ವಾಷಿಂಗ್ಟನ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಅನ್, ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎರಡನೇ ಬಾರಿಗೆ ಭೇಟಿಯಾಗಲು ಯತ್ನಿಸಿದ್ದಾರೆ. ಈ ಬಗ್ಗೆ ಕಿಮ್ ಜೋಂಗ್ ನಿಂದ "ಸಕಾರಾತ್ಮಕ ಪತ್ರ" ಪಡೆದಿರುವ ಬಗ್ಗೆ ವೈಟ್ ಹೌಸ್ ಸೋಮವಾರ ಮಾಹಿತಿಯನ್ನು ನೀಡಿದೆ. "ಅಧ್ಯಕ್ಷ ಕಿಮ್ ಜೋಂಗ್ ಅನ್ ಪತ್ರವನ್ನು ಸ್ವೀಕರಿಸಿದ್ದು, ಇದು ಅತ್ಯಂತ ಧನಾತ್ಮಕ ಪತ್ರವಾಗಿದೆ" ಎಂದು ಶ್ವೇತಭವನದ ವಕ್ತಾರ ಸಾರಾ ಸ್ಯಾಂಡರ್ಸ್ ವರದಿಗಾರರಿಗೆ ತಿಳಿಸಿದರು. ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತಗೊಳಿಸುವ ತನ್ನ ಬದ್ಧತೆಯನ್ನು ಉತ್ತರ ಕೊರಿಯಾ ಮುಂದುವರಿಸಿದೆ ಎಂದು ಅವರು ಹೇಳಿದರು.
ಮೈಕ್ ಪೊಂಪೆಯೊಗೆ ಪತ್ರ
ಉತ್ತರ ಕೊರಿಯಾ ನಾಯಕನಿಂದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪೇಕ್ಷಿಸುತ್ತಿದ್ದ ಪತ್ರ ವಿದೇಶಾಂಗ ಸಚಿವ ಮೈಕ್ ಪೊಂಪೆಯೊಗೆ ಸಿಕ್ಕಿದೆ ಎಂದು ಭಾನುವಾರ ವಿದೇಶ ಮಂತ್ರಾಲಯದ ಲಾಖೆಯ ಅಧಿಕಾರಿಯೊಬ್ಬರು ದೃಢಪಡಿಸಿದ್ದರು. ಆದರೆ ಆ ಪತ್ರ ಟ್ರಂಪ್ ಅವರಿಗೆ ತಲುಪಿದೆಯೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದರು.
ಕಿಮ್ ನ ಇತ್ತೀಚಿನ ಹೇಳಿಕೆಯು "ಅತ್ಯಂತ ಧನಾತ್ಮಕ" - ಟ್ರಂಪ್
ಪೊಂಪೆಯೊ ಶುಕ್ರವಾರ ಭಾರತದಿಂದ ಮರಳಿದರು. ಟ್ರಂಪ್ ಶುಕ್ರವಾರ ಮೊಂಟಾನಾ ಮತ್ತು ಡಕೋಟಾದಲ್ಲಿದ್ದರು. ಆ ನಂತರದಲ್ಲಿ ವೈಟ್ ಹೌಸ್ಗೆ ಮರಳಿದ ಟ್ರಂಪ್, ಕಿಮ್ನ ಇತ್ತೀಚಿನ ಹೇಳಿಕೆಯು "ಅತ್ಯಂತ ಸಕಾರಾತ್ಮಕವಾಗಿದೆ" ಎಂದು ಹೇಳಿದರು. ಅಮೇರಿಕಾ ಅಧ್ಯಕ್ಷ ಟ್ರಂಪ್ ತನ್ನ ಅಧಿಕಾರಾವಧಿಯಲ್ಲಿ ಉತ್ತರ ಕೊರಿಯಾವನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತಗೊಳಿಸಲು ಇಚ್ಛೆ ಹೊಂದಿದ್ದಾರೆ.