Viral Video : ಮಹಿಳೆ ಜೊತೆ ಡಾನ್ಸ್ ಮಾಡುವುದಕ್ಕಾಗಿ ಇಬ್ಬರ ನಡುವೆ ಫೈಟ್ : ರಣಾಂಗಣವಾಯಿತು ಮದುವೆ ಮನೆ

ಇದು ಮದುವೆ ಮನೆ. ಮದುವೆ ಮನೆಯಲ್ಲಿ ಎಲ್ಲರೂ ಭರ್ಜರಿಯಾಗಿಯೇ ಕುಣಿಯುತ್ತಿದ್ದಾರೆ. ಪ್ರತಿಯೊಬ್ಬರ ಮುಖದಲ್ಲಿಯೂ ಸಂತಸ ಸಂಭ್ರಮ ಎದ್ದು ಕಾಣುತ್ತಿದೆ.

Written by - Ranjitha R K | Last Updated : Jul 21, 2022, 01:12 PM IST
  • ಕೆಲವರಿಗೆ ಡಾನ್ಸ್ ಒಂದು ಹವ್ಯಾಸ.
  • ಸಮಯ ಸಿಕ್ಕಾಗಲೆಲ್ಲಾ ಎರಡು ಹೆಜ್ಜೆ ಹಾಕುತ್ತಾರೆ
  • ವೈರಲ್ ಆಯಿತು ಫೈಟ್ ವಿಡಿಯೋ
Viral Video : ಮಹಿಳೆ ಜೊತೆ ಡಾನ್ಸ್ ಮಾಡುವುದಕ್ಕಾಗಿ ಇಬ್ಬರ ನಡುವೆ ಫೈಟ್ : ರಣಾಂಗಣವಾಯಿತು ಮದುವೆ ಮನೆ    title=
fighting video (photo youtube)

Fighting On Dance Floor : ಕೆಲವರಿಗೆ ಡಾನ್ಸ್ ಒಂದು ಹವ್ಯಾಸ. ಸಮಯ ಸಿಕ್ಕಾಗಲೆಲ್ಲಾ ಎರಡು ಹೆಜ್ಜೆ ಹಾಕಿದರೆನೇ ಅವರಿಗೆ ಸಮಾಧಾನ. ಇಂಥವರು ಸಿಕ್ಕ ಸಂದರ್ಭವನ್ನು ಬಳಸಿಕೊಂಡು ಸೊಂಟ ಬಳಕಿಸುತ್ತಾರೆ. ಮದುವೆ ಮನೆಗಳಲ್ಲಂತೂ ಡಾನ್ಸ್ ಅನ್ನುವುದು ಸಾಮಾನ್ಯ. ಡಾನ್ಸ್ ಮಾಡುವವರಿಗೂ, ನೋಡುವವರಿಗೂ ಫುಲ್ ಮನರಂಜನೆ. 

ಮದುವೆ ಮನೆಯಲ್ಲಿ ಭರ್ಜರಿ ಡಾನ್ಸ್  : 
ಇದು ಮದುವೆ ಮನೆ. ಮದುವೆ ಮನೆಯಲ್ಲಿ ಎಲ್ಲರೂ ಭರ್ಜರಿಯಾಗಿಯೇ ಕುಣಿಯುತ್ತಿದ್ದಾರೆ. ಪ್ರತಿಯೊಬ್ಬರ ಮುಖದಲ್ಲಿಯೂ ಸಂತಸ ಸಂಭ್ರಮ ಎದ್ದು ಕಾಣುತ್ತಿದೆ. ಆದರೆ ಇಷ್ಟು ಸಂತಸದ ಘಳಿಗೆ ರಣಾಂಗಣವಾಗಿ ಮಾರ್ಪಾಡಾಗಬಹುದು ಎಂಬ ಊಹೆ ಕೂಡಾ ಯಾರಿಗೂ ಇರಲಿಲ್ಲ. 

ಇದನ್ನೂ ಓದಿ : Viral Video: ಮದುವೆಯಲ್ಲಿ ಸ್ನೇಹಿತರು ನೀಡಿದ ಉಡುಗೊರೆಗೆ ನಾಚಿನೀರಾದ ಮದುಮಗ, ವಧು ಮಾಡಿದ್ದೇನು..?

ಒಂದೇ ಕ್ಷಣದಲ್ಲಿ ಎಲ್ಲವೂ ಬದಲಾಯಿತು : 
ಎಲ್ಲರೂ ಡಾನ್ಸ್ ಮಾಡುತ್ತಿದ್ದಂತೆಯೇ ಇದ್ದಕ್ಕಿಂದ್ದಂತೆ ಫ್ಲೋರ್‌ ಗೆ ಮಹಿಳೆಯ ಎಂಟ್ರಿ ಯಾಗುತ್ತದೆ. ಅಷ್ಟರಲ್ಲಿ ಅಲ್ಲಿದ್ದ ಯುವಕನೊಬ್ಬ ಮಹಿಳೆ ಜೊತೆ ಹೆಜ್ಜೆ ಹಾಕುತ್ತಾನೆ. ಅದನ್ನು ಕಂಡ ಮತ್ತೊಬ್ಬ ಯುವಕನಿಗೆ ಅದೇನಾಯಿತೋ, ಮಹಿಳೆ ಮತ್ತು ಡಾನ್ಸ್ ಮಾಡುತ್ತಿದ್ದ ಯುವಕನನ್ನು ಎಳೆದಾಡಿ ಬಿಡುತ್ತಾನೆ. ನೋಡು ನೋಡುತ್ತಿದ್ದಂತೆಯೇ ಡಾನ್ಸ್ ಫ್ಲೋರ್ ಯುದ್ದ ಭೂಮಿಯಂತಾಗುತ್ತದೆ.

ಇದನ್ನೂ ಓದಿ : Viral Video: ಕಟುಕನಿಗೆ ಮಾರುತ್ತಿದ್ದಂತೆ ಅಳುತ್ತಾ ಮಾಲೀಕನನ್ನು ತಬ್ಬಿಕೊಂಡ ಮೇಕೆ

ವೀಡಿಯೊ ವೈರಲ್ :
ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರನ್ನು ರಂಜಿಸುತ್ತಿದೆ.  ಇಲ್ಲಿಯವರೆಗೆ 25 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ.  11 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News