ಈ ಸಣ್ಣ ಸಾಧನವನ್ನು ಅಳವಡಿಸಿದರೆ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಬರುತ್ತೆ

ಒಂದು ಸಣ್ಣ ಸಾಧನವನ್ನು ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ತಪ್ಪಿಸುವುದರ ಜೊತೆಗೆ ತಿಂಗಳ ವಿದ್ಯುತ್ ಬಿಲ್ ಅನ್ನು ಅರ್ಧಕ್ಕಿಂತ ಕಡಿಮೆ ಮಾಡುತ್ತದೆ. ಅಂತಹ ಒಂದು ಸಾಧನದ ಬಗ್ಗೆ ತಿಳಿಯೋಣ...

Written by - Yashaswini V | Last Updated : Jul 29, 2022, 08:36 AM IST
  • ವಿದ್ಯುತ್ ಬಿಲ್ ಕಡಿಮೆ ಮಾಡಲು ಸಿಂಪಲ್ ಸಲಹೆ
  • 200 ರೂ. ಸಾಧನ ನಿಮ್ಮ ವಿದ್ಯುತ್ ಬಿಲ್ ಅನ್ನು ಅರ್ಧಕ್ಕಿಂತ ಕಡಿಮೆ ಮಾಡಬಹುದು
  • ವಿದ್ಯುತ್ ಬಿಲ್ ಕಡಿಮೆ ಆಡಲು ಸರಳ ಸಲಹೆ ಇಲ್ಲಿದೆ
ಈ ಸಣ್ಣ ಸಾಧನವನ್ನು ಅಳವಡಿಸಿದರೆ ವಿದ್ಯುತ್ ಬಿಲ್ ಅರ್ಧಕ್ಕಿಂತ ಕಡಿಮೆ ಬರುತ್ತೆ  title=
Electricity saving tips

ಬೆಂಗಳೂರು: ತಿಂಗಳ ಬಜೆಟ್ ಸರಿದೂಗಿಸಲು ನಾವು ಇನ್ನಿಲ್ಲದ ಪ್ರಯತ್ನ ಮಾಡುತ್ತೇವೆ. ಅವುಗಳಲ್ಲಿ ವಿದ್ಯುತ್ ಉಳಿತಾಯವೂ ಒಂದು. ಇಂದು ನಾವು ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಅರ್ಧಕ್ಕಿಂತಲೂ ಕಡಿಮೆ ಮಾಡಬಲ್ಲ ಒಂದು ಸಣ್ಣ ಸಾಧನದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಸಾಧನವನ್ನು ಬಳಸುವುದರಿಂದ ಶಾರ್ಟ್ ಸರ್ಕ್ಯೂಟ್ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು. ಈ ಸಾಧನದ ಹೆಸರು ಝೀಲ್ಸಿ ಮ್ಯಾಕ್ಸ್ ಪವರ್ ಸೇವರ್. ಈ ಎಲೆಕ್ಟ್ರಿಸಿಟಿ ಸೇವರ್ ಪವರ್ ವಿದ್ಯುಚ್ಛಕ್ತಿಯನ್ನು ಉಳಿಸುತ್ತದೆ. 

ಭಾರತದಲ್ಲಿ ಝೀಲ್ಸಿ ಮ್ಯಾಕ್ಸ್ ಪವರ್ ಸೇವರ್ ಇಲೆಕ್ಟ್ರಿಸಿಟಿ ಪವರ್ ಸೇವರ್ ಬೆಲೆ:
ನೀವು ಅದನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಇದರ ಬೆಲೆ ರೂ 999, ಆದರೆ ಫ್ಲಿಪ್‌ಕಾರ್ಟ್‌ನಲ್ಲಿ 205 ರೂ.ಗಳಿಗೆ ಲಭ್ಯವಿದೆ.  ಮೊದಲ ಬಾರಿಗೆ  ಈ ಸಾಧನದಲ್ಲಿ ಆನ್‌ಲೈನ್‌ನಲ್ಲಿ ಇಂತಹ ರಿಯಾಯಿತಿ ಲಭ್ಯವಾಗಲಿದೆ. ಇದರ ವಿಶೇಷವೆಂದರೆ ಈ ಸಾಧನವನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ಅನ್ವಯಿಸಬಹುದು.

ಇದನ್ನೂ ಓದಿ- ನಿಮ್ಮ ಅರಿವಿಲ್ಲದೆ ಯಾರಾದರೂ ವಾಟ್ಸಾಪ್‌ನಲ್ಲಿ ನಿಮ್ಮ ಚಾಟಿಂಗ್ ಓದುತ್ತಿದ್ದಾರೆಯೇ?

ಝೀಲ್ಸಿ ಮ್ಯಾಕ್ಸ್ ಪವರ್ ಸೇವರ್ ಅಳವಡಿಸುವುದರ ಪ್ರಯೋಜನ:
ಇದರ ಪ್ರಮುಖ ಪ್ರಯೋಜನವೆಂದರೆ ಈ ಸಾಧನವನ್ನು ಅಳವಡಿಸುವುದರಿಂದ ಮನೆಯ ಯಾವುದೇ ಎಲೆಕ್ಟ್ರಿಕ್ ವಸ್ತುವೂ ಹಾಳಾಗುವುದಿಲ್ಲ. ಇದು ಹೆಚ್ಚುವರಿ ಕರೆಂಟ್ ಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಮಾತ್ರವಲ್ಲ ಇದರ ಅನುಸ್ಥಾಪನೆಯ ನಂತರ, ಪ್ರತಿ ತಿಂಗಳು ವಿದ್ಯುತ್ ಬಿಲ್‌ನಲ್ಲಿ 35% ರಷ್ಟು ಕಡಿಮೆಯಾಗಲು ಪ್ರಾರಂಭಿಸುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ- 200MP ಕ್ಯಾಮೆರಾದೊಂದಿಗೆ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ರೆಡ್‌ಮಿಯ ಹೊಸ ಸ್ಮಾರ್ಟ್‌ಫೋನ್

ಈ ಸಾಧನವು ವೋಲ್ಟೇಜ್ ಸ್ಟೇಬಿಲೈಸರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ವೋಲ್ಟೇಜ್ ಹೆಚ್ಚಾದರೂ ಅಥವಾ ಕಡಿಮೆ ಆದರೂ ಸಹ ಇದು ಎಲೆಕ್ಟ್ರಿಕ್ ಸಾಧನವನ್ನು ಹಾನಿಗೊಳಗಾಗದಂತೆ ತಡೆಯುತ್ತದೆ. 

ನೀವು ಅದನ್ನು ಕಚೇರಿ ಅಥವಾ ಕಾರ್ಖಾನೆಯಲ್ಲಿ ಸ್ಥಾಪಿಸಲು ಯೋಚಿಸುತ್ತಿದ್ದರೆ, ಒಮ್ಮೆ ನೀವು ಎಂಜಿನಿಯರ್‌ನಿಂದ ಸಲಹೆ ಪಡೆದು ಅಂತರ ಸ್ಥಾಪಿಸಿ. ಏಕೆಂದರೆ ಈ ಸಾಧನವು ವಿದ್ಯುತ್ ಮುಖ್ಯ ತಂತಿಗೆ ಸಂಪರ್ಕಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಒಮ್ಮೆ ಎಂಜಿನಿಯರ್ ಅನ್ನು ಸಂಪರ್ಕಿಸಿ ನಂತರ ಇದನ್ನು ಇನ್ಸ್ಟಾಲ್ ಮಾಡುವುಡು ಸೂಕ್ತ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News