ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಬದಲು ಪೋರ್ನ್ ವೆಬ್ ಸೈಟ್ ಲಿಂಕ್ ನಮೂದು: ಶಾಕ್ ಆದ ವಧು-ವರ!

ಮದುವೆಯ ಕಾರ್ಡ್ ಮುದ್ರಣವು ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ಹೆಸರು, ವಿಳಾಸ, ಪಠ್ಯ ಅಥವಾ ವೆಬ್‌ಸೈಟ್ ಹೆಸರಿನಂತಹ ತಪ್ಪುಗಳನ್ನು ಕಾರ್ಡ್‌ನಲ್ಲಿ ಮಾಡಲಾಗಿರುತ್ತದೆ. ಆದರೆ ಇಲ್ಲೊಂದು ಮದುವೆಯಲ್ಲಿ ಅತಿಥಿಗಳೆಲ್ಲ ದಂಗುಬಡಿಯುವ ರೀತಿಯಲ್ಲಿ ಕಾರ್ಡ್ ಗಳನ್ನು ಮುದ್ರಿಸಲಾಗಿತ್ತು.

Written by - Bhavishya Shetty | Last Updated : Aug 22, 2022, 02:37 PM IST
    • ಮದುವೆಯ ಕಾರ್ಡ್ ಮುದ್ರಣವು ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ
    • ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಬದಲು ಪೋರ್ನ್ ವೆಬ್ ಸೈಟ್ ಲಿಂಕ್ ನಮೂದು
    • ಮದುವೆ ಕಾರ್ಡ್ ಕಂಡು ಶಾಕ್ ಆದ ಅತಿಥಿಗಳು
ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಬದಲು ಪೋರ್ನ್ ವೆಬ್ ಸೈಟ್ ಲಿಂಕ್ ನಮೂದು: ಶಾಕ್ ಆದ ವಧು-ವರ! title=
Wedding Card Mistake

ಮದುವೆ ಎಂದರೆ ಅಲ್ಲಿ ಸಂಭ್ರಮ, ಸಂತೋಷ ಮನೆ ಮಾಡಿರುತ್ತದೆ. ಎಷ್ಟೇ ಸಂತೋಷವಿದ್ದರೂ ಸಹ ವಧು-ವರ ಮತ್ತು ಅವರ ಕುಟುಂಬಗಳಿಗೆ ಸಾಕಷ್ಟು ಒತ್ತಡವನ್ನು ತರುವ ಒಂದು ಹಂತವಾಗಿರುತ್ತದೆ. ಹಲವು ಬಾರಿ ಇಂತಹ ಸಮಾರಂಭಗಳಲ್ಲಿ ತಪ್ಪುಗಳು ನಡೆಯುತ್ತವೆ. ಅದು ಯಾರ ಗಮನಕ್ಕೂ ಬರುವುದಿಲ್ಲ. ಆದರೆ ಈ ತಪ್ಪುಗಳನ್ನು ಹಿಡಿದು ದೊಡ್ಡ ಸಮಸ್ಯೆ ಮಾಡುವ ಕೆಲವರು ಇದ್ದಾರೆ. 

ಇದನ್ನೂ ಓದಿ: ಮಗು ಜನಿಸಿದ ಕೂಡಲೇ ನಿಮ್ಮ ಖಾತೆಗೆ ಬೀಳುತ್ತೆ ಹಣ! ಕೇಂದ್ರದ ಈ ಯೋಜನೆ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ

ಮದುವೆಯ ಕಾರ್ಡ್ ಮುದ್ರಣವು ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ಹೆಸರು, ವಿಳಾಸ, ಪಠ್ಯ ಅಥವಾ ವೆಬ್‌ಸೈಟ್ ಹೆಸರಿನಂತಹ ತಪ್ಪುಗಳನ್ನು ಕಾರ್ಡ್‌ನಲ್ಲಿ ಮಾಡಲಾಗಿರುತ್ತದೆ. ಆದರೆ ಇಲ್ಲೊಂದು ಮದುವೆಯಲ್ಲಿ ಅತಿಥಿಗಳೆಲ್ಲ ದಂಗುಬಡಿಯುವ ರೀತಿಯಲ್ಲಿ ಕಾರ್ಡ್ ಗಳನ್ನು ಮುದ್ರಿಸಲಾಗಿತ್ತು. ಈ ಒಂದು ಮದುವೆಯ ಆಮಂತ್ರಣವು ಖಂಡಿತವಾಗಿಯೂ ಪ್ರೂಫ್ ರೀಡ್ ಇಲ್ಲದೆ ಹೋಗಿದೆ ಎಂದು ತೋರುತ್ತಿದೆ.

ಮಹಿಳೆಯೊಬ್ಬರು ತಮ್ಮ ಮದುವೆಯ ಆಮಂತ್ರಣದ ಬಗ್ಗೆ ತಮಾಷೆಯ ಕಥೆಯನ್ನು ಹಂಚಿಕೊಂಡ ನಂತರ ವೈರಲ್ ಆಗಿದೆ. ಅತಿಥಿಗಳನ್ನು ಅಧಿಕೃತ ವಿವಾಹ ವೆಬ್‌ಸೈಟ್‌ಗೆ ಕರೆದೊಯ್ಯಲು ಲಿಂಕ್ ಒಂದನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿರುತ್ತಾರೆ. ಆದರೆ ಅದು ತಪ್ಪಾಗಿ ಪೋರ್ನ್ ವೆಬ್‌ಸೈಟ್‌ ನ ಲಿಂಕ್ ಆಗಿರುತ್ತದೆ. ಇದನ್ನು ಕಂಡ ಅತಿಥಿಗಳು ಶಾಕ್ ಆಗಿದ್ದಾರೆ. ಮಹಿಳೆಯೊಬ್ಬರು ಆಮಂತ್ರಣದಲ್ಲಿ ವೆಬ್‌ಸೈಟ್ ಹೆಸರನ್ನು ತಪ್ಪಾಗಿ ಮುದ್ರಿಸಿರುವುದನ್ನು ಗಮನಿಸಿದ್ದಾರೆ, 

ಇದನ್ನೂ ಓದಿ: ಕೋಪ .! ಮದುವೆ ಮನೆಯಲ್ಲಿಯೇ ರಂಪಾಟ

ಈ ಬಗ್ಗೆ ಮಾತನಾಡಿರುವ ವಧು, “ಇಂದು ನನಗೆ ನನ್ನ ಮದುವೆಯ ಆಮಂತ್ರಣ ಮೇಲ್‌ನಲ್ಲಿ ಸಿಕ್ಕಿತು. ತುಂಬಾ ರೋಮಾಂಚನಕಾರಿಯಾದೆ. ನಾನು ಒಂದು ದೊಡ್ಡ ತಪ್ಪನ್ನು ಮಾಡಿದ್ದೇನೆ. ಇತರ ವಧುಗಳು ಅದೇ ತಪ್ಪನ್ನು ಮಾಡದಂತೆ ನಾನು ನಿಮ್ಮೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇನೆ, ಏಕೆಂದರೆ ಇದು ತುಂಬಾ ಸಾಮಾನ್ಯವಾಗಿದೆ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News