Twitter vs Modi Govt: ಕೇಂದ್ರದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಬಾಗಿಲು ತಟ್ಟಿದ ಟ್ವಿಟರ್!

ಅಧಿಕಾರ ದುರುಪಯೋಗದ ಆರೋಪದ ಮೇಲೆ ಟ್ವಿಟರ್ ಅಧಿಕಾರಿಗಳು ಕೇಂದ್ರ ರ್ಕಾರದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ಮೋದಿ ಸರ್ಕಾರ ಮತ್ತು ಅಮೆರಿಕ ಮೂಲದ ಸಾಮಾಜಿಕ ಮಾಧ್ಯಮ ಕಂಪನಿಯ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ.   

Written by - Puttaraj K Alur | Last Updated : Jul 5, 2022, 08:45 PM IST
  • ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಮತ್ತು ಭಾರತ ಸರ್ಕಾರದ ನಡುವೆ ಮತ್ತೆ ಸಂಘರ್ಷ
  • ಕೆಲವು ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕಬೇಕೆಂಬ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿದ US ಕಂಪನಿ
  • ಕರ್ನಾಟಕ ಹೈಕೋರ್ಟ್ ಬಾಗಿಲು ತಟ್ಟಿದ ಟ್ವಿಟರ್‍ನಿಂದ ಕೇಂದ್ರದ ವಿರುದ್ಧ ಮೊಕದ್ದಮೆ
Twitter vs Modi Govt: ಕೇಂದ್ರದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಬಾಗಿಲು ತಟ್ಟಿದ ಟ್ವಿಟರ್! title=
Twitter vs Modi Govt

ಬೆಂಗಳೂರು: ಅಮೆರಿಕದ ಮೈಕ್ರೋ ಬ್ಲಾಗಿಂಗ್ ಕಂಪನಿ ಟ್ವಿಟರ್ ಮತ್ತು ಭಾರತ ಸರ್ಕಾರದ ನಡುವೆ ಮತ್ತೆ ಸಂಘರ್ಷ ಶುರುವಾಗಿದೆ. ಕೆಲವು ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕಬೇಕೆಂಬ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಟ್ವಿಟರ್ ಕರ್ನಾಟಕ ಹೈಕೋರ್ಟ್‍ನ ಬಾಗಿಲು ತಟ್ಟಿದೆ. ಅಧಿಕಾರ ದುರುಪಯೋಗದ ಆರೋಪದ ಮೇಲೆ ಟ್ವಿಟರ್ ಅಧಿಕಾರಿಗಳು ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಇದು ಸರ್ಕಾರ ಮತ್ತು ಅಮೆರಿಕ ಮೂಲದ ಸಾಮಾಜಿಕ ಮಾಧ್ಯಮ ಕಂಪನಿಯ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ. 

ಟ್ವಿಟರ್‍ನೊಂದಿಗೆ ಸರ್ಕಾರದ ಸಂಗ್ರಾಮ!

ಇತ್ತೀಚೆಗಷ್ಟೇ ಕೆಲವು ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕಬೇಕು ಇಲ್ಲವೇ ಕ್ರಿಮಿನಲ್ ಕ್ರಮ ಎದುರಿಸಬೇಕೆಂದು ಕೇಂದ್ರ ಸರ್ಕಾರ ಟ್ವಿಟರ್‍ಗೆ ಸೂಚಿಸಿತ್ತು. ನೂರಾರು ಖಾತೆಗಳು ಮತ್ತು ಟ್ವೀಟ್‌ಗಳನ್ನು ತೆಗೆದುಹಾಕಲು ಸರ್ಕಾರವು Twitter ಬಳಿ ಕೇಳಿತ್ತು. ಜುಲೈ 4ರೊಳಗೆ ಈ ಆದೇಶ ಪಾಲಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ಜೂನ್ 6ರಂದು ಟ್ವಿಟರ್‌ಗೆ ನೋಟಿಸ್ ಕಳುಹಿಸಲಾಗಿತ್ತು. ಜೂನ್ 9ರಂದು ಕಳುಹಿಸಿದ ಮತ್ತೊಂದು ನೋಟಿಸ್‍ಗೂ ಟ್ವಿಟರ್ ಕ್ಯಾರೆ ಎಂದಿಲ್ಲ. ಟ್ವಿಟರ್ ನಿಯಮ ಉಲ್ಲಂಘನೆ ಮುಂದುವರೆಸಿದರೆ ಹೊಸ ಐಟಿ ನಿಯಮಗಳಡಿ ಮಧ್ಯವರ್ತಿಯಾಗಿ ತಮ್ಮ ರಕ್ಷಣೆಯನ್ನು ಕಳೆದುಕೊಳ್ಳಬಹುದು ಎಂದು ಕೇಂದ್ರವು ಹೇಳಿತ್ತು. ತನ್ನ ಅಂತಿಮ ಸೂಚನೆಯನ್ನು ಅನುಸರಿಸಲು ಟ್ವಿಟರ್ ವಿಫಲವಾದರೆ ಅದು ಮಧ‍್ಯವರ್ತಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಲಾಗಿತ್ತು.    

ಇದನ್ನೂ ಓದಿ: ಛತ್ತೀಸ್‌ಗಡ ಪೊಲೀಸರಿಂದ ಜೀ ನ್ಯೂಸ್ ನಿರೂಪಕನ ಮನೆ ಮೇಲೆ ದಾಳಿ: ಬಂಧನಕ್ಕೆ ಯತ್ನ!

80ಕ್ಕೂ ಹೆಚ್ಚು ಟ್ವೀಟ್‌ಗಳು & ಖಾತೆಗಳನ್ನು ತೆಗೆದುಹಾಕಲು ಆದೇಶ

ಡೇಟಾಬೇಸ್‌ಗೆ ಅಪ್‌ಲೋಡ್ ಮಾಡಿದ ದಾಖಲೆಯ ಪ್ರಕಾರ, ರೈತ ಕಾರ್ಯಕರ್ತರು, ಪಾಕಿಸ್ತಾನಿ ಸುದ್ದಿವಾಹಿನಿಗಳು, ಪತ್ರಕರ್ತರು ಮತ್ತು ವಿರೋಧ ಪಕ್ಷದ ಸದಸ್ಯರು ಸೇರಿದಂತೆ 2021ರಲ್ಲಿ ಸುಮಾರು 85 ಟ್ವಿಟರ್ ಖಾತೆಗಳು ಮತ್ತು ಆಕ್ಷೇಪಾರ್ಹ ಟ್ವೀಟ್‌ಗಳನ್ನು ತೆಗೆದುಹಾಕಲು ಐಟಿ ಸಚಿವಾಲಯ ಟ್ವಿಟರ್‌ಗೆ ಸೂಚಿಸಿತ್ತು.

ಈ ಕ್ರಮ ಏಕೆ..?

ಈ ಆದೇಶಗಳನ್ನು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಹೊರಡಿಸಲಾಗಿದೆ ಮತ್ತು ಹೆಚ್ಚಾಗಿ ಅನುಸರಿಸಲಾಗಿದೆ. ಆಕ್ಷೇಪಾರ್ಹ ಟ್ವೀಟ್‍ಗಳ್ನು ಮತ್ತು ಟ್ವಿಟರ್ ಖಾತೆಗಳನ್ನು ‘ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ತಡೆಹಿಡಿಯಲಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿತ್ತು.   

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಲಾಲು ಪ್ರಸಾದ್ ಯಾದವ್‌ಗೆ ಚಿಕಿತ್ಸೆ: ಮಗಳಿಂದ ಭಾವುಕ ಪೋಸ್ಟ್‌

ಟ್ವಿಟರ್ ಪ್ರತಿಕ್ರಿಯೆ

ಇದಕ್ಕೆ ಪ್ರತಿಯಾಗಿ ಕಳೆದ ವರ್ಷ ಫೆಬ್ರವರಿಯಲ್ಲಿ ಟ್ವಿಟರ್ ಕಂಪನಿಯು, ‘ನಾವು ತೆಗೆದುಕೊಳ್ಳುವಂತೆ ನಿರ್ದೇಶಿಸಿದ ಕ್ರಮವು ಭಾರತೀಯ ಕಾನೂನಿಗೆ ಅನುಗುಣವಾಗಿದೆ ಮತ್ತು ನಮ್ಮ ತತ್ವಗಳಿಗೆ ಅನುಗುಣವಾಗಿದೆ. ಸಂರಕ್ಷಿತ ಮಾತು ಮತ್ತು ಅಭಿವ್ಯಕ್ತಿಯನ್ನು ರಕ್ಷಿಸಲು, ಸುದ್ದಿ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳನ್ನು ಒಳಗೊಂಡಿರುವ ಖಾತೆಗಳ ಮೇಲೆ ನಾವು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೆ ಮಾಡುವುದು ಭಾರತೀಯ ಕಾನೂನಿನ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನಾವು ನಂಬುತ್ತೇವೆ’ ಎಂದು ಹೇಳಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News