ಬರ್ಮಿಂಗ್‌ಹ್ಯಾಮ್‌ನಲ್ಲಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಇಂದಿನಿಂದ ಪ್ರಾರಂಭವಾಗಲಿದೆ. ಕಳೆದ ದಿನ ಅದ್ಧೂರಿ ಚಾಲನೆ ದೊರೆತಿದ್ದು, ಇಂದಿನಿಂದ ಕ್ರೀಡಾಳುಗಳು ಕಣಕ್ಕಿಳಿಯಲಿದ್ದಾರೆ. ಮಲ್ಟಿ ಡಿಸಿಪ್ಲಿನ್ಡ್ ಆಟಗಳಲ್ಲಿ ಭಾರತದ ಅಥ್ಲೀಟ್‌ಗಳು ಸಿಂಗಲ್ಸ್, ಜೋಡಿ ಮತ್ತು ಟೀಮ್ ಈವೆಂಟ್‌ಗಳಲ್ಲಿ ಭಾಗವಹಿಸಲಿದ್ದಾರೆ. ಇನ್ನು ಮೊಣಕಾಲು ನೋವಿನ ಸಮಸ್ಯೆಯಿಂದ ಟೂರ್ನಿಯಿಂದ ಹಿಂದೆ ಹೊರಗುಳಿದಿರುವ ಚಿನ್ನದ ಹುಡುಗ, ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರನ್ನು ಭಾರತ ಈ ಬಾರಿ ಮಿಸ್ ಮಾಡಿಕೊಳ್ಳಲಿದೆ.
ಇದನ್ನೂ ಓದಿ: ಈ ಸಣ್ಣ ಸಾಧನವನ್ನು ಅಳವಡಿಸಿದರೆ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಬರುತ್ತೆ
ಇನ್ನು ಮಹಿಳಾ ಕ್ರಿಕೆಟ್ ಪಂದ್ಯ ಕಾಮನ್‌ವೆಲ್ತ್‌ನಲ್ಲಿ ನಡೆಯಲಿದ್ದು, ಇಂದು ಆಸ್ಟ್ರೇಲಿಯಾವನ್ನು ಭಾರತ ಎದುರಿಸಲಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾಗೆ ಸವಾಲೊಡ್ಡಲಿದೆ. ಇನ್ನೊಂದೆಡೆ ಮಹಿಳಾ ಹಾಕಿ ತಂಡವು ಮಿನ್ನೋಸ್ ಘಾನಾ ವಿರುದ್ಧ ಕಣಕ್ಕಿಳಿಯಲಿದೆ.
ಕಾಮನ್‌ವೆಲ್ತ್ ಗೇಮ್ಸ್ 2022 ರ ದಿನದ 1 ರಂದು ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:
ಲಾನ್ ಬೌಲ್ ಮತ್ತು ಪ್ಯಾರಾ ಲಾನ್ ಬೌಲ್:
ನಯನ್ಮೋನಿ ಸೈಕಿಯಾ (ಮಹಿಳಾ ಸಿಂಗಲ್ಸ್, ವಿಭಾಗೀಯ ಆಟ - ಸುತ್ತು 1) (1 PM)
ದಿನೇಶ್ ಕುಮಾರ್/ನವನೀತ್ ಸಿಂಗ್/ಚಂದನ್ ಸಿಂಗ್ (ಪುರುಷರ ಟ್ರಿಪಲ್ಸ್, ವಿಭಾಗೀಯ ಆಟ - ಸುತ್ತು 1) (1 PM)
ಸುನಿಲ್ ಬಹದ್ದೂರ್/ಮೃದುಲ್ ಬೊರ್ಗೊಹೈನ್ (ಪುರುಷರ ಜೋಡಿ, ವಿಭಾಗೀಯ ಆಟ - ಸುತ್ತು 1) (7:30 PM)
ರೂಪಾ ಟಿರ್ಕಿ/ತಾನಿಯಾ ಚೌಧರಿ/ಲವ್ಲಿ ಚೌಬೆ/ಟಿಬಿಡಿ (ವಿಭಾಗೀಯ ಆಟ - ಸುತ್ತು 2) (7:30 PM)
ಜಿಮ್ನಾಸ್ಟಿಕ್ - ಕಲಾತ್ಮಕ (1:30 PM)
ಯೋಗೇಶ್ವರ್ ಸಿಂಗ್/ಸತ್ಯಜಿತ್ ಮೊಂಡಲ್/ಸೈಫ್ ತಾಂಬೋಲಿ (ಪುರುಷರ ತಂಡ, ಅಂತಿಮ ಮತ್ತು ವೈಯಕ್ತಿಕ ಅರ್ಹತೆ, ಉಪವಿಭಾಗ 1)
ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್ (2 PM)
ದಿಯಾ ಚಿತಾಲೆ/ಮಾನಿಕಾ ಬಾತ್ರಾ/ರೀತ್ ಟೆನ್ನಿಸನ್/ಶ್ರೀಜಾ ಅಕುಲಾ (ಮಹಿಳಾ ತಂಡದ ಈವೆಂಟ್, ಅರ್ಹತಾ ಸುತ್ತು 1)
ಹರ್ಮೀತ್ ದೇಸಾಯಿ/ಸನಿಲ್ ಶೆಟ್ಟಿ/ಶರತ್ ಕಮಲ್/ಸತ್ಯನ್ ಜ್ಞಾನಶೇಖರನ್ (ಪುರುಷರ ತಂಡ ಸ್ಪರ್ಧೆ, ಅರ್ಹತಾ ಸುತ್ತು 1)
ಸೈಕ್ಲಿಂಗ್ - ಟ್ರ್ಯಾಕ್ ಮತ್ತು ಪ್ಯಾರಾ ಟ್ರ್ಯಾಕ್ (2:30 PM)
ವೈ ರೋಜಿತ್ ಸಿಂಗ್/ರೊನಾಲ್ಡೊ ಲೈಟೊಂಜಮ್/ಡೇವಿಡ್ ಎಲ್ಕಟೋಚೊಂಗೊ/ಈಸೊವ್ ಎಸೊವ್ (ಪುರುಷರ ತಂಡ ಸ್ಪ್ರಿಂಟ್, ಅರ್ಹತೆ)
ಮಯೂರಿ ಲೂಟ್/ತ್ರಿಯಾಶಾ ಪೌಲ್/ಶುಶಿಕಲಾ ಅಗಾಶೆ (ಮಹಿಳಾ ತಂಡ ಸ್ಪ್ರಿಂಟ್, ಅರ್ಹತೆ)
ವಿಶ್ವಜೀತ್ ಸಿಂಗ್/ನಮನ್ ಕಪಿಲ್/ವೆಂಕಪ್ಪ ಕೆಂಗಲಗುತ್ತಿ/ಅನಂತ ನಾರಾಯಣನ್/ದಿನೇಶ್ ಕುಮಾರ್ (ಪುರುಷರ 4000ಮೀ ಟೀಮ್ ಪರ್ಸ್ಯೂಟ್, ಅರ್ಹತೆ)
ಅಕ್ವಾಟಿಕ್ಸ್ - ಈಜು ಮತ್ತು ಪ್ಯಾರಾ ಈಜು (3 PM)
ಕುಶಾಗ್ರಾ ರಾವತ್ (ಪುರುಷರ 400 ಮೀ ಫ್ರೀಸ್ಟೈಲ್, ಹೀಟ್ಸ್)
ಸಜನ್ ಪ್ರಕಾಶ್ (ಪುರುಷರ 50 ಮೀ ಬಟರ್‌ಫ್ಲೈ, ಹೀಟ್ಸ್)
ಆಶಿಶ್ ಕುಮಾರ್ (ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಎಸ್ 9, ಹೀಟ್)
ಶ್ರೀಹರಿ ನಟರಾಜ್ (ಮಹಿಳೆಯರ 100ಮೀ ಬಟರ್‌ಫ್ಲೈ, ಹೀಟ್ಸ್)
ಟ್ರಯಥ್ಲಾನ್ ಮತ್ತು ಪ್ಯಾರಾ ಟ್ರಯಥ್ಲಾನ್ (3:30 PM)
ಆದರ್ಶ್ ಎಂ.ಎಸ್, ವಿಶ್ವನಾಥ್ ಯಾದವ್ (ಪುರುಷರ ವೈಯಕ್ತಿಕ (ಸ್ಪ್ರಿಂಟ್ ಡಿಸ್ಟಾನ್ಸ್), ಫೈನಲ್)
ಸಂಜನಾ ಜೋಶಿ, ಪ್ರಜ್ಞಾ ಮೋಹನ್ (ಮಹಿಳೆಯರ ವೈಯಕ್ತಿಕ (ಸ್ಪ್ರಿಂಟ್ ಡಿಸ್ಟಾನ್ಸ್), ಫೈನಲ್)
ಕ್ರಿಕೆಟ್ WT20I (3:30 PM)
ಭಾರತ vs ಆಸ್ಟ್ರೇಲಿಯಾ (ಗುಂಪು A ಪಂದ್ಯ, ಎಡ್ಜ್‌ಬಾಸ್ಟನ್)
ಸ್ಕ್ವ್ಯಾಷ್ (4:30 PM)
ಜೋಷ್ನಾ ಚಿನಪ್ಪ, ಸುನಯನಾ ಕುರುವಿಲ್ಲ, ಅನಾಹತ್ ಸಿಂಗ್ (ಮಹಿಳಾ ಸಿಂಗಲ್ಸ್, ಪ್ರಾಥಮಿಕ ಸುತ್ತಿನ 64)
ಸೌರವ್ ಘೋಸಲ್, ರಮಿತ್ ಟಂಡನ್, ಅಭಯ್ ಸಿಂಗ್ (ಪುರುಷರ ಸಿಂಗಲ್ಸ್, ಪ್ರಾಥಮಿಕ ಸುತ್ತಿನ 64)
ಹಾಕಿ (6:30 PM)
ಭಾರತ vs ಘಾನಾ
ಬ್ಯಾಡ್ಮಿಂಟನ್ (6:30 PM)
ಭಾರತ vs ಪಾಕಿಸ್ತಾನ (ಮಿಶ್ರ ತಂಡ ಈವೆಂಟ್, ಅರ್ಹತಾ ಸುತ್ತು 1)
ಇದನ್ನೂ ಓದಿ: ನಿಮ್ಮ ಅರಿವಿಲ್ಲದೆ ಯಾರಾದರೂ ವಾಟ್ಸಾಪ್‌ನಲ್ಲಿ ನಿಮ್ಮ ಚಾಟಿಂಗ್ ಓದುತ್ತಿದ್ದಾರೆಯೇ?
ಬಾಕ್ಸಿಂಗ್:
ಶಿವ ಥಾಪಾ: ಪುರುಷರ 60 ಕೆಜಿ ಮೇಲ್ಪಟ್ಟವರು - 63.5 ಕೆಜಿ (ಲೈಟ್ ವೆಲ್ಟರ್), ರೌಂಡ್ ಆಫ್ 32 (4:30 PM)
ಸುಮಿತ್ ಕುಂದು: ಪುರುಷರ 71 ಕೆಜಿ - 75 ಕೆಜಿ (ಮಧ್ಯಮ), 32 ರ ಸುತ್ತು (4:30 PM)
ಆಶಿಶ್ ಕುಮ್ರಾ: ಪುರುಷರ 75 ಕೆಜಿ - 80 ಕೆಜಿ (ಲೈಟ್ ಹೆವಿ), ರೌಂಡ್ ಆಫ್ 32 (11 PM)
ರೋಹಿತ್ ಟೋಕಾಸ್: ಪುರುಷರ 63.5 ಕೆಜಿ - 67 ಕೆಜಿ (ವೆಲ್ಟರ್), ರೌಂಡ್ ಆಫ್ 32 (11 PM)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.