ಉತ್ತರ ಪ್ರದೇಶದ ಫತೇಪುರದ ಕೊತ್ವಾಲಿ ಪ್ರದೇಶದಲ್ಲಿ ಅತಿ ವೇಗವಾಗಿ ಆಟೋ ಒಂದು ಚಲಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ವಾಹನವನ್ನು ತಡೆದ ಪೊಲೀಸರು ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ ಕೇಳಿದರೆ, ನೀವೂ ಸಹ ಆಘಾತಕ್ಕೆ ಒಳಗಾಗುತ್ತೀರಿ. ಹೌದು 3 ಸೀಟ್‌ನ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬರೋಬ್ಬರಿ 27 ಮಂದಿಯನ್ನು ಕಂಡು ಪೊಲೀಸರು ದಂಗಾಗಿದ್ದಾರೆ.
ಇದನ್ನೂ ಓದಿ: ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಈ 4 ಆಪ್‌ಗಳಿದ್ದರೆ ತಕ್ಷಣವೇ ಡಿಲೀಟ್ ಮಾಡಿ
ಯುವಕರು, ವೃದ್ಧರು ಮತ್ತು ಮಕ್ಕಳು ಸೇರಿ ಒಟ್ಟು 27 ಮಂದಿ ಒಂದೇ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಈ ಆಟೋ ಅತೀ ವೇಗವಾಗಿ ಬರುತ್ತಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಿಕ್ಷಾವನ್ನು ತಡೆದಿದ್ದು, ಆಗ ವಿಚಾರ ಬೆಳಕಿಗೆ ಬಂದಿದೆ. ಇನ್ನು ಆಟೋದಿಂದ ಒಬ್ಬರೊಬ್ಬರೇ ಇಳಿದು ಬರುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಸದ್ಯ ಆ ವಿಡಿಯೋ ಸಖತ್ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ.
Watch this
During a checking drive, Bindiki police of Fatehpur district caught a #TukTuk (auto-rickshaw), which was ferrying 27 including driver on Sunday. #UttarPradesh pic.twitter.com/SjS6Qa252l
— Arvind Chauhan अरविंद चौहान (@Arv_Ind_Chauhan) July 11, 2022
ಇದನ್ನೂ ಓದಿ: ನ್ಯಾಯಾಂಗ ನಿಂದನೆ ಪ್ರಕರಣ: ವಿಜಯ್ ಮಲ್ಯಗೆ ಸಂಕಷ್ಟ, ಜೈಲುವಾಸ ಕನ್ಫರ್ಮ್
ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಬಿಂಡ್ಕಿ ಕೊತ್ವಾಲಿ ಬಳಿ ಈ ಆಟೋ ಅತೀ ವೇಗವಾಗಿ ಬರುವುದನ್ನು ಪೊಲೀಸರು ನೋಡಿದ್ದಾರೆ. ಈ ಹಿನ್ನೆಲೆಯಲ್ಲಿ ರಿಕ್ಷಾವನ್ನು ಹಿಂಬಾಲಿಸಿದ ಪೊಲೀಸರು, ತಡೆದು ನಿಲ್ಲಿಸಿದ್ದಾರೆ. ಬಳಿಕ ಪ್ರಯಾಣಿಕರನ್ನು ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಈ ವೇಳೆ ಬರೋಬ್ಬರಿ 27 ಮಂದಿ ಆಟೋದಿಂದ ಒಬ್ಬರೊಬ್ಬರೇ ಇಳಿಯುವುದನ್ನು ಕಂಡ ಪೊಲೀಸರು ಒಂದು ಬಾರಿ ದಿಗ್ಭ್ರಾಂತರಾಗಿದ್ದಾರೆ. ಚಾಲಕ ಸೇರಿದಂತೆ ಎಲ್ಲರೂ ಆಟೋದಲ್ಲಿ ಕಷ್ಟಪಟ್ಟುಕೊಂಡು ಪ್ರಯಾಣಿಸುತ್ತಿದ್ದರು. ಸದ್ಯ ಪೊಲೀಸರು ಆಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ