ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು, ಮೂರು ಪಂದ್ಯಗಳು ಈಗಾಗಲೇ ಕೊನೆಗೊಂಡಿದೆ. ಸದ್ಯ ಭಾರತ ತಂಡ 257 ರನ್‌ಗಳ ಮುನ್ನಡೆ ಸಾಧಿಸಿದ್ದು, ಇನ್ನೂ ಎರಡು ಪಂದ್ಯಗಳು ನಡೆಯಲಿವೆ. ಸದ್ಯ ಟೀಂ ಇಂಡಿಯಾದ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಕಳೆದ ಪಂದ್ಯದಲ್ಲಿ ನಾಯಕ ಜಸ್ಪ್ರೀತ್ ಬೂಮ್ರಾ ಅದ್ಭುತ ಆಟವಾಡಿದ್ದಾರೆ. ಜೊತೆಗೆ ರಿಷಬ್ ಪಂತ್ (146) ಮತ್ತು ರವೀಂದ್ರ ಜಡೇಜಾ (104) ಶತಕ ಬಾರಿಸಿದ್ದು ಟೀಂ ಇಂಡಿಯಾದ ಮುನ್ನಡೆಗೆ ಕಾರಣವಾಗಿದೆ.
ಇನ್ನು ಕಳೆದ ದಿನ ನಡೆದ ಪಂದ್ಯದಲ್ಲಿ ಈ ಆಟಗಾರ ಅರ್ಧಶತಕ ಬಾರಿಸಿದ್ದು, 36 ವರ್ಷಗಳ ಬಳಿಕ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ. ಫಾರ್ಮ್‌ಗೆ ಮರಳಿರುವ ಈ ಆಟಗಾರನಿಗೆ ಅಂಗಣದಲ್ಲಿ ಉಳಿದುಕೊಂಡು ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದು ಅದ್ಭುತವಾಗಿ ತಿಳಿದಿದೆ. ಈತ ಬೇರೆ ಯಾರೂ ಅಲ್ಲ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ.
ಇದನ್ನೂ ಓದಿ: Vegetable Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದು ತರಕಾರಿ ಬೆಲೆ ಹೀಗಿದೆ
ಇಂಗ್ಲೆಂಡ್ ವಿರುದ್ಧದ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ ತಮ್ಮ ಬ್ಯಾಟಿಂಗ್ ಕಲೆಯಿಂದ ಎಲ್ಲರ ಮನೆಗೆದ್ದಿದ್ದಾರೆ. ಶುಭಮನ್ ಗಿಲ್ ಮತ್ತು ಹನುಮ ವಿಹಾರಿ ಕ್ರೀಸ್‌ನಿಂದ ಪೆವಿಲಿಯನ್ ಕಡೆಗೆ ಅತೀ ಬೇಗವೇ ತೆರಳಿದರು. ಈ ಸಂದರ್ಭಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ ಪೂಜಾರ ಅರ್ಧಶತಕ ಸಿಡಿಸಿ ತಂಡದ ಮುನ್ನಡೆಗೆ ಕಾರಣರಾದರು. ಚೇತೇಶ್ವರ ಪೂಜಾರ 139 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 50 ರನ್ ಬಾರಿಸಿದ್ದಾರೆ.
ಕಳೆದ ಕೆಲ ಸಮಯದಿಂದ ಚೇತೇಶ್ವರ ಪೂಜಾರ ಕಳಪೆ ಫಾರ್ಮ್‌ನಲ್ಲಿ ಹೋರಾಡುತ್ತಿದ್ದರು. ಈ ಕಾರಣದಿಂದಲೇ ಅವರಿಗೆ ಶ್ರೀಲಂಕಾ ಸರಣಿಯಲ್ಲಿ ಸ್ಥಾನ ನೀಡಿರಲಿಲ್ಲ. ಆದರೆ ಇದೀಗ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಚೇತೇಶ್ವರ ಪೂಜಾರ ಫಾರ್ಮ್‌ಗೆ ಮರಳಿರುವುದು ಭಾರತ ತಂಡಕ್ಕೆ ಶುಭ ಸೂಚನೆ ಎನ್ನಬಹುದು. ಒಂದು ಬಾರಿ ಪೂಜಾರ ಕ್ರೀಸ್‌ನಲ್ಲಿ ಉಳಿದರೆ, ಆತನನ್ನು ಔಟ್ ಮಾಡುವುದು ಅಷ್ಟು ಸುಲಭವಲ್ಲ.
ಚೇತೇಶ್ವರ್ ಪೂಜಾರ ಟೀಂ ಇಂಡಿಯಾದ ಪರವಾಗಿ ಹಲವು ಪಂದ್ಯಗಳಲ್ಲಿ ಆಟವಾಡಿದ್ದಾರೆ. ಜೊತೆಗೆ ಅನೇಕ ಪಂದ್ಯಗಳ ಗೆಲುವಿಗೆ ಕಾರಣವಾಗಿದ್ದಾರೆ. ಚೇತೇಶ್ವರ ಪೂಜಾರ ಭಾರತ ಪರ 95 ಟೆಸ್ಟ್ ಪಂದ್ಯಗಳಲ್ಲಿ 6713 ರನ್ ಗಳಿಸಿದ್ದಾರೆ. ಜೊತೆಗೆ 5 ಒಡಿಐಗಳಲ್ಲಿ 155 ರನ್ ಸಿಡಿಸಿದ್ದಾರೆ. ಪೂಜಾರ 36 ವರ್ಷಗಳ ನಂತರ ಎಡ್ಜ್‌ಬಾಸ್ಟನ್‌ನಲ್ಲಿ ಅರ್ಧಶತಕ ಗಳಿಸಿದ ಭಾರತದ ಎರಡನೇ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅನುಭವಿ ಸುನಿಲ್ ಗವಾಸ್ಕರ್ 1986ರಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ರಿಷಬ್ ಪಂತ್ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಶತಕ ಬಾರಿಸಿದ್ದಾರೆ.
ಮೂರನೇ ದಿನವೂ ಸಹ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಭಾರತದ ಬೌಲರ್‌ಗಳ ಅದ್ಭುತ ಪ್ರದರ್ಶನಕ್ಕೆ ತತ್ತರಿಸಿದ ಇಂಗ್ಲೆಂಡ್ ಕೇವಲ 284 ರನ್ ಗಳಿಸಿ ಆಲೌಟ್ ಆಗಿದೆ. ಭಾರತಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಸಿಕ್ಕಿತ್ತು. ಇದಾದ ಬಳಿಕ ಚೇತೇಶ್ವರ ಪೂಜಾರ 50 ಹಾಗೂ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ 30 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಈ ಮೂಲಕ 257 ರನ್‌ಗಳ ಮುನ್ನಡೆ ಸದ್ಯ ಇದೆ.
ಇದನ್ನೂ ಓದಿ: CBSE 10th Result 2022- ಆನ್‌ಲೈನ್, ಡಿಜಿಲಾಕರ್, ಎಸ್‌ಎಂಎಸ್ ಮೂಲಕ ಈ ರೀತಿ ಪರಿಶೀಲಿಸಿ
ಮೊಹಮ್ಮದ್ ಸಿರಾಜ್ 4, ಜಸ್ಪ್ರೀತ್ ಬುಮ್ರಾ 3 ಮತ್ತು ಮೊಹಮ್ಮದ್ ಶಮಿ 2 ವಿಕೆಟ್‌ಗಳನ್ನು ಪಡೆದಿದ್ದಾರೆ. ಶಾರ್ದೂಲ್ ಠಾಕೂರ್ ಒಂದು ವಿಕೆಟ್ ಕಬಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.