"ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ, ಗಮನಹರಿಸಿ" : ನಟ ಜಗ್ಗೇಶ್ ಮನವಿ

Actor Jaggesh : ರಾಜ್ಯ ಸಭಾ ಸದಸ್ಯ, ನಟ ಜಗ್ಗೇಶ್ ಸಹ ಮಳೆಯ ಅವಾಂತರಕ್ಕೆ ಪರದಾಡುವಂತಾಗಿದೆ. ನವರಸನಾಯಕ ಜಗ್ಗೇಶ್ ಅವರ ಮಾಯಸಂದ್ರದ ಮನೆಗೆ ನೀರು ನಿಗ್ಗಿದ್ದು, ಈ ಕುರಿತು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

Written by - Chetana Devarmani | Last Updated : Aug 28, 2022, 02:29 PM IST
  • ಕರ್ನಾಟಕದಾದ್ಯಂತ ವರುಣಾರ್ಭಟ
  • ಜನಜೀವನ ಸಂಪೂರ್ಣ ಅಸ್ತವ್ಯಸ್ತ
  • ನಟ ಜಗ್ಗೇಶ್ ಮನೆಗೆ ನುಗ್ಗಿದ ನೀರು
"ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ, ಗಮನಹರಿಸಿ" : ನಟ ಜಗ್ಗೇಶ್ ಮನವಿ  title=
ನಟ ಜಗ್ಗೇಶ್

ಕರ್ನಾಟಕದಾದ್ಯಂತ ವರುಣಾರ್ಭಟ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅನೇಕ ಕಡೆಗಳಲ್ಲಿ ಬೆಳೆ ಹಾನಿಯಾಗಿದ್ದು, ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ. ರಾಜ್ಯ ಸಭಾ ಸದಸ್ಯ, ನಟ ಜಗ್ಗೇಶ್ ಸಹ ಮಳೆಯ ಅವಾಂತರಕ್ಕೆ ಪರದಾಡುವಂತಾಗಿದೆ. ನವರಸನಾಯಕ ಜಗ್ಗೇಶ್ ಅವರ ಮಾಯಸಂದ್ರದ ಮನೆಗೆ ನೀರು ನಿಗ್ಗಿದ್ದು, ಈ ಕುರಿತು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: Bigg Boss Kannada OTT : ಬಿಗ್‌ ಬಾಸ್‌ನಿಂದ ನಿನ್ನೆ ಎಲಿಮಿನೇಟ್‌ ಆದವರು ಇವರೇ ನೋಡಿ

150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಜಗ್ಗೇಶ್ ಈಗ ರಾಜ್ಯಸಭಾ ಸದಸ್ಯರಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಜಗ್ಗೇಶ್‌ ಅವರ ಮನೆಗೆ ಸಹ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

 

 

ಅಲ್ಲದೇ, "ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ.. ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ.ಮಾಯಸಂದ್ರ ತಳದಲ್ಲಿ ಇರುವ ಸುಮಾರು 20ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿನಿಗಮ ಗಮನ ಹರಿಸಿ. ವಿನಂತಿ.." ಎಂದು ಜಗ್ಗೇಶ್‌ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ಅಭಿನಯ ಚಕ್ರವರ್ತಿಗೆ ಸರ್ಪ್ರೈಸ್‌ ನೀಡಿದ ಕರುನಾಡ ಚಕ್ರವರ್ತಿ‌..!‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News