IND vs Pak : ಪಾಕ್ ವಿರುದ್ಧ ಈ ಇಬ್ಬರು ಆಟಗಾರ ಬಗ್ಗೆ ಎಚ್ಚರಿವಹಿಸಬೇಕಾಗಿದೆ ಕ್ಯಾಪ್ಟನ್ ರೋಹಿತ್!

ಪಾಕ್ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಈ ಆಟಗಾರರನ್ನು ಅತ್ಯಂತ ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕಿದೆ. ಹಾಗಿದ್ರೆ ಈ ಆಟಗಾರರು ಯಾರು? ಯಾಕೆ ಹೀಗೆ ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Sep 4, 2022, 12:56 PM IST
  • ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಯಾವಾಗಲೂ ಹೈ ವೊಲ್ಟೇಜ್
  • ಇಂದು ಟೀಂ ಇಂಡಿಯಾ ಸೂಪರ್-4 ರಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ
  • ಇದಕ್ಕಾಗಿ ಟೀಂ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ
IND vs Pak : ಪಾಕ್ ವಿರುದ್ಧ ಈ ಇಬ್ಬರು ಆಟಗಾರ ಬಗ್ಗೆ ಎಚ್ಚರಿವಹಿಸಬೇಕಾಗಿದೆ ಕ್ಯಾಪ್ಟನ್ ರೋಹಿತ್! title=

India vs Pakistan : ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಯಾವಾಗಲೂ ಹೈ ವೊಲ್ಟೇಜ್ ಆಗಿರುತ್ತೆ. ಇಂದು ಟೀಂ ಇಂಡಿಯಾ ಸೂಪರ್-4 ರಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಇದಕ್ಕಾಗಿ ಟೀಂ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಆದರೂ ಕ್ಯಾಪ್ಟನ್ ರೋಹಿತ್ ಈ ಇಬ್ಬರು ಆಟಗಾರರ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಹೌದು, ಈ ಆಟಗಾರರು ಟೀಂ ಇಂಡಿಯಾಗೆ ಹೊರೆಯಾಗಿ ಪರಿಣಮಿಸಿದ್ದಾರೆ. ಈ ಆಟಗಾರರು ಕ್ಯಾಪ್ಟನ್  ಶರ್ಮಾಗೆ ಸಮಸ್ಯೆಗಳನ್ನು ಸೃಷ್ಟಿಸುವವರಾಗಿದ್ದರೆ. ಹೀಗಾಗಿ, ಪಾಕ್ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಈ ಆಟಗಾರರನ್ನು ಅತ್ಯಂತ ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕಿದೆ. ಹಾಗಿದ್ರೆ ಈ ಆಟಗಾರರು ಯಾರು? ಯಾಕೆ ಹೀಗೆ ಇಲ್ಲಿದೆ ನೋಡಿ..

ಈ ಸ್ಪಿನ್ನರ್ ಫಾರ್ಮ್ ನಲ್ಲಿಲ್ಲ!

ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಫಾರ್ಮ್ ಗೆ ಬರುತ್ತಿಲ್ಲ. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ, ಚಹಾಲ್ ತುಂಬಾ ದುಬಾರಿ ಎಂದು ಸಾಬೀತಾಗಿದೆ. ಅವರು ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 32 ರನ್ ನೀಡಿ, ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ದುಬೈನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಈ ಪಿಚ್‌ಗಳಲ್ಲೂ ಚಹಲ್‌ಗೆ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಅವರು ಹಾಂಗ್ ಕಾಂಗ್ ವಿರುದ್ಧ ನಿರಿಸ ಪ್ರದರ್ಶನ ನೀಡಿದರು. ನಾಲ್ಕು ಓವರ್ ಗಳಲ್ಲಿ 18 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಹೀಗಾಗಿ, ನಾಯಕ ರೋಹಿತ್ ಶರ್ಮಾ ಸೂಪರ್-4 ಪಂದ್ಯದಲ್ಲಿ ತಮ್ಮ ನಾಲ್ಕು ಓವರ್ ಗಳನ್ನು ಅತ್ಯಂತ ಜಾಗರೂಕತೆಯಿಂದ ಕಳೆಯಬೇಕಾಗಿದೆ.

ಇದನ್ನೂ ಓದಿ : Asia Cup 2022: ಪಾಕಿಸ್ತಾನ ವಿರುದ್ಧ ಗೆಲ್ಲಲು ರೋಹಿತ್ ಶರ್ಮಾ ಮಾಸ್ಟರ್ ಪ್ಲಾನ್ ಏನು?

ತಂಡಕ್ಕೆ ಹೊರೆಯಾದ ಈ ಆಟಗಾರ 

ಭಾರತದ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಕಳಪೆ ಫಾರ್ಮ್‌ನಿಂದ ಸಂಕಷ್ಟದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. ಹಾಗೆ, ಹಾಂಗ್ ಕಾಂಗ್ ವಿರುದ್ಧ ಅವರ ಪ್ರದರ್ಶನ ನೀರಸವಾಗಿತ್ತು. ಟೀಂ ಇಂಡಿಯಾದ ಬೋಟ್ ಅನ್ನು ಮಧ್ಯದಲ್ಲಿ ಬಿಟ್ಟು ಪೆವಿಲಿಯನ್ ಗೆ ಮರಳಿದರು. ರಾಹುಲ್ ಆರಂಭಿಕ ಔಟಾದ ಕಾರಣ ನಂತರದ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೆಚ್ಚಿದ್ದು, ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುತ್ತಿಲ್ಲ. ಅವರು ಟಿ20 ವಿಶ್ವಕಪ್‌ಗೆ ಮೊದಲು ಫಾರ್ಮ್‌ಗೆ ಬರುವುದು ಬಹಳ ಮುಖ್ಯ.

ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ ಭಾರತ 

ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾಕಪ್‌ನಲ್ಲಿ ಇದುವರೆಗೆ 15 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ತಂಡ ತನ್ನ ಹೆಸರಿನಲ್ಲಿ 9 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಪಾಕಿಸ್ತಾನ ತಂಡವು ಕೇವಲ 5 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಟೀಂ ಇಂಡಿಯಾ ಏಷ್ಯಾಕಪ್ ಪ್ರಶಸ್ತಿಯನ್ನು ಅತಿ ಹೆಚ್ಚು 7 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 2 ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ : Asia Cup 2022: ಈ ಅಪಾಯಕಾರಿ ಆಟಗಾರ ದಿಢೀರ್ ಟೀಂ ಇಂಡಿಯಾಗೆ ಸೇರ್ಪಡೆ..!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News