Rishabh Pant : ಕ್ರಿಕೆಟ್ ಮತ್ತು ಬಾಲಿವುಡ್ಗೆ ಸಂಬಂಧಿಸಿದಂತೆ ಸುದೀರ್ಘ ಇತಿಹಾಸವಿದೆ. ಹಲವು ಕ್ರಿಕೆಟಿಗರ ಜೊತೆ ಬಾಲಿವುಡ್ ನಟಿಯರ ಹೆಸರುಗಳು ತಾಲೂಕು ಹಾಕಿಕೊಂಡಿರುತ್ತದೆ. ಪ್ರಸ್ತುತ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ ಜೊತೆ ತಳಕು ಹಾಕಿಕೊಂಡಿದೆ. ಈ ಸುದ್ದಿ ಬಹಳ ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯುತ್ತಲೆ ಇದೆ. ಈ ಬಗ್ಗೆ ರಿಷಬ್ ಪಂತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಪಂತ್ ಹಂಚಿಕೊಂಡ ಈ ಪೋಸ್ಟ್ ಏನು?
ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಒಂದು ಸ್ಟೋರಿ ಶೇರ್ ಮಾಡಿಕೊಂಡಿದ್ದಾರೆ, ಪೋಸ್ಟ್ ಅಲ್ಲಿ. 'ನೀವು ನಿಯಂತ್ರಿಸಲಾಗದ ವಿಷಯಗಳ ಮೇಲೆ ಒತ್ತು ನೀಡಬೇಡಿ'(Dont Stress over what you connot control) ಎಂದು ಬರೆಯಲಾಗಿದೆ.
ಇದನ್ನೂ ಓದಿ : Ind vs Zim ವಿರುದ್ಧ ಮ್ಯಾಚ್ ನಲ್ಲಿ ಕ್ಯಾಪ್ಟನ್ ರಾಹುಲ್ ಗೆ ಅಸ್ತ್ರವಾಗಲಿದೆ ಈ 3 ಸ್ಫೋಟಕ ಆಟಗಾರರು!
ಇದೀಗ ಪಂತ್ ಅವರ ಇನ್ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ. ಇದು ಊರ್ವಶಿ ರೌಟೇಲಾಗೆ ಉತ್ತರ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗೆ
ನಟಿ ಊರ್ವಶಿ ರೌಟೇಲಾ ಕೂಡ ಟ್ವಿಟರ್ನಲ್ಲಿ, 'ಛೋಟು ಭಯ್ಯಾ ಬ್ಯಾಟ್ ಬಾಲ್ ಜೊತೆಗೆ ಆಡಬೇಕು. ಡಿಯರ್ ನಾನು ಮುನ್ನಿ ಅಲ್ಲ, ಯಂಗ್ ಕಿಡೋ ಡಾರ್ಲಿಂಗ್, ನಿನಗಾಗಿ ನಾನು ಹಾಳಾಗೋಕೆ ನಾನು ತಯಾರಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದರಿಂದಾಗಿ ವಿವಾದ ಹುಟ್ಟಿಕೊಂಡಿತ್ತು
ಸಂದರ್ಶನವೊಂದರಲ್ಲಿ ಊರ್ವಶಿ ರೌಟೇಲಾ, 'ನಾನು ವಾರಣಾಸಿಯಿಂದ ದೆಹಲಿಗೆ ಶೂಟಿಂಗ್ಗೆ ಬಂದಾಗ 'ಮಿಸ್ಟರ್ ಆರ್ಪಿ' ನನ್ನನ್ನು ಭೇಟಿಯಾಗಲು ಬಂದರು. ಅವರು ಲಾಬಿಯಲ್ಲಿ ಕಾಯುತ್ತಿದ್ದರು, ಆದರೆ ನಾನು ಮಲಗಿಬಿಟ್ಟೆ, ಅಡ್ಡ ಮೇಲೆ ನೋಡ್ತೀನಿ ನನ್ನ ಫೋನ್ನಲ್ಲಿ 16 ರಿಂದ 17 ಮಿಸ್ಕಾಲ್ಗಳು ಇದ್ದವು, ಆದರೆ ನಾನು ನಂತರ ಹೇಳಿದೆ ನೀವು ಮುಂಬೈಗೆ ಬಂದಾಗ ನಾವು ಭೇಟಿಯಾಗುತ್ತೇನೆ ಎಂದು ಹೇಳಿದ್ದೆ ಎಂದು ಮಾಧ್ಯಮದವರಿಗೆ ಹೇಳಿದ್ದರು. ಊರ್ವಶಿ ಹೀಗೆ ಹೇಳಿದ ಮೇಲೆ ಇಬ್ಬರ ನಡುವೆ ಸೋಶಿಯಲ್ ಮೀಡಿಯಾ ವಾರ್ ಶುರುವಾಯ್ತು.
ಇದನ್ನೂ ಓದಿ : Team India : ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮತ್ತೊಬ್ಬ ಬಲಿಷ್ಠ ಬ್ಯಾಟ್ಸ್ಮನ್!
ಈ ರೀತಿ ಉತ್ತರಿಸಿದ ಪಂತ್
ರಿಷಬ್ ಪಂತ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, 'ಕೆಲವರು ಮೋಜಿಗಾಗಿ ಸಂದರ್ಶನಗಳಲ್ಲಿ ಸುಳ್ಳು ಹೇಳುತ್ತಾರೆ, ಇದರಿಂದ ಅವರು ವಿಭಿನ್ನ ಹೆಡ್ ಲೈನ್ಸ್ ಮೂಲಕ ಸುದ್ದಿಯಲ್ಲಿ ಉಳಿಯಬಹುದು. ಜನರು ಖ್ಯಾತಿಗಾಗಿ ಎಷ್ಟು ಹಸಿದಿದ್ದಾರೆ ಎಂಬುದು ನೋವುಂಟುಮಾಡುತ್ತದೆ ಎಂದು ಪಂತ್, ನಟಿ ಊರ್ವಶಿ ರೌಟೇಲಾ ಅವರನ್ನು ಗೇಲಿ ಮಾಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.