Redmi ಬಿಡುಗಡೆ ಮಾಡಿದೆ 11 ಸಾವಿರ ರೂಪಾಯಿ ಬೆಲೆಯ Smartphone.!

ಹೊಸ Redmi 10A ಸ್ಪೋರ್ಟ್ Redmi 10Aಗೆ ಹೋಲಿಸಿದರೆ ಸಣ್ಣ  ಅಪ್ಡೇಟ್ ನೊಂದಿಗೆ ಬಿಡುಗಡೆಯಾಗಿದೆ. ಹೊಸ ಮಾದರಿಯು ಹೆಚ್ಚಿನ RAM ನೊಂದಿಗೆ ಬರುತ್ತದೆ.

Written by - Ranjitha R K | Last Updated : Jul 28, 2022, 01:07 PM IST
  • Xiaomi ಭಾರತದಲ್ಲಿ Redmi 10A ಏಪ್ರಿಲ್‌ನಲ್ಲಿ ಬಿಡುಗಡೆ
  • Redmi 10A ಸ್ಪೋರ್ಟ್ ವಿಶೇಷತೆಗಳು
  • ಭಾರತದಲ್ಲಿ ಈ ಫೋನ್ ಬೆಲೆ ಎಷ್ಟು ?
Redmi ಬಿಡುಗಡೆ ಮಾಡಿದೆ  11 ಸಾವಿರ ರೂಪಾಯಿ ಬೆಲೆಯ Smartphone.! title=
Redmi 10A sport (file photo)

ಬೆಂಗಳೂರು :  Xiaomi ಭಾರತದಲ್ಲಿ Redmi 10A ಅನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೇವಲ ಮೂರು ತಿಂಗಳ ನಂತರ,  Redmi 10A ಸ್ಪೋರ್ಟ್ ಎಂಬ ಹೊಸ ಆವೃತ್ತಿಯನ್ನು ಇದೀಗ ಬಿಡುಗಡೆ ಮಾಡಿದೆ. ಹಿಂದಿನ ಸ್ಪೋರ್ಟ್-ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳಾದ Redmi 9A Sport ಮತ್ತು Redmi 9i Sport ಕೇವಲ ಕಾಸ್ಮೆಟಿಕ್ ಬದಲಾವಣೆಗಳನ್ನು ತಂದಿವೆ.  ಆದರೆ, ಹೊಸ Redmi 10A ಸ್ಪೋರ್ಟ್ Redmi 10Aಗೆ ಹೋಲಿಸಿದರೆ ಸಣ್ಣ  ಅಪ್ಡೇಟ್ ನೊಂದಿಗೆ ಬಿಡುಗಡೆಯಾಗಿದೆ. ಹೊಸ ಮಾದರಿಯು ಹೆಚ್ಚಿನ RAM ನೊಂದಿಗೆ ಬರುತ್ತದೆ.

Redmi 10A ಸ್ಪೋರ್ಟ್ ವಿಶೇಷತೆಗಳು :
Redmi 10A ಸ್ಪೋರ್ಟ್ Redmi 10Aನಂತೆಯೇ  ಕಾಣುತ್ತದೆ. ಆದರೆ ಹೆಚ್ಚು RAM ಹೊಂದಿದೆ. ಇದು 6GB RAM ಮತ್ತು 128GB RAM ನೊಂದಿಗೆ ಬರುತ್ತದೆ. Redmi 10A 3GB + 32GB ಮತ್ತು 4GB + 64GB ಮೆಮೊರಿ ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. ಸಾಧನವು 1600 x 720 ಪಿಕ್ಸೆಲ್‌ಗಳ HD+ ರೆಸಲ್ಯೂಶನ್ ಮತ್ತು ಡ್ಯೂಡ್ರಾಪ್ ನಾಚ್‌ನೊಂದಿಗೆ 6.53-ಇಂಚಿನ ಡಿಸ್ಪ್ಲೇ ಇದೆ. ಈ ಪ್ಯಾನೆಲ್ 1500:1 ಕಾಂಟ್ರಾಸ್ಟ್ ಅನುಪಾತ, 20:9 ಆಕಾರ ಅನುಪಾತ ಮತ್ತು 400 nits ಗರಿಷ್ಠ ಪ್ರಕಾಶಮಾನ ಮಟ್ಟವನ್ನು ಹೊಂದಿದೆ. 

ಇದನ್ನೂ ಓದಿ : ಮಾರುಕಟ್ಟೆಗೆ ಕಾಲಿಟ್ಟಿದೆ ಅತ್ಯಂತ ಕಡಿಮೆ ಬೆಲೆಯ 55 ಇಂಚಿನ Smart TV !

ಹ್ಯಾಂಡ್ಸೆಟ್ Mediatek Helio G25 ಚಿಪ್ ಸೇಟ್ ನಿಂದ ಚಾಲಿತವಾಗಿದೆ. ಇದು Android 11 ಆಧಾರಿತ MIUI 12.5 ಅನ್ನು ಬೂಟ್ ಮಾಡುತ್ತದೆ. ಇದು ಡ್ಯುಯಲ್-ಸಿಮ್, 4G, ಸಿಂಗಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, GNSS ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್‌ನಂತಹ ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ.

Redmi 10A ಸ್ಪೋರ್ಟ್ ಕ್ಯಾಮೆರಾ :
Redmi 10A ಸ್ಪೋರ್ಟ್‌ನ ಇತರ ವೈಶಿಷ್ಟ್ಯಗಳು 13MP ರಿಯರ್  ಕ್ಯಾಮೆರಾ, 5MP ಫ್ರಂಟ್ ಕ್ಯಾಮೆರಾ. , 3.5mm ಹೆಡ್‌ಫೋನ್ ಜ್ಯಾಕ್, ರೆಸೆರ್ವ್ದ್  ಮೈಕ್ರೊ SD ಕಾರ್ಡ್ ಸ್ಲಾಟ್, ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಸಿಂಗಲ್ ಬಾಟಮ್-ಫೈರಿಂಗ್ ಸ್ಪೀಕರ್ ಅನ್ನು ಹೊಂದಿದೆ. 

ಇದನ್ನೂ ಓದಿ : 200MP ಕ್ಯಾಮೆರಾದೊಂದಿಗೆ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ರೆಡ್‌ಮಿಯ ಹೊಸ ಸ್ಮಾರ್ಟ್‌ಫೋನ್

ಭಾರತದಲ್ಲಿ Redmi 10A ಸ್ಪೋರ್ಟ್ ಬೆಲೆ :
Redmi 10A Sport 6GB + 128GB ಮೆಮೊರಿ ರೂಪಾಂತರದಲ್ಲಿ ಬರುತ್ತದೆ. ಇದರ ಬೆಲೆ ಭಾರತದಲ್ಲಿ 10,999 ರೂಪಾಯಿ. ಇದನ್ನು ಚಾರ್ಕೋಲ್ ಬ್ಲಾಕ್, ಸೀ ಬ್ಲೂ ಅಥವಾ ಸ್ಲೇಟ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಬಳಸಬಹುದು. ಸ್ಮಾರ್ಟ್ಫೋನ್ Mi.com ಮತ್ತು Amazon India ನಲ್ಲಿ ಮಾರಾಟಕ್ಕೆ ಲಭ್ಯವಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News