Krishna Janmashtami 2022 Puja Samagri: ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಕೂಡ ಶ್ರೀ ಕೃಷ್ಣ ಜನ್ಮಾಷ್ಟಮಿಯ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಎಂಟನೆಯ ದಿನದಂದು ರೋಹಿಣಿ ನಕ್ಷತ್ರದಲ್ಲಿ ಕೃಷ್ಣ ಜನಿಸಿದ್ದ. ಕೃಷ್ಣ ಜನ್ಮಾಷ್ಟಮಿಯನ್ನು ಈ ವರ್ಷ ಆಗಸ್ಟ್ 18 ಮತ್ತು 19 ರಂದು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಬಾಲಗೋಪಾಲನ ಜನ್ಮದಿನದಂದು ಉಪವಾಸವಿದ್ದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಧ್ಯರಾತ್ರಿಯಲ್ಲಿ ಬಾಲಗೋಪಾಲನನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ, ಜೊತೆಗೆ ಜೀವನದಲ್ಲಿ ಹಣದ ಕೊರತೆಯೂ ಇರುವುದಿಲ್ಲ. ಶ್ರೀಕೃಷ್ಣನ ಆರಾಧನೆ ತುಂಬಾ ಮುಖ್ಯವಾಗಿದೆ. ಹೀಗಾಗಿ ಜನ್ಮಾಷ್ಟಮಿಯಂದು, ಶ್ರೀಕೃಷ್ಣನ ಪೂಜೆಗಾಗಿ ಯಾವ ಸಾಮಗ್ರಿಗಳನ್ನು ತೆಗೆದುಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ,
ಕೃಷ್ಣ ಜನ್ಮಾಷ್ಟಮಿ 2022 ಮುಹೂರ್ತ
>> ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಆಗಸ್ಟ್ 18 ರಂದು ರಾತ್ರಿ 9.21 ರಿಂದ ಪ್ರಾರಂಭವಾಗುತ್ತಿದೆ. ಅಷ್ಟಮಿ ತಿಥಿ ಆಗಸ್ಟ್ 19 ರಂದು ರಾತ್ರಿ 10:59 ಕ್ಕೆ ಕೊನೆಗೊಳ್ಳುತ್ತದೆ.
ಇದನ್ನೂ ಓದಿ-Janmashtami 2022: ಈ 4 ರಾಶಿಗಳು ಶ್ರೀಕೃಷ್ಣನಿಗೆ ತುಂಬಾ ಇಷ್ಟವಾದ ರಾಶಿಗಳು, ನಿಮ್ಮ ರಾಶಿ ಇದೆಯಾ ಈ ಪಟ್ಟಿಯಲ್ಲಿ
ಜನ್ಮಾಷ್ಟಮಿ 2022 ಪೂಜಾ ಸಾಮಗ್ರಿ
>> ಬಾಲಗೋಪಾಲನ ವಿಗ್ರಹ, ಆಸನ, ಕುಂಕುಮ, ಸಿಂಧೂರ, ಅಡಿಕೆ, ವೀಳ್ಯದೆಲೆ, ಹೂವಿನ ಹಾರ, ಕಮಲಗಟ್ಟ, ಹಳದಿ ಬಟ್ಟೆ, ಬಾಳೆ ಎಲೆ
>> ಕುಶ ಮತ್ತು ದೂರ್ವಾ, ಪಂಚಮೇವ, ಗಂಗಾಜಲ, ಜೇನುತುಪ್ಪ, ಸಕ್ಕರೆ, ತುಳಸಿ ಎಲೆಗಳು, ಶುದ್ಧ ತುಪ್ಪ, ಮೊಸರು, ಹಾಲು, ಋತುಮಾನಕ್ಕೆ ತಕ್ಕಂತೆ ಹಣ್ಣುಗಳು, ಸುಗಂಧ ದ್ರವ್ಯಗಳು, ಪಂಚಾಮೃತ, ಹೂವುಗಳು
>> ಕುಂಕುಮ, ಅಕ್ಷತ, ಆಭರಣ, ಹತ್ತಿ, ತುಳಸಿ ಮಾಲೆ, ಕೊತ್ತಂಬರಿ, ಅಬೀರ್ ಗುಲಾಲ್, ಅರಿಶಿನ, ಸಪ್ತಮೃತಿಕಾ, ಸಪ್ತಧಾನ, ತೊಟ್ಟಿಲು
>> ನೈವೇದ್ಯ ಅಥವಾ ಸಿಹಿತಿಂಡಿಗಳು, ಚಿಕ್ಕ ಏಲಕ್ಕಿ, ಲವಂಗ, ಅಗರಬತ್ತಿ, ಕರ್ಪೂರ, ಕುಂಕುಮ, ಶ್ರೀಗಂಧ, ಬೆಣ್ಣೆ, ಸಕ್ಕರೆ ಮಿಠಾಯಿ, ಕಲಶ, ದೀಪ, ಧೂಪ, ತೆಂಗಿನಕಾಯಿ, ಅಭಿಷೇಕಕ್ಕಾಗಿ ತಾಮ್ರ ಅಥವಾ ಬೆಳ್ಳಿಯ ಪಾತ್ರೆ.
>> ನವಿಲು ಗರಿಗಳು, ಕೊಳಲು, ಗೋವಿನ ಪ್ರತಿಮೆ, ವೈಜಯಂತಿ ಮಾಲೆ, ಕೆಂಪು ಬಟ್ಟೆ, ತುಳಸಿ ಎಲೆಗಳು, ಆಭರಣಗಳು, ದಪ್ಪ ಕಿರೀಟ, ಸೌತೆಕಾಯಿ, ಗಣೇಶನಿಗೆ ನೈವೇದ್ಯ ಮಾಡಲು ಬಟ್ಟೆ, ಅಂಬಿಕಾಗೆ ನೈವೇದ್ಯ ಮಾಡಲು ಬಟ್ಟೆ
ಇದನ್ನೂ ಓದಿ-Vastu Shastra: ಮರೆತೂ ಕೂಡ ಈ 4 ವಸ್ತುಗಳನ್ನು ಎರವಲು ಪಡೆಯಲೂ ಬೇಡಿ-ಕೊಡಲೂಬೇಡಿ, ಕೈಯಲ್ಲಿ ಹಣ ನಿಲ್ಲುವುದಿಲ್ಲ
ಜನ್ಮಾಷ್ಟಮಿಯಂದು ಶ್ರೀ ಕೃಷ್ಣನ ಈ ಮಂತ್ರಗಳನ್ನು ಪಠಿಸಿ
>> ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ
>> ಶ್ರೀ ಕೃಷ್ಣ ಗೋವಿಂದ ಹರೇ ಮುರಾರೆ, ಹೇ ನಾಥ ನಾರಾಯಣ ವಾಸುದೇವ
>> ಓಂ ನಮೋ ಭಗವತೇ ತಸ್ಮೈ ಕೃಷ್ಣಾಯ ಕುಂಠಮೇಧಸೇ । ಸರ್ವವ್ಯಾಧಿ ವಿನಾಶಾಯ ಪ್ರಭೋ ಮಾಮೃತಂ ಕೃಧಿ ।
>> ಓಂ ನಮೋ ಭಗವತೇ ಶ್ರೀ ಗೋವಿಂದಾ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.