Viral Video : ಸಣ್ಣ ತಮಾಷೆಯಿಂದ ನೆತ್ತಿಗೇರಿತು ವರನ ಕೋಪ .! ಮದುವೆ ಮನೆಯಲ್ಲಿಯೇ ರಂಪಾಟ

Wedding Viral Video : ಮದುವೆ ಸಮಾರಂಭದ ವಿಡಿಯೋವೊಂದು ವೈರಲ್ ಆಗುತ್ತಿದೆ. ಮದುವೆಯ ನಂತರ ವರನೊಂದಿಗೆ ಮಾಡಿದ ಸಣ್ಣ ತಮಾಷೆಯೇ ಇಲ್ಲಿ ಚರ್ಚೆಯ ವಿಷಯ. ತಮಾಷೆಯಿಂದ ರೊಚ್ಚಿಗೆದ್ದ ವರ ಸ್ಥಳದಲ್ಲಿ ರಂಪಾಟ ಮಾಡಿದ್ದಾನೆ.   

Written by - Ranjitha R K | Last Updated : Aug 22, 2022, 02:20 PM IST
  • ವೈರಲ್ ಆಗುತ್ತಿದೆ ಮದುವೆ ಸಮಾರಂಭದ ವಿಡಿಯೋ
  • ತಮಾಷೆಯಿಂದ ಸಿಟ್ಟಾದ ವರ
  • ಸ್ಥಳದಲ್ಲಿ ಮಾಡಿಯೇ ಬಿಟ್ಟ ರಾದ್ದಾಂತ
Viral Video : ಸಣ್ಣ ತಮಾಷೆಯಿಂದ ನೆತ್ತಿಗೇರಿತು ವರನ ಕೋಪ .! ಮದುವೆ ಮನೆಯಲ್ಲಿಯೇ ರಂಪಾಟ  title=
Wedding viral video (photo instagram)

 Wedding Viral Video : ಮದುವೆಗೆ ಸಂಬಂಧಿಸಿದ ಸಾವಿರಾರು  ವೀಡಿಯೋಗಳು ಅಂತರ್ಜಾಲದಲ್ಲಿ ಕಾಣಸಿಗುತ್ತವೆ. ಪ್ರತಿದಿನವೂ  ಮದುವೆಗೆ ಸಂಬಂಧಿಸಿದ  ವೀಡಿಯೊಗಳು ಇಲ್ಲಿ ಅಪ್ಲೋಡ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ಮಾಮೂಲಿ ಎಂದೆನಿಸಿದರೆ, ಇನ್ನು ಕೆಲವು ಅಸಾಧಾರಣವಾಗಿರುತ್ತದೆ. ಇಲ್ಲಿ ಅಂಥದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ. ಮದುವೆಯ ನಂತರ ವರನೊಂದಿಗೆ ಮಾಡಿದ ಸಣ್ಣ ತಮಾಷೆಯೇ ಇಲ್ಲಿ ಚರ್ಚೆಯ ವಿಷಯ. ತಮಾಷೆಯಿಂದ ರೊಚ್ಚಿಗೆದ್ದ ವರ ಸ್ಥಳದಲ್ಲಿ ರಂಪಾಟ ಮಾಡಿದ್ದಾನೆ.  

ಹಾಸ್ಯಕ್ಕೆ ಸಿಟ್ಟಾದ ವರ :  
 ವೈರಲ್ ಆಗುತ್ತಿರುವ ವಿಡಿಯೋ ನೋಡಿದರೆ ಇಲ್ಲಿ ಮದುವೆಗೆ ಸಂಬಂಧಿಸಿದ ವಿಧಿವಿಧಾನಗಳು ಮುಕ್ತಾಯವಾಗಿದೆ ಎನ್ನುವುದು ತಿಳಿಯುತ್ತದೆ. ವರ ಸೇರಿದಂತೆ ಅನೇಕ ಜನರು ಊಟದ ಟೇಬಲ್ ನಲ್ಲಿ ಕುಳಿತಿರುವುದನ್ನು ಕಾಣಬಹುದು.  ವರನ ಮುಂದೆ ಬಗೆ ಬಗೆಯ ಭಕ್ಷ್ಯಗಳನ್ನು ಬಡಿಸಲಾಗಿದೆ. ಇಷ್ಟರಲ್ಲಿ ಅಲ್ಲಿಗೆ ಒಬ್ಬ ಯುವಕ ಬರುತ್ತಾನೆ. ಆ ಯುವಕ ಮತ್ತು ವರ ಅಲ್ಲೇ ಟೇಬಲ್ ನಲ್ಲಿದ್ದ ಕೇಕನ್ನು ಕತ್ತರಿಸುತ್ತಾರೆ. ಕೇಕ್ ಕಟ್ ಮಾಡಿದ ನಂತರ ಯುವಕ ವರನಿಗೆ ಕೇಕ್ ತಿನ್ನಿಸಲು ಬರುತ್ತಾನೆ. 
 
 ಇದನ್ನೂ ಓದಿ :
 Viral Video : ಹಕ್ಕಿಯನ್ನು ಹಿಡಿದು ತಿನ್ನಲು ಮುಂದಾಗಿತ್ತು ಬೆಕ್ಕು.! ಆದರೆ ಬಂದೇ ಬಿಟ್ಟಿತು ಹಕ್ಕಿಯ ಜೊತೆಗಾರ

ಕೇಕ್ ತಿನ್ನಿಸಲು ಬರುವ ಹೊತ್ತಿಗೆ ಯುವಕ ತಮಾಷೆ ಮಾಡುವ ಸಲುವಾಗಿ ಕೇಕನ್ನು ವರನ ಬಾಯಿಯಿಂದ ಹಿಂದಕ್ಕೆ ಕಸಿದುಕೊಳ್ಳುತ್ತಾನೆ. ಇಷ್ಟಕ್ಕೆ ಸಿಟ್ಟಾದ ವರ ಕೋಪದಿಂದ ಕೊತ ಕೊತ ಕುದಿಯುತ್ತಾನೆ. ಏನು ಮಾಡಬೇಕು ಎನ್ನುವುದು ಆತನಿಗೆ ಗೊತ್ತಾಗುವುದಿಲ್ಲ. ನಂತರ ಟೇಬಲ್ ಮೇಲಿದ್ದ ಕೇಕನ್ನೇ ವರ ಎಸೆದುಬಿಡುತ್ತಾನೆ. ವರನ ವರ್ತನೆ ನೋಡಿ ಅಲ್ಲಿದ್ದವರೆಲ್ಲಾ ಒಂದು ಕ್ಷಣಕ್ಕೆ ದಂಗಾಗಿ ಬಿಡುತ್ತಾರೆ. ಒಂದು ಸಣ್ಣ ತಮಾಷೆಯ ಪರಿಣಾಮ ಆ ರೀತಿ ಇರಬಹುದು ಎನ್ನುವುದನ್ನು ಅಲ್ಲಿದ್ದವರು ಯಾರೂ ಊಹಿಸಿರಲಿಕ್ಕಿಲ್ಲ. 

 

 
 
 
 

 
 
 
 
 
 
 
 
 
 
 

A post shared by memes comedy (@ghantaa)

ಇದನ್ನೂ ಓದಿ : Viral Video : ತನ್ನ ಗೆಳೆಯನನ್ನು ಬೇಟೆಯಾಡಲು ಬಂದ ಸಿಂಹದ ಮೇಲೆ ಎಮ್ಮೆಯ ಯಮಸ್ವರೂಪಿ ದಾಳಿ

ನಂತರ ಅಲ್ಲಿದ್ದವರೆಲ್ಲಾ ಸೇರಿ ವರನನ್ನು ಸಮಾಧಾನಪಡಿಸುತ್ತಾರೆ. ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಈ ವಿಡಿಯೋ ಕಂಡು  ಬಂದಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಘಂಟಾ ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ.

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News