ಇಂದು ದಕ್ಷಿಣ ಇರಾನ್‌ನಲ್ಲಿ ಸಂಭವಿಸಿದ 6.3 ತೀವ್ರತೆಯ ಭೂಕಂಪದಲ್ಲಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸುಮಾರು 44 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿ ಟೆಹ್ರಾನ್‌ನಿಂದ ದಕ್ಷಿಣಕ್ಕೆ ಸುಮಾರು 1,000 ಕಿಲೋಮೀಟರ್ ದೂರದಲ್ಲಿರುವ ಸಯೆಹ್ ಖೋಶ್ ಗ್ರಾಮದಲ್ಲಿ ಭೂಕಂಪದ ಕೇಂದ್ರಬಿಂದು ಇದೆ ಎಂದು ಇರಾನ್‌ನ ಸರ್ಕಾರಿ ಟೆಲಿವಿಷನ್ ಚಾನೆಲ್ ಹೇಳಿದೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ಮರಳಿದ ಈ ಲೆಜೆಂಡರಿ ಬ್ಯಾಟ್ಸ್‌ಮನ್!
ಭೂಕಂಪ ಸಂಭವಿಸಿದ ನಂತರ ಗ್ರಾಮದಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಹೊರ್ಮೊಜ್ಗಾನ್ ಪ್ರಾಂತ್ಯದ ಈ ಗ್ರಾಮದಲ್ಲಿ ಸುಮಾರು 300 ಜನರು ವಾಸಿಸುತ್ತಿದ್ದರು. ಇಂದು ಮುಂಜಾನೆ ಸಂಭವಿಸಿದ ಭೂಕಂಪನದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಭೂಕಂಪನದ ಅನುಭವವು ನೆರೆಯ ಹಲವಾರು ದೇಶಗಳಲ್ಲಿಯೂ ಕಂಡುಬಂದಿದೆ ಎಂದು ಚಾನೆಲ್ ವರದಿ ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಇತ್ತೀಚಿನ ವಾರದಲ್ಲಿ ಈ ಪ್ರದೇಶದಲ್ಲಿ ಹಲವಾರು ಸಣ್ಣ ಭೂಕಂಪಗಳು ಸಂಭವಿಸಿವೆ. ನವೆಂಬರ್‌ನಲ್ಲಿ ಇದೇ ಪ್ರದೇಶದಲ್ಲಿ 6.4 ಮತ್ತು 6.3 ತೀವ್ರತೆಯ ಭೂಕಂಪಗಳು ಸಂಭವಿಸಿದ್ದವು. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ. ಇರಾನ್ ರಾಷ್ಟ್ರದಲ್ಲಿ ಭೂಕಂಪ ಸಂಭವಿಸುತ್ತಲೇ ಇರುತ್ತದೆ.
2003 ರಲ್ಲಿ ಐತಿಹಾಸಿಕ ನಗರವಾದ ಬಾಮ್‌ನಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿ 26,000 ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ, 2017 ರಲ್ಲಿ ಪಶ್ಚಿಮ ಇರಾನ್‌ನಲ್ಲಿ 7 ತೀವ್ರತೆಯ ಭೂಕಂಪ ಸಂಭವಿಸಿ 600 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಸುಮಾರು 9,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ʼಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಇರಲ್ಲ!ʼ
ಅಫ್ಘಾನಿಸ್ತಾನದಲ್ಲಿ ಭೂಕಂಪನ:
ಕಳೆದ ವಾರ ಅಫ್ಘಾನಿಸ್ತಾನದಲ್ಲಿಯೂ ತೀವ್ರ ಭೂಕಂಪ ಸಂಭವಿಸಿತ್ತು. 6.1 ತೀವ್ರತೆಯ ಭೂಕಂಪನ ಸಂಭವಿಸಿ ಅಫ್ಘಾನಿಸ್ತಾನದಲ್ಲಿ ಭಾರಿ ವಿನಾಶಕ್ಕೆ ಕಾರಣವಾಯಿತು. ಘಟನೆಯಿಂದಾಗಿ ಸುಮಾರು 1 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅನೇಕರು ಜನರು ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ, ಹೆಚ್ಚಿನ ಸಂಖ್ಯೆಯ ಕಟ್ಟಡಗಳು ನಾಶವಾಗಿದ್ದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ