ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಕ್ಯಾಮೆರಾದಲ್ಲಿ ಸೆರೆ!

ಚಿರತೆ ಸೆರೆ ಕಾರ್ಯಾಚರಣೆ ಮುಗಿಯುವವರೆಗೂ ಅರಣ್ಯ ಇಲಾಖೆ ಜೊತೆ ಸಹಕರಿಸಬೇಕು. ಗಾಲ್ಫ್ ಮೈದಾನ ಬಳಿ ವಾಯುವಿಹಾರಕ್ಕೆ ಬರದಂತೆ ಡಿಎಫ್‌ಒ ಮನವಿ ಮಾಡಿಕೊಂಡಿದ್ದಾರೆ.

Written by - Zee Kannada News Desk | Last Updated : Aug 9, 2022, 01:00 PM IST
  • ಬೆಳಗಾವಿಯ ಗಾಲ್ಫ್‌ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ
  • ಚಿರತೆ ಪತ್ತೆ ಬಗ್ಗೆ ಡಿಎಫ್ಓ ಆ್ಯಂಥೋನಿ ಮರಿಯಮ್ ದೃಢಪಡಿಸಿದ್ದಾರೆ
  • ಅರಣ್ಯ ಇಲಾಖೆ ಟ್ರ್ಯಾಪ್ ಕ್ಯಾಮೆರಾದಲ್ಲಿ ಕಳೆದ ರಾತ್ರಿ ಚಿರತೆ ಸೆರೆಯಾಗಿದೆ
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಕ್ಯಾಮೆರಾದಲ್ಲಿ ಸೆರೆ! title=
ಬೆಳಗಾವಿಯ ಗಾಲ್ಫ್‌ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ!

ಬೆಳಗಾವಿ: ಬೆಳಗಾವಿಯ ಗಾಲ್ಫ್‌ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಪತ್ತೆಯಾಗಿರುವ ಬಗ್ಗೆ ಡಿಎಫ್ಓ ಆ್ಯಂಥೋನಿ ಮರಿಯಮ್ ದೃಢಪಡಿಸಿದ್ದಾರೆ. ಅರಣ್ಯ ಇಲಾಖೆಯ ಟ್ರ್ಯಾಪ್ ಕ್ಯಾಮೆರಾದಲ್ಲಿ ಕಳೆದ ರಾತ್ರಿ ಚಿರತೆ ಸೆರೆಯಾಗಿದೆ ಎಂದು ಡಿಎಫ್ಓ ಆ್ಯಂಥೋನಿ ಹೇಳಿದ್ದಾರೆ. ಗಾಲ್ಫ್ ಮೈದಾನ ಪ್ರದೇಶದ ಒಳಗಡೆಯೇ ಚಿರತೆ ಅಡ್ಡಾಡುತ್ತಿದೆ. ಹೀಗಾಗಿ ಈ ಭಾಗದಲ್ಲಿ ಸಾರ್ವಜನಿಕರು ಓಡಾಡದಂತೆ ಅವರು ಮನವಿ ಮಾಡಿದ್ದಾರೆ.

ಚಿರತೆ ಸೆರೆ ಕಾರ್ಯಾಚರಣೆ ಮುಗಿಯುವವರೆಗೂ ಅರಣ್ಯ ಇಲಾಖೆ ಜೊತೆ ಸಹಕರಿಸಬೇಕು. ಗಾಲ್ಫ್ ಮೈದಾನ ಬಳಿ ವಾಯುವಿಹಾರಕ್ಕೆ ಬರದಂತೆ ಡಿಎಫ್‌ಒ ಮನವಿ ಮಾಡಿಕೊಂಡಿದ್ದಾರೆ. ಆಗಸ್ಟ್ 5ರ‌ಂದು ಜಾಧವ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಅಂದು ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿದ್ದ ಚಿರತೆ ನಂತರ ಗಾಲ್ಫ್ ಮೈದಾನ ಬಳಿಯ ಅರಣ್ಯ ಪ್ರದೇಶಕ್ಕೆ ನುಗ್ಗಿದೆ.

ಇದನ್ನೂ ಓದಿ: Har Ghar Tiranga: ರಾಜ್ಯದ 1 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ- ಸಿಎಂ ಬೊಮ್ಮಾಯಿ

ಗಾಲ್ಫ್ ಮೈದಾನದ ಬಳಿ ರಕ್ಷಣಾ ಇಲಾಖೆಗೆ ಸೇರಿದ 250 ಎಕರೆ ಪ್ರದೇಶದ ಅರಣ್ಯದಲ್ಲಿ ಚಿರತೆ ಬೀಡುಬಿಟ್ಟಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಶೋಧ ನಡೆಸುತ್ತಿದ್ದಾರೆ. 7 ಬೋನು, 16 ಟ್ರ್ಯಾಪ್ ಕ್ಯಾಮೆರಾ ಅಳವಡಿಸಿ ಚಿರತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಗದಗ, ದಾಂಡೇಲಿ, ಭೀಮಗಡ ಅರಣ್ಯ ವಲಯದ ತಜ್ಞ ಸಿಬ್ಬಂದಿ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿಲ್ಲವೆಂದಿದ್ದ ಅರಣ್ಯಾಧಿಕಾರಿ

ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆಯಿಂದ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಚಿರತೆ ಚಿತ್ರ ಸೆರೆಯಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಗಾಲ್ಫ್‌ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಚಿರತೆ ತಡರಾತ್ರಿ ಟ್ರ್ಯಾಕ್‌ ಕ್ಯಾಮೆರಾ ಮುಂದೆ ದಾಟಿ ಹೋಗಿದೆ ಅಂತಾ ಹೇಳಲಾಗಿತ್ತು. ಆದರೆ ಇದು ಬೆಳಗಾವಿಯಲ್ಲಿನ ಚಿರತೆಯ ಚಿತ್ರವಲ್ಲವೆಂದು ವಲಯ ಅರಣ್ಯಾಧಿಕಾರಿ ರಾಕೇಶ್ ಅರ್ಜುನವಾಡ ತಿಳಿಸಿದ್ದರು.

ಇದನ್ನೂ ಓದಿ: ಸುರಿದ ಭಾರೀ ಮಳೆಗೆ ಒಂದೇ ರಾತ್ರಿ 45 ಸಾವಿರ ಕೋಳಿಗಳ ಮಾರಣಹೋಮ

‘ಚಿರತೆಗೆ ಸಂಬಂಧಿಸಿದಂತೆ ನಕಲಿ ಚಿತ್ರ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳನ್ನು ನಂಬಿ ಜನ ಭಯಪಡುವ ಅಗತ್ಯವಿಲ್ಲ. ಚಿರತೆ ಸೆರೆಗೆ ಇಲಾಖೆಯಿಂದ ಎಲ್ಲ ರೀತಿಯ ಯತ್ನ ನಡೆದಿದೆ’ ಅಂತಾ ಅವರು ತಿಳಿಸಿದ್ದರು. ಇದೀಗ ಗಾಲ್ಫ್‌ ಮೈದಾನದಲ್ಲೇ ಚಿರತೆ ಪ್ರತ್ಯಕ್ಷವಾಗಿದ್ದು, ಈ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News