Video : ಪ್ರೀತಿಯ ಮುತ್ತಿಟ್ಟು ಶಿಕ್ಷಕಿಯ ಕೋಪ ತಣ್ಣಗಾಗಿಸಲು ಪುಟಾಣಿ ವಿದ್ಯಾರ್ಥಿಯ ಪ್ರಯತ್ನ

Teacher Student Viral Video: ಈಗ ಕಾಲ ಬದಲಾಗಿದೆ. ಶಿಕ್ಷಕರು ಮಕ್ಕಳ ಮೇಲೆ ಕೈ ಮಾಡುವಂತಿಲ್ಲ. ಏನಿದ್ದರೂ ಮಾತಿನಲ್ಲೇ ಮಕ್ಕಳನ್ನು ನಿಯಂತ್ರಿಸಬೇಕು. ಅಪ್ಪಿ ತಪ್ಪಿ ಟೀಚರ್ ಕೈ ಎತ್ತಿದರೆ ಮಾರನೇ ದಿನ ಶಾಲೆಯ ಮುಂದೆ ಪೋಷಕರ ದಂಡೇ ಸೇರುತ್ತದೆ.   

Written by - Ranjitha R K | Last Updated : Sep 13, 2022, 10:28 AM IST
  • ಕೋಪಗೊಂಡ ಶಿಕ್ಷಕಿಯ ಮನವೊಲಿಸುವ ಪುಟಾಣಿ
  • ತಬ್ಬಿ ಮುತ್ತು ನೀಡಿ ಕ್ಷಮೆಯಾಚನೆ
  • ವೈರಲ್ ಆಗುತ್ತಿದೆ ಈ ಮುದ್ದು ಮಗುವಿನ ವಿಡಿಯೋ
Video : ಪ್ರೀತಿಯ ಮುತ್ತಿಟ್ಟು  ಶಿಕ್ಷಕಿಯ ಕೋಪ ತಣ್ಣಗಾಗಿಸಲು ಪುಟಾಣಿ ವಿದ್ಯಾರ್ಥಿಯ ಪ್ರಯತ್ನ  title=
Teacher Student Viral Video (photo twitter)

Teacher Student Viral Video : ಮಕ್ಕಳು ದೇವರ ಸಮಾನ. ಅವರ ಮನಸ್ಸಿನಲ್ಲಿ ಕಲ್ಮಶ ಇರುವುದಿಲ್ಲ. ತಮ್ಮ ಮನಸ್ಸಿಗೆ ತೋಚಿದಂತೆ ಮಾತನಾಡುತ್ತಾರೆ. ಕೆಲಸ ಮಾಡುತ್ತಾರೆ. ಒಮ್ಮೊಮ್ಮೆ ಅವರು ಮಾಡುವ ಕೆಲಸವನ್ನು ಸಹಿಸುವುದು ಕಷ್ಟವಾಗುತ್ತದೆ. ಆದರೆ ಮಕ್ಕಳು ತಮ್ಮ ಮನಸ್ಸಿನ ಭಾವನೆ ವ್ಯಕ್ತಪಡಿಸಲು ಹಿಂದೆ ಮುಂದೆ ಯೋಚಿಸುವುದಿಲ್ಲ. ಅದು ಕೋಪವಾದರೂ ಸರಿ, ಪ್ರೀತಿಯಾದರೂ ಸರಿ. ತಮ್ಮ ಭಾವನೆಯನ್ನು ಒಂದು ಚೂರೂ ಅಳುಕಿಲ್ಲದೆ ವ್ಯಕ್ತಪಡಿಸಿ ಬಿಡುತ್ತಾರೆ. 

ಹಿಂದೆಲ್ಲಾ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರು, ಹಿಡಿದು ಬಾರಿಸಿಬಿಡುತ್ತಿದ್ದರು. ಶಿಕ್ಷಕರ ಕೈಯಲ್ಲಿ ಯಾವಾಗಲೂ ಒಂದು ಬೆತ್ತ  ಇದ್ದೇ ಇರುತ್ತಿತ್ತು. ಆ ಬೆತ್ತಕ್ಕೆ ಹೆದರಿಯೇ ವಿದ್ಯಾರ್ಥಿಗಳು ತೀಟೆ ಮಾಡುವ ಯೋಚನೆ ಕೂಡಾ ಮಾಡುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಶಿಕ್ಷಕರು ಮಕ್ಕಳ ಮೇಲೆ ಕೈ ಮಾಡುವಂತಿಲ್ಲ. ಏನಿದ್ದರೂ ಮಾತಿನಲ್ಲೇ ಮಕ್ಕಳನ್ನು ನಿಯಂತ್ರಿಸಬೇಕು. ಅಪ್ಪಿ ತಪ್ಪಿ ಟೀಚರ್ ಕೈ ಎತ್ತಿದರೆ ಮಾರನೇ ದಿನ ಶಾಲೆಯ ಮುಂದೆ ಪೋಷಕರ ದಂಡೇ ಸೇರುತ್ತದೆ. ಇದರ ಲಾಭವನ್ನು ಮಕ್ಕಳು ಬಹಳ ಚೆನ್ನಾಗಿ ತೆಗೆದುಕೊಳ್ಳುತ್ತಾರೆ.   

ಇದನ್ನೂ ಓದಿ : Viral Video : ಬಾರ್ ಹೊರಗೆ ಹುಡುಗ ಹುಡುಗಿಯ ಬಿಗ್ ಫೈಟ್..! ಬಿಡಿಸಲು ಹೋಗಿ ಸೋತು ಸುಣ್ಣಾದ ಜನ

ಇಲ್ಲಿ ಪುಟಾಣಿ ವಿದ್ಯಾರ್ಥಿ ಮತ್ತು ಶಿಕ್ಷಕಿಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ತಿಳಿಯುತ್ತದೆ ಮಗು, ತನ್ನ ಶಿಕ್ಷಕಿಯನ್ನು ಬಹಳವಾಗಿಯೇ ಸತಾಯಿಸಿದೆ ಎನ್ನುವುದು. ಆದರೆ ಯಾವಾಗ ಟೀಚರ್ ನಾನಿನ್ನು ನಿನ್ನ ಬಳಿ ಮಾತನಾಡುವುದಿಲ್ಲ, ನಿನ್ನಿಂದ ನನಗೆ ಬೇಜಾರಾಗಿದೆ ಎಂದು ಸಪ್ಪೆ ಮೋರೆ ಹಾಕಿ  ಕೂರುತ್ತಾರೋ , ಮಗುವಿಗೆ ತಡೆಯಲಾಗುವುದಿಲ್ಲ. ಆ ಪುಟಾಣಿ ತನ್ನ ಟೀಚರ್ ಬಳಿ ಬಂದು ನಾನಿನ್ನು ಸುಮ್ಮನಿರುತ್ತೇನೆ, ತಪ್ಪನ್ನು ತಿದ್ದಿಕೊಳ್ಳುತ್ತೇನೆ ಎಂದು ಶಿಕ್ಷಕಿಯ ಮನವೊಲಿಸಲು ಪ್ರಯತ್ನಿಸುತ್ತದೆ. ಮಾತಿನ ಮಧ್ಯೆ ಪದೇ ಪದೇ ಶಿಕ್ಷಕಿಯನ್ನು ತಬ್ಬಿಕೊಳ್ಳುತ್ತದೆ. ಅಪ್ಪಿ ಮುತ್ತು ನೀಡುತ್ತದೆ. 

 

ಕೋಪಗೊಂಡಂತೆ ವರ್ತಿಸುವ ಶಿಕ್ಷಕಿ ಕೂಡಾ ಮಗು ಅಪ್ಪಿ ಮುದ್ದಾಡುವಾಗ ಸಂಭ್ರಮಿಸುತ್ತಾರೆ. ಶಿಕ್ಷಕಿಯ ಸಂತೋಷ ಅವರ ಮುಗುಳ್ನಗೆಯಲ್ಲಿ ಸ್ಪಷ್ಟವಾಗಿ  ಕಾಣಿಸುತ್ತದೆ. ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಡುವುದು, ಬುದ್ದಿ ಕಲಿಸಿಕೊಡುವುದು ಬಹಳ ಕಷ್ಟದ ಕೆಲಸ. ಆದರೆ ಅದರಲ್ಲಿ ಸಿಗುವ ಖುಷಿ ಮಾತ್ರ ಬೆಲೆ ಕಟ್ಟಲಾಗದ್ದು.  

ಇದನ್ನೂ ಓದಿ :  Viral Video : ಸಿಂಧೂರ ಹಚ್ಚಲು ಪುರೋಹಿತರು ಹೇಳುತ್ತಿದ್ದಂತೆ ವರ ಮಾಡಿದ ಕೆಲಸಕ್ಕೆ ನಾಚಿ ನೀರಾದದ್ದು ವಧು ಮಾತ್ರವಲ್ಲ ಅತ್ತೆ ಕೂಡಾ .!
    
ಈ ವಿಡಿಯೋವನ್ನು  @ChapraZila ಹೆಸರಿನ ಖಾತೆಯಿಂದ ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News