ಶಾರುಖ್ ಖಾನ್‌ ಜೊತೆಗಿನ ಲೈಂಗಿಕ ಸಂಬಂಧದ ವದಂತಿಯ ಬಗ್ಗೆ ಕರಣ್ ಜೋಹರ್ ಹೇಳಿದ್ದೇನು?

Karan Johar: ಅನೇಕ ವರ್ಷಗಳಿಂದ, ಶಾರುಖ್ ಖಾನ್ ಮತ್ತು ಕರಣ್‌ ಜೋಹರ್‌ ಮಧ್ಯೆ ಲೈಂಗಿಕ ಸಂಬಂಧವಿದೆ ಎಂಬ ವದಂತಿಗಳಿವೆ. ಇದೀಗ ಕರಣ್ ಜೋಹರ್ ತಮ್ಮ ಆತ್ಮಚರಿತ್ರೆ 'ಅನ್ ಸೂಟಬಲ್ ಬಾಯ್' ನಲ್ಲಿ ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

Written by - Chetana Devarmani | Last Updated : Jun 27, 2022, 01:04 PM IST
  • ಬಾಲಿವುಡ್‌ ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌
  • ಶಾರುಖ್-ಕರಣ್‌ ಲೈಂಗಿಕ ಸಂಬಂಧದ ವದಂತಿ
  • ವದಂತಿಯ ಬಗ್ಗೆ ಕರಣ್ ಜೋಹರ್ ಹೇಳಿದ್ದೇನು?
ಶಾರುಖ್ ಖಾನ್‌ ಜೊತೆಗಿನ ಲೈಂಗಿಕ ಸಂಬಂಧದ ವದಂತಿಯ ಬಗ್ಗೆ ಕರಣ್ ಜೋಹರ್ ಹೇಳಿದ್ದೇನು? title=
ಕರಣ್‌ ಜೋಹರ್‌

ಬಾಲಿವುಡ್‌ ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಆಗಾಗ್ಗೆ ಲೈಂಗಿಕತೆಯ ಕಾರಣದಿಂದ ಚರ್ಚೆಯಲ್ಲಿರುತ್ತಾರೆ. ಅನೇಕ ವರ್ಷಗಳಿಂದ, ಶಾರುಖ್ ಖಾನ್ ಮತ್ತು ಕರಣ್‌ ಜೋಹರ್‌ ಮಧ್ಯೆ ಲೈಂಗಿಕ ಸಂಬಂಧವಿದೆ ಎಂಬ ವದಂತಿಗಳಿವೆ. ಇದೀಗ ಕರಣ್ ಜೋಹರ್ ತಮ್ಮ ಆತ್ಮಚರಿತ್ರೆ 'ಅನ್ ಸೂಟಬಲ್ ಬಾಯ್' ನಲ್ಲಿ ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಇದನ್ನೂ ಓದಿ: Pathaan: ‘ಕನ್ನಡ’ ಕಡೆಗಣಿಸಿದ ಶಾರುಖ್ ಖಾನ್‌ಗೆ ಕನ್ನಡಿಗರಿಂದ ತಿರುಗೇಟು..!

ಶಾರುಖ್‌ ಖಾನ್‌ ಮತ್ತು ಕರಣ್‌ ಜೋಹರ್‌ ಒಟ್ಟಾಗಿ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇಬ್ಬರು ಸ್ಟಾರ್‌ಗಳ ನಡುವೆಯೂ ಉತ್ತಮ ಸ್ನೇಹ ಇರುವುದು ನಿಜ. ಆದರೆ ಅನೇಕರು ಇದನ್ನು ಬೇರೆ ರೀತಿಯಲ್ಲಿ ಬಿಂಬಿಸಿರುವುದು ಇದೆ. 

ಶಾರುಖ್ ಜೊತೆ ಡೇಟಿಂಗ್ ಕುರಿತು ಈ ವದಂತಿಗಳು ತನ್ನನ್ನು ಹೇಗೆ ಆಳವಾಗಿ ಪ್ರಭಾವಿಸಿದವು ಎಂಬುದರ ಕುರಿತು ಕರಣ್ ತಮ್ಮ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಅವರ ಬಹುತೇಕ ಎಲ್ಲಾ ಹಿಟ್ ಸಿನಿಮಾಗಳನ್ನು ನಿರ್ಮಿಸಿದ ಕೀರ್ತಿ ಕರಣ್‌ ಜೋಹರತ್‌ ಅವರದ್ದು.

ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ 'ಅನ್ ಸೂಟಬಲ್ ಬಾಯ್' ಎಂಬ ಪುಸ್ತಕ ಹೊರತಂದಿದ್ದಾರೆ. ಅದರಲ್ಲಿ, "ನನ್ನ ಜೀವನದಲ್ಲಿ ನಾನು ಅನೇಕ ನಿಂದೆಗಳನ್ನು ಸಹಿಸಿಕೊಂಡಿದ್ದೇನೆ. ಆದರೆ  ಶಾರುಖ್ ಖಾನ್ ಜೊತೆ ಸಂಬಂಧವಿದೆ ಎಂಬ ಸುದ್ದಿ ಮಾತ್ರ ನನ್ನ ಮನಸ್ಸಿಗೆ ತುಂಬಾ ದುಃಖ ನೀಡಿದೆ. ಶಾರುಖ್ ನನಗೆ ತಂದೆಯಂತೆ" ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: "Our baby coming soon.." ತಾಯಿಯಾಗ್ತಿದ್ದಾರೆ ಆಲಿಯಾ ಭಟ್‌! ಫೋಟೋ ಮೂಲಕ ಸೀಕ್ರೇಟ್‌ ರಿವೀಲ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ..

Trending News