Mallikarjun Kharge : ಸೋನಿಯಾ, ರಾಹುಲ್ ನಂತರ ಮಲ್ಲಿಕಾರ್ಜುನ ಖರ್ಗೆಗೆ ಶಾಕ್ ನೀಡಿದೆ ಇಡಿ!

ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನ ಅಧಿವೇಶನದ ಮಧ್ಯದಲ್ಲಿ ನನಗೆ ಇಡಿ ನೋಟಿಸ್ ಬಂದಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಆದರೆ, ದೈರ್ಯದಿಂದ ಹೋರಾಡುತ್ತೇವೆ ಎಂದು ಹೇಳಿದ್ದಾರೆ. 

Written by - Channabasava A Kashinakunti | Last Updated : Aug 4, 2022, 03:27 PM IST
  • ತಕ್ಷಣವೆ ವಿಚಾರಣೆಗೆ ಬನ್ನಿ : ಖರ್ಗೆ
  • ನರೇಂದ್ರ ಮೋದಿಯವರಿಗೆ ಹೆದರುವುದಿಲ್ಲ - ರಾಹುಲ್ ಗಾಂಧಿ
  • ಆಗಸ್ಟ್ 5 ರಂದು ಕಾಂಗ್ರೆಸ್ ನಿಂದ ಪ್ರತಿಭಟನೆ
Mallikarjun Kharge : ಸೋನಿಯಾ, ರಾಹುಲ್ ನಂತರ ಮಲ್ಲಿಕಾರ್ಜುನ ಖರ್ಗೆಗೆ ಶಾಕ್ ನೀಡಿದೆ ಇಡಿ! title=

ED Notice Mallikarjun Kharge : ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಈ ಹಿಂದೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದರು. ಇದೀಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನ ಅಧಿವೇಶನದ ಮಧ್ಯದಲ್ಲಿ ನನಗೆ ಇಡಿ ನೋಟಿಸ್ ಬಂದಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಆದರೆ, ದೈರ್ಯದಿಂದ ಹೋರಾಡುತ್ತೇವೆ ಎಂದು ಹೇಳಿದ್ದಾರೆ. 

ತಕ್ಷಣವೆ ವಿಚಾರಣೆಗೆ ಬನ್ನಿ : ಖರ್ಗೆ

ಸಂಸತ್ ಕಲಾಪದ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನನಗೆ ಇಡಿಯಿಂದ ಸಮನ್ಸ್ ನೀಡಲಾಗಿದೆ. ನೀವು ತಕ್ಷಣವೆ ವಿಚಾರಣೆಗೆ ಹೋಗಬೇಕು. ನಾನು 12:30 ಕ್ಕೆ ಹೊರಡಬೇಕು. ನಾನು ಕಾನೂನನ್ನು ಪಾಲಿಸಲು ಬಯಸುತ್ತೇನೆ, ಆದರೆ ಮನೆ ಅಥವಾ ವಾಹನ ಚಾಲನೆಯಲ್ಲಿರುವಾಗ ನನ್ನನ್ನು ಕರೆಯುವುದು ಸೂಕ್ತವೇ? ನಿನ್ನೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮನೆಗೆ ಪೊಲೀಸರು ಘೇರಾವ್ ಹಾಕಿದ್ದರು. ಪ್ರಜಾಪ್ರಭುತ್ವ ಹೀಗೆ ಉಳಿಯುತ್ತದೆಯೇ? ನಾವು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ? ನಾವು ಹೆದರುವುದಿಲ್ಲ, ನಾವು ಹೋರಾಡುತ್ತೇವೆ. ಈ ಸಮಸ್ಯೆಯನ್ನು ಚರ್ಚಿಸಲು ನಾವು ನಿಮಗೆ ಮನವಿ ಮಾಡುತ್ತೇವೆಈ ಎಂದು ಹೇಳಿದ್ದಾರೆ.

ಇದನ್ನೂ ಓದಿ : BREAKING : ಸಿಜೆಐ ರಮಣ ಉತ್ತರಾಧಿಕಾರಿಯಾಗಿ ನ್ಯಾ. ಯುಯು ಲಲಿತ್ ಹೆಸರು ಶಿಫಾರಸು!

ನರೇಂದ್ರ ಮೋದಿಯವರಿಗೆ ಹೆದರುವುದಿಲ್ಲ - ರಾಹುಲ್ ಗಾಂಧಿ 

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರಕ್ಕೆ ಹೆದರುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ. ತಮ್ಮ ಮನೆಯ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ನಾವು ಓಡಿಹೋಗುವುದಿಲ್ಲ, ನರೇಂದ್ರ ಮೋದಿಯವರಿಗೆ ಹೆದರುವುದಿಲ್ಲ. ಅವರು ಬಯಸಿದ್ದನ್ನು ಮಾಡಲಿ. ಅವರು ನಮ್ಮ ಮೇಲೆ ಒತ್ತಡ ಹೇರುವ ಮೂಲಕ ನಮ್ಮ ಧ್ವನಿಯನ್ನು ಮೊಟಕುಗೊಳಿಸಲು ಮುಂದಾಗಿದ್ದಾರೆ. ಆದರೆ ಅದು ಆಗುವುದಿಲ್ಲ. ಮೋದಿ ಮತ್ತು ಅಮಿತ್ ಶಾ ಏನೇ ಮಾಡಿದರೂ ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಗುಡುಗಿದ್ದಾರೆ.

ಗುರುವಾರ ಸಂಸತ್ತಿನಲ್ಲಿ ನಡೆದ ಕಾಂಗ್ರೆಸ್ ಸಂಸದರ ಸಭೆಗೆ ರಾಹುಲ್ ಗಾಂಧಿ ಹಾಜರಾಗಿರಲಿಲ್ಲ. ಇಲ್ಲಿನ ಹೆರಾಲ್ಡ್ ಹೌಸ್‌ಗೆ ಜಾರಿ ನಿರ್ದೇಶನಾಲಯ (ಇಡಿ) ಬಿಗ ಹಾಕಿದ ನಂತರ ಕಾಂಗ್ರೆಸ್ ಸಭೆ ಕರೆದಿದೆ. ಆಡಳಿತಾರೂಢ ಸರ್ಕಾರ ವಿರೋಧ ಪಕ್ಷದ ನಾಯಕರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆಗಸ್ಟ್ 5 ರಂದು ಕಾಂಗ್ರೆಸ್ ನಿಂದ ಪ್ರತಿಭಟನೆ

ವಿಶೇಷವಾಗಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಪ್ರಧಾನಿ ಭವನದ ಹೊರಗೆ ಪ್ರತಿಭಟನೆ ನಡೆಸಲಿದೆ. ಆದರೆ, ಈ ಪ್ರತಿಭಟನೆಗೆ ಅನುಮತಿ ನೀಡಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಆಗಸ್ಟ್ 15 ರಂದು ಭಾರತದ ವಿವಿಧೆಡೆ ದಾಳಿಗೆ ಉಗ್ರರ ಸಂಚು : ಪಾಕ್ ಮೂಲಕ ಮಿಶನ್ 15 ಆಗಸ್ಟ್ ಹುನ್ನಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News