ಬೆಂಗಳೂರು: ಗಾರ್ಡನ್ ಸಿಟಿಯಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ಯುವತಿಯನ್ನು ಭೇಟಿಯಾಗಲು ಕರೆಸಿದ ದೂರದ ಸಂಬಂಧಿಯೊಬ್ಬ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ರಮೇಶ್ ಕಳೆದ 6 ನೇ ತಾರೀಖು ಯುವತಿಯನ್ನ ಭೇಟಿ ಮಾಡಬೇಕು ಎಂದು ಕಬ್ಬನ್ ಪಾರ್ಕ್ ಗೆ ಕರೆಸಿಕೊಂಡಿದ್ದ.
ಇದನ್ನೂ ಓದಿ: ಎಸಿಬಿ ರದ್ದು : 'ಹೈಕೋರ್ಟ್ ಆದೇಶ ನನಗೆ ಬಹಳ ಸಂತೋಷ ತಂದಿದೆ'
ದೂರದ ಸಂಬಂಧಿ ಅಪರೂಪಕ್ಕೆ ನಗರಕ್ಕೆ ಬಂದಿದ್ದಾನೆಂದು ಯುವತಿ ಕೂಡ ರಮೇಶನ ಮಾತು ನಂಬಿ ಕಬ್ಬನ್ ಪಾರ್ಕ್ ಗೆ ತೆರಳಿದ್ದಳು. ಈ ಸಮಯವನ್ನ ದುರುಪಯೋಗಪಡಿಸಿಕೊಂಡ ರಮೇಶ ಯುವತಿ ಮೇಲೆ ಮೃಗದೆಂತರಗಿದ್ದಾನೆ. ಘಟನೆಯಿಂದ ಶಾಕ್ ನಲ್ಲಿದ್ದ ಯುವತಿ ಮೂರು ದಿನದ ನಂತರ ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.
ಸದ್ಯ ಆರೋಪಿ ರಮೇಶ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆಯ ಮೂರನೇ ಡೋಸ್ ಪಡೆದವರು 17% ಮಾತ್ರ : ಸಚಿವ ಸುಧಾಕರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.