ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುವ ಸೂಪರ್ ಫುಡ್ ಗಳಿವು.. !

ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸುವುದು ಹೇಗೆ ? ಈ ಕೆಳಗೆ ಹೇಳಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ ದೇಹದಲ್ಲಿನ ರಕ್ತದ ಸಮಸ್ಯೆಯನ್ನು ನೀಗಿಸಬಹುದು. 

Written by - Ranjitha R K | Last Updated : Jul 20, 2022, 12:15 PM IST
  • ಮಹಿಳೆಯರಲ್ಲಿ ರಕ್ತದ ಕೊರತೆ ಸಮಸ್ಯೆ ಹೆಚ್ಚಾಗಿರುತ್ತದೆ
  • ರಕ್ತದ ಕೊರತೆ ನೀಗಿಸಲು ಈ ಆಹಾರ ಸೇವಿಸಿ
  • ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳು
ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುವ ಸೂಪರ್ ಫುಡ್ ಗಳಿವು.. ! title=
best food for himoglobin (file photo)

ಬೆಂಗಳೂರು :  ಉತ್ತಮ ಆಹಾರವನ್ನು ಸೇವಿಸದ ತೆಗೆದುಕೊಳ್ಳದ ಕಾರಣ,  ದೇಹದಲ್ಲಿ ರಕ್ತದ ಕೊರತೆ ಎದುರಾಗುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ವಾಹನ ಓಡಲು ಹೇಗೆ ಪೆಟ್ರೋಲ್ ಅಗತ್ಯವಿದೆಯೋ ಹಾಗೆಯೇ ಮಾನವ ದೇಹಕ್ಕೆ ರಕ್ತದ ಅವಶ್ಯಕತೆ ಇರುತ್ತದೆ.  ದೇಹದಲ್ಲಿ ರಕ್ತದ ಕೊರತೆ ಕಾಣಿಸಿಕೊಂಡರೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಲೆಸುತ್ತುವುದು, ಆಲಸ್ಯ  ಏನೂ ಕೆಲಸ ಮಾಡದೇ ಹೋದರೂ ದಣಿವಾಗುವುದು ಹೀಗೆ ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೆ ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸುವುದು ಹೇಗೆ ? ಈ ಕೆಳಗೆ ಹೇಳಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ ದೇಹದಲ್ಲಿನ ರಕ್ತದ ಸಮಸ್ಯೆಯನ್ನು ನೀಗಿಸಬಹುದು. 

ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳು :
ರಕ್ತದ ಕೊರತೆಯಿಂದ ದೇಹದಲ್ಲಿ ದೌರ್ಬಲ್ಯ ಕಂಡು ಬರಲು ಆರಂಭವಾಗುತ್ತದೆ. ಇದಕ್ಕೆ ನಿಜವಾದ ಕಾರಣ ಐರನ್ ಕೊರತೆ. ಇದರಿಂದಾಗಿ ತಲೆಸುತ್ತುವುದು, ಕೈಕಾಲು ನಡುಕ ಮುಂತಾದ ಸಮಸ್ಯೆಗಳು  ಎದುರಾಗುತ್ತವೆ. ಹೀಗಾದಾಗ ಖರ್ಜೂರವನ್ನು ಸೇವಿಸಬೇಕು. 1 ತಿಂಗಳ ಕಾಲ ನಿತ್ಯ ಖರ್ಜೂರ ತಿನುತ್ತಾ ಬಂದರೆ ದೇಹದಲ್ಲಿನ  ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸಬಹುದು. ಏಕೆಂದರೆ ಖರ್ಜೂರದಲ್ಲಿ ಜೀವಸತ್ವಗಳು, ಖನಿಜಗಳು, ಪ್ರೋಟೀನ್ ಮತ್ತು ಫೈಬರ್ ಹೇರಳವಾಗಿರುತ್ತವೆ. 

ಇದನ್ನೂ ಓದಿ : ಒಂದು ಚಮಚ ತುಪ್ಪಕ್ಕೆ ಈ ಎರಡು ವಸ್ತುಗಳನ್ನು ಬೆರೆಸಿ ಸೇವಿಸಿದರೆ ಈ ಸಮಸ್ಯೆಗಳಿಗೆ ಸಿಗುವುದು ಮುಕ್ತಿ

ಒಣದ್ರಾಕ್ಷಿ ತಿನ್ನುವುದರಿಂದ ಆಗುವ ಪ್ರಯೋಜನಗಳು :
ಒಣದ್ರಾಕ್ಷಿಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಬೆಳಿಗ್ಗೆ ಜ್ಯೂಸ್ ನೊಂದಿಗೆ ಸೇವಿಸಬಹುದು. ರಾತ್ರಿ ನೆನೆಸಿಟ್ಟ ಒಣ ದ್ರಾಕ್ಷಿಯನ್ನು  ಬೆಳಿಗ್ಗೆ ಓಟ್ಸ್ನೊಂದಿಗೆ ಅಥವಾ ಖಾಲಿ ಹೊಟ್ಟೆಯಲ್ಲಿ  ತಿನ್ನಬಹುದು. ಒಣದ್ರಾಕ್ಷಿಗಳಲ್ಲಿ ಸುಮಾರು 3.3 ಗ್ರಾಂ ಫೈಬರ್ ಕಂಡುಬರುತ್ತದೆ. ಇದು ಕರುಳಿನ ಸಮಸ್ಯೆಗಳನ್ನು ತೊಡೆದು ಹಾಕುತ್ತದೆ.  

ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳು :
ಎಳ್ಳು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದ್ದರಿಂದ ಜನರು ಹಬ್ಬಗಳ ಸಮಯದಲ್ಲಿ ಎಳ್ಳು ಮತ್ತು ಬೆಲ್ಲವನ್ನು ಹೆಚ್ಚಾಗಿ ಸೇವಿಸುತ್ತಾರೆ. ಕಬ್ಬಿಣ, ಫ್ಲೇವನಾಯ್ಡ್, ತಾಮ್ರ ಮತ್ತು ಇತರ ಪೋಷಕಾಂಶಗಳು ಇದರ;ಲ್ಲಿ ಹೇರಳವಾಗಿದ್ದು, ದೇಹದಲ್ಲಿ ರಕ್ತದ ಕೊರತೆಯನ್ನು ನೀಗಿಸಲು ಇದು  ಸಹಾಯ ಮಾಡುತ್ತದೆ.

ಇದನ್ನೂ ಓದಿ : Diabetes: ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸುವಾಗ ಈ ತಪ್ಪುಗಳನ್ನು ಮಾಡ್ಬೇಡಿ ರೀಡಿಂಗ್ ತಪ್ಪಾಗಬಹುದು

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News