗಳ ಮನೆ ಪ್ರವೇಶ ತಡೆಯಲು ನೀವು ಮನೆಯ ಬಾಗಿಲಿಗೆ ನಿಂಬೆಯೊಂದಿಗೆ ಕಪ್ಪು ದಾರವನ್ನು ಕಟ್ಟಬಹುದು.
>> ಮನೆಯ ಯಾವುದೇ ಸದಸ್ಯರ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ, ಶನಿವಾರದಂದು ಸಿಂಧೂರವನ್ನು ಹಚ್ಚಿ, ಹನುಮಂತನ ಪಾದಕ್ಕೆ ಕಪ್ಪು ದಾರ ಕಟ್ಟಿ, ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ.
ಇದನ್ನೂ ಓದಿ-Horoscope Today: ಈ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು
>> ಕಪ್ಪು ದಾರದ ಮೇಲೆ ಒಂಬತ್ತು ಗಂಟುಗಳನ್ನು ಹಾಕಬೇಕು. ಅದರ ನಂತರ ಮಂತ್ರಗಳನ್ನು ಪಠಿಸುವ ಮೂಲಕ ಅದನ್ನು ಧರಿಸಬೇಕು.
>> ಕಪ್ಪು ದಾರವನ್ನು ಧರಿಸಿದ ನಂತರ, ಶನಿ ದೇವನ ಮಂತ್ರವನ್ನು ಕನಿಷ್ಠ 21 ಬಾರಿ ಪಠಿಸಬೇಕು.
>> ಹಣದ ಬಿಕ್ಕಟ್ಟನ್ನು ನಿವಾರಿಸಲು ಅಥವಾ ಆರ್ಥಿಕವಾಗಿ ಬಲಶಾಲಿಯಾಗಲು ಬಯಸುವವರು, ಮಂಗಳವಾರ, ಬಲಗಾಲಿಗೆ ಕಪ್ಪು ದಾರವನ್ನು ಕಟ್ಟಬೇಕು.
>> ಹೊಟ್ಟೆನೋವಿನ ಸಮಸ್ಯೆ ಇರುವವರು ಕಾಲ್ಬೆರಳಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು.
ಇದನ್ನೂ ನೋಡಿ-
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.