ಮಾನ್ಸೂನ್ನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು: ಮಾನ್ಸೂನ್ನಲ್ಲಿ ಸೋಂಕುಗಳು ಹೆಚ್ಚಾಗುವುದು ಸಾಮಾನ್ಯ. ಸೋಂಕುಗಳಿಂದ ರಕ್ಷಣೆ ಪಡೆಯಲು ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗಿರಬೇಕು. ಆದರೆ, ಈ ಋತುವಿನಲ್ಲಿ ರೋಗನಿರೋಧಕ ಶಕ್ತಿಯೂ ದುರ್ಬಲಗೊಳ್ಳುತ್ತದೆ. ಹಾಗಾಗಿ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲವು ಆಹಾರಗಳಿಂದ ಇಮ್ಯೂನಿಟಿ ಪವರ್ ಹೆಚ್ಚಾಗುತ್ತದೆ. ಹಾಗಿದ್ದರೆ, ಇಮ್ಯೂನಿಟಿಯನ್ನು ಹೆಚ್ಚಿಸಲು ಯಾವ ಆಹಾರಗಳನ್ನು ಸೇವಿಸುವುದು ಉತ್ತಮ ಎಂದು ತಿಳಿಯೋಣ...
ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಳೆಗಾಲದಲ್ಲಿ ಈ ಆಹಾರಗಳನ್ನು ಸೇವಿಸಿ :
ಧಾನ್ಯಗಳು:
ಧಾನ್ಯಗಳು ಅದರಲ್ಲೂ ದ್ವಿದಳ ಧಾನ್ಯಗಳನ್ನು ಈ ಋತುವಿನಲ್ಲಿ ತಪ್ಪದೇ ಸೇವಿಸಿ. ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್, ಫೈಬರ್, ಸತು ಮತ್ತು ಮೆಗ್ನೀಸಿಯಮ್ ಹೇರಳವಾಗಿ ಕಂಡುಬರುತ್ತವೆ. ಈ ಎಲ್ಲಾ ಅಂಶಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ- ಬೊಜ್ಜಿನ ಸಮಸ್ಯೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ? ಈ ರೈಸ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ
ಹಸಿರು ಸೊಪ್ಪು:
ಕೆಲವರು ಮಳೆಗಾಲದಲ್ಲಿ ಶೀತವಾಗುತ್ತೆ ಎಂದು ಸೊಪ್ಪು ಸೇವಿಸುವುದಿಲ್ಲ. ಆದರೆ, ಈ ಋತುವಿನಲ್ಲಿ ಕೆಲವು ಸೊಪ್ಪುಗಳನ್ನು ಸೇವಿಸುವುದು ತುಂಬಾ ಒಳ್ಳೆಯದು. ಸೊಪ್ಪಿನ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೇ ಸೊಪ್ಪಿನ ಸೇವನೆಯು ದೇಹದಲ್ಲಿ ಪ್ರತಿಕಾಯಗಳ ರಚನೆಗೆ ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ಅರಿಶಿನದ ಹಾಲು:
ಅರಿಶಿನದ ಹಾಲನ್ನು ಸೇವಿಸುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅದರಲ್ಲೂ ರಾತ್ರಿ ಮಲಗುವ ಮೊದಲು ಅರಿಶಿನದ ಹಾಲನ್ನು ಸೇವಿಸುವುದು ಬಹಳ ಉತ್ತಮ. ಅರಿಶಿನ ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ, ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ, ನೀವು ಮಳೆಗಾಲದಲ್ಲಿ ಪ್ರತಿದಿನ ಅರಿಶಿನ ಹಾಲನ್ನು ಸೇವಿಸಬಹುದು, ಹೀಗೆ ಮಾಡುವುದರಿಂದ ನೀವು ರೋಗಗಳಿಂದ ದೂರವಿರಬಹುದು.
ಇದನ್ನೂ ಓದಿ- ಮಳೆಗಾಲದ ಋತುವಿನಲ್ಲಿ ಕಾಲುಗಳಲ್ಲಿ ಆಗುವ ಈ ಫಂಗಲ್ ಇನ್ಫೆಕ್ಷನ್ ನಿಂದ ಈ ರೀತಿ ಮುಕ್ತಿ ಪಡೆಯಿರಿ
ಡ್ರೈ ಫ್ರೂಟ್ಸ್ :
ಡ್ರೈ ಫ್ರೂಟ್ಸ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದೇ ಇದೆ. ಡ್ರೈ ಫ್ರೂಟ್ಸ್ನಲ್ಲಿ ಪ್ರೋಟೀನ್, ಫೈಬರ್ ಮತ್ತು ವಿಟಮಿನ್ಗಳು ಸಮೃದ್ಧವಾಗಿವೆ . ಇದು ಮೂಳೆಗಳನ್ನು ಬಲಪಡಿಸುತ್ತದೆ. ಒಣ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದ ಕೊರತೆಯಾಗುವುದಿಲ್ಲ, ಮನಸ್ಸು ಕೂಡ ಚುರುಕಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮಳೆಗಾಲದಲ್ಲಿ ಪ್ರತಿದಿನ ಒಣ ಹಣ್ಣುಗಳನ್ನು ಸೇವಿಸಿದರೆ, ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.