ಭಾರತ ಕಂಡ ಶ್ರೇಷ್ಠ ಹಾಕಿ ಕ್ರೀಡಾಪಟು ಮೇಜರ್ ಧ್ಯಾನ್ ಚಂದ್ ಅವರ ಸ್ಮರಣಾರ್ಥ ಪ್ರತೀ ವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ, ಈ ದಿನವನ್ನು ಮೊದಲ ಬಾರಿಗೆ ಆಚರಣೆಗೆ ತರಲೆಂದು ಯೋಜನೆ ರೂಪಿಸಿ, ರಾಷ್ಟ್ರೀಯ ದಿನಗಳ ಪಟ್ಟಿಗೆ ಸೇರಿಸಿದ್ದು, 2012ರಲ್ಲಿ.
ದೇಶಾದ್ಯಂತ ಕ್ರೀಡೆಗೆ ಉತ್ತೇಜನ ನೀಡಬೇಕು, ಯುವಕರನ್ನು ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು ಎಂಬ ನಿಟ್ಟಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಈ ದಿನದಂದು ವಿಶೇಷ ಕ್ರೀಡಾಕೂಟ ಸೆಮಿನಾರ್ಗಳನ್ನು ಏರ್ಪಡಿಸಲಾಗುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಅಮಿತಾಬ್ ಬಚ್ಚನ್ ಪ್ರತಿಮೆ.. ಇದು ಭಾರತೀಯ - ಅಮೆರಿಕನ್ ಕುಟುಂಬದ ಅಭಿಮಾನ
ಇನ್ನು ರಾಷ್ಟ್ರೀಯ ಕ್ರೀಡಾ ದಿನದಂದು, ಭಾರತ ಸರ್ಕಾರವು ಕ್ರೀಡಾಪಟುಗಳಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ರಾಷ್ಟ್ರಪತಿ ಭವನದಲ್ಲಿ ಪ್ರತಿ ವರ್ಷ ವಿಶೇಷ ಸಮಾರಂಭವನ್ನು ನಡೆಸಿ, ರಾಷ್ಟ್ರಪತಿ ಈ ಪ್ರಶಸ್ತಿಗಳನ್ನು ನೀಡುತ್ತಾರೆ.
ವಿಶ್ವ ಕಂಡ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಜನಿಸಿದ್ದು, 1905ರ ಆಗಸ್ಟ್ 29ರಂದು. ಅಹಮದಾಬಾದ್ ನಲ್ಲಿ ಜನಿಸಿದ ಅವರು ಅತ್ಯುತ್ತಮ ಹಾಕಿ ಕ್ರೀಡಾಪಟು ಎಂದೇ ಖ್ಯಾತಿ ಗಳಿಸಿದವರು. ಇನ್ನು 2018ರಲ್ಲಿ ಈ ದಿನದ ಭಾಗವಾಗಿ ಖೇಲೋ ಇಂಡಿಯಾ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದರು.
ಧ್ಯಾನ್ ಚಂದ್ ಆಟಕ್ಕೆ ಮನಸೋತ ಹಿಟ್ಲರ್ ಹೇಳಿದ್ದೇನು ಗೊತ್ತಾ?
ಧ್ಯಾನ್ ಚಂದ್ ಕೇವಲ ಭಾರತ ಮಾತ್ರವಲ್ಲದೆ, ವಿಶ್ವದಾದ್ಯಂತ ಪ್ರಸಿದ್ಧಿ ಪಡೆದವರು. ಇವರ ಆಟದ ಶೈಲಿಗೆ ಮಾರುಹೋಗದವರು ಯಾರು ಇಲ್ಲ. ಇದಕ್ಕೆ ಒಂದು ಉದಾಹರಣೆ, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್. ಹೌದು ಹಿಟ್ಲರ್, ಧ್ಯಾನ್ ಚಂದ್ ಅವರನ್ನು ‘ದಾದಾ’ ಎಂದು ಕರೆಯುತ್ತಿದ್ದರಂತೆ. ಅಷ್ಟೇ ಅಲ್ಲದೆ, 1936ರ ಬರ್ಲಿನ್ ಒಲಿಂಪಿಕ್ಸ್ ವೇಳೆ ಧ್ಯಾನ್ ಚಂದ್ ಆಡಿದ ವೈಖರಿ ಕಂಡು ಬೆರಗಾದ ಹಿಟ್ಲರ್ ಜರ್ಮನ್ ದೇಶದಲ್ಲಿ ಪೌರತ್ವ ಮತ್ತು ಸೇನೆಯಲ್ಲಿ ಅತ್ಯುತ್ತಮ ಹುದ್ದೆಯನ್ನು ನೀಡುವುದಾಗಿ ಹೇಳಿದ್ದರು. ಆದರೆ ದೇಶಪ್ರೇಮಿಯಾಗಿದ್ದ ಧ್ಯಾನ್ ಚಂದ್ ಅವರ ಘೋಷಣೆಯನ್ನು ನಿರಾಕರಿಸಿದರು.
ಇದನ್ನೂ ಓದಿ: ಪಾಕ್ ಆಟಗಾರನ ಈ ಒಂದು ಕೆಲಸಕ್ಕೆ ಮೈದಾನವೇ ಪ್ರಶಂಸಿದೆ: ಯಾರಾತ? ಕಾರಣವೇನು?
1928, 1932 ಹಾಗೂ 1936ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟ ಖ್ಯಾತಿ ಧ್ಯಾನ್ ಚಂದ್ ಅವರಿಗೆ ಸಲ್ಲುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.