ಪ್ರತಾಪಗಢ: ಮನುಷ್ಯರು ಸಾವನ್ನಪ್ಪಿದಾಗ ಅಂತಿಮ ವಿಧಿ-ವಿಧಾನ ನೆರವೇರಿಸುವುದು, ಆತ್ಮಶಾಂತಿಗೋಸ್ಕರ ತಿಥಿ ಕಾರ್ಯಕ್ರಮ ಮಾಡಿ ನೂರಾರು ಜನರಿಗೆ ಊಟ ಹಾಕಿಸುವುದು ಸಾಮಾನ್ಯ. ಆದರೆ ಉತ್ತರಪ್ರದೇಶದ ಪ್ರತಾಪಗಢದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ತಾವು ಪ್ರೀತಿಯಿಂದ ಸಾಕಿದ್ದ ಹುಂಜ ಸಾವನ್ನಪ್ಪಿದ್ದಕ್ಕೆ ವೈದ್ಯರೊಬ್ಬರು ಅದರ ಆತ್ಮಕ್ಕೆ ಶಾಂತಿಕೋರಿ ತಿಥಿ ಕಾರ್ಯಕ್ರಮ ಮಾಡಿ ನೂರಾರು ಜನರಿಗೆ ಊಟ ಹಾಕಿಸಿದ್ದಾರೆ.
ಹೌದು, ಇದು ಅಚ್ಚರಿಯಾದರೂ ನಿಜ. ಪ್ರೀತಿಯಿಂದ ಸಾಕಿದ್ದ 5 ವರ್ಷದ ಹುಂಜ ಸಾವನ್ನಪ್ಪಿತ್ತು. ಇದರಿಂದ ತುಂಬಾ ಬೇಜಾರು ಮಾಡಿಕೊಂಡ ವೈದ್ಯರೊಬ್ಬರು ಅದರ ಆತ್ಮಕ್ಕೆ ಶಾಂತಿ ಕೋರಿ 13ನೇ ದಿನದಂದು ತಿಥಿ ಕಾರ್ಯ ಮಾಡಿದ್ದಾರೆ. ಅಲ್ಲದೇ 500 ಮಂದಿಗೆ ತಿಥಿ ಊಟ ಸಹ ಹಾಕಿಸಿದ್ದಾರೆ.
ಇದನ್ನೂ ಓದಿ: Soniya Gandhi : 'ನಾನು ಇಂದಿರಾ ಗಾಂಧಿಯವರ ಸೊಸೆ, ನಾನು ಯಾರಿಗೂ ಹೆದರುವುದಿಲ್ಲ'
ಪ್ರತಾಪ್ಗಢ ಜಿಲ್ಲೆಯ ಫತಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಹದೌಲ್ ಕಾಲಾ ಗ್ರಾಮದ ನಿವಾಸಿ ಡಾ.ಶಾಲಿಕ್ರಮ್ ಸರೋಜ್ ಅವರೇ ತಿಥಿ ಊಟ ಹಾಕಿಸಿರುವ ವೈದ್ಯರಾಗಿದ್ದಾರೆ. ಕ್ಲಿನಿಕ್ ನಡೆಸುತ್ತಿರುವ ಸೋರೋಜ್ ತಮ್ಮ ಮನೆಯಲ್ಲಿ ಮೇಕೆ ಮತ್ತು ಹುಂಜಗಳನ್ನು ಸಾಕಿದ್ದರು. ಇಡೀ ಕುಟುಂಬದ ಸದಸ್ಯರು ‘ಲಾಲಿ’ ಹೆಸರಿನ ಹುಂಜವನ್ನು ತುಂಬಾ ಪ್ರೀತಿಸುತ್ತಿದ್ದರು.
ಜುಲೈ 8ರಂದು ಡಾ.ಸರೋಜ್ ಮೇಲೆ ಶ್ವಾನವೊಂದು ದಾಳಿ ಮಾಡಿತ್ತು. ಈ ವೇಳೆ ನಾಯಿ ಜೊತೆ ‘ಲಾಲಿ’ ಸಂರ್ಘಷಕ್ಕೆ ಇಳಿತ್ತು. ನಾಯಿಯ ದಾಳಿಗೆ ಸಿಲುಕಿದ ‘ಲಾಲಿ’ಗೆ ಗಂಭೀರ ಗಾಯಗಳಾಗಿದ್ದವು. ಪರಿಣಾಮ ಅದು ಜುಲೈ 9ರ ಸಂಜೆ ಸಾವನ್ನಪ್ಪಿದೆ. ತಾವು ಪ್ರೀತಿಯಿಂದ ಸಾಕಿದ ಹುಂಜ ಸಾವನ್ನಪ್ಪಿದ್ದನ್ನು ಕಂಡು ಇಡೀ ಮನೆ ಸದಸ್ಯರೇ ಕಂಬನಿ ಮಿಡಿದಿದ್ದರು. ಇದಾದ ಬಳಿಕ ಮನೆಯ ಸಮೀಪದಲ್ಲಿ ಅದನ್ನು ಹೂಳಲಾಗಿತ್ತು.
ಇದನ್ನೂ ಓದಿ: Viral Video : ಮಹಿಳೆ ಜೊತೆ ಡಾನ್ಸ್ ಮಾಡುವುದಕ್ಕಾಗಿ ಇಬ್ಬರ ನಡುವೆ ಫೈಟ್ : ರಣಾಂಗಣವಾಯಿತು ಮದುವೆ ಮನೆ
‘ಹುಂಜ’ದ ಆತ್ಮಕ್ಕೆ ಶಾಂತಿ ಸಿಗಲೆಂದು ಅದು ಸಾವನ್ನಪ್ಪಿದ 13ನೇ ದಿನದಂದು ತಿಥಿ ಕಾರ್ಯ ಮಾಡಿದ್ದಾರೆ. ಈ ವೇಳೆ ವೈದ್ಯರು ತಲೆ ಸಹ ಬೋಳಿಸಿಕೊಂಡಿದ್ದಾರೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸುಮಾರು 500ಕ್ಕೂ ಹೆಚ್ಚು ಜನರಿಗೆ ಊಟ ಹಾಕಿಸಿದ್ದಾರೆ. ಸುಮಾರು 40 ಸಾವಿರ ರೂ. ಖರ್ಚು ಮಾಡಿ ತಿಥಿ ಕಾರ್ಯ ಮಾಡಿದ್ದಾರೆಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.