Bride Groom Video : ಮದುವೆ ನಿಗದಿಯಾಗುತ್ತಿದ್ದಂತೆಯೇ ಹೆಣ್ಣು ಗಂಡಿನ ಮನಸ್ಸಿನಲ್ಲಿ ನಾನಾ ರೀತಿಯ ಭಾವನೆಗಳು ಮೂಡಲು ಆರಂಭವಾಗುತ್ತದೆ. ಅಲ್ಲಿ ಸಂತೋಷ, ಸಂಭ್ರಮದ ಮಧ್ಯೆ ಒಂದು ರೀತಿಯ ಆತಂಕ ಕೂಡಾ ಇರುತ್ತದೆ. ಹೆಣ್ಣಿನ ಮನಸ್ಸಿನಲ್ಲಿ ಭಯ ತುಸು ಹೆಚ್ಚೇ ಇರುತ್ತದೆ. ಯಾಕೆಂದರೆ ಮದುವೆಯ ನಂತರ ಹೆಣ್ಣಿನ ಜೀವನದಲ್ಲಿ ಎಲ್ಲವೂ ಬದಲಾಗುತ್ತದೆ. ಸ್ವಾತಂತ್ರ್ಯ , ಸಮಾನತೆ ಎಂದು ಎಷ್ಟೇ ಮಾತನಾಡಿದರೂ ಮೊದಲಿನ ಸ್ವಾತಂತ್ರ ಸ್ವಚ್ಚಂದಕ್ಕೆ ಸ್ವಲ್ಪ ಮಟ್ಟಿನ ತಡೆ ಖಂಡಿತಾ ಬೀಳುತ್ತದೆ. ಮದುವೆಯ ಮೊದಲಿನ ಜೀವನಕ್ಕೂ ನಂತರದ ಜೀವನಕ್ಕೂ ಭಾರೀ ವ್ಯತ್ಯಾಸ ಇರುತ್ತದೆ. ತಾನಿಡುವ ಹೆಜ್ಜೆ ಎಲ್ಲಿ ತಪ್ಪಾಗಿ ಬಿಡುವುದೋ ಎಂಬ ಆತಂಕದಲ್ಲಿಯೇ ನಡೆಯುತ್ತಾಳೆ.
ಇನ್ನು ಮದುವೆ ಅದೆಷ್ಟೇ ಅದ್ದೂರಿಯಾಗಿ ನಡೆದರೂ, ಆ ಸಂಭ್ರಮದ ಬಳಿಕ ತಾನು ಹುಟ್ಟಿ ಬೆಳೆದ ಮನೆಯನ್ನು, ತನ್ನ ಸಣ್ಣ ಸಣ್ಣ ಸಂತೋಷ ನೋವಿನಲ್ಲಿ ಜೊತೆಗಿದ್ದವರನ್ನು ಬಿಟ್ಟು ನಡೆಯುವ ನೋವು ಹೆಣ್ಣನ್ನು ಕಾಡುತ್ತದೆ. ತಾನು ತನ್ನವರನ್ನು ಬಿಟ್ಟು ಪರಿಚಯವೇ ಇಲ್ಲದ ಕುಟುಂಬವನ್ನು ಆಕೆ ಸೇರಬೇಕಾಗುತ್ತದೆ.
ಇದನ್ನೂ ಓದಿ : Viral Video : ಹಾರ ಬದಲಾಯಿಸುತ್ತಿದ್ದಂತೆಯೇ ವರನ ಕೆನ್ನೆಗೆ ರಪ ರಪನೆ ಬಾರಿಸಿ ಮಂಟಪ ಬಿಟ್ಟು ಕೆಳಗಿಳಿದ ವಧು
ಆದರೆ ಬಾಳಲ್ಲಿ ಜೊತೆಯಾಗಲು ಬರುವ ಹುಡುಗ, ತವರು ಮನೆಯ ಎಲ್ಲಾ ಪ್ರೀತಿ ವಿಶ್ವಾಸ ನಂಬಿಕೆಗಳನ್ನು ಹೊತ್ತು ತರುವುದೂ ಉಂಟು. ಯಾರೇನೆ ಅನ್ನಲಿ, ಯಾರೇನೇ ಮಾಡಲಿ ಹಿಡಿದ ಕೈ ಬಿಡುವುದಿಲ್ಲ ಎಂದು ಜೊತೆಯಾಗಿ ಸಾಗುತ್ತಾನೆ. ತಾನು ಜೀವನ ಪೂರ್ತಿ ನಿನ್ನ ಸುಖ ಸಂತೋಷದ ಕಾಳಜಿ ವಹಿಸುತ್ತೇನೆ. ಜೀವನದುದ್ದಕ್ಕೂ ಪ್ರೀತಿಯನ್ನೇ ಉಣ ಬಡಿಸುತ್ತೇನೆ ಎನ್ನುವ ಸಂದೇಶವನ್ನು ಕೂಡಾ ಹುಡುಗ ನೀಡಿ ಬಿಡುತ್ತಾನೆ. ಹೌದು ಇಲ್ಲೊಂದು ಮದುವೆಯಲ್ಲೂ ವರ ಎಲ್ಲರೆದುರು ಇಂಥಹ ಸೂಚನೆ ನೀಡಿದ್ದಾನೆ..
ಈ ವೈರಲ್ ವಿಡಿಯೋದಲ್ಲಿ ಪುರೋಹಿತರು ವಧುವಿನ ಹಣೆಗೆ ಸಿಂಧೂರ ಹಚ್ಚುವನ್ಯೇ ವರನಿಗೆ ಹೇಳುತ್ತಾರೆ. ಸಿಂಧೂರ ಹಚ್ಚಲು ಎದ್ದು ನಿಂತ ವರ ಮೊದಲು ವಧುವಿನ ಹಣೆಯನ್ನು ಚುಂಬಿಸುತ್ತಾನೆ. ನಂತರ ಹಣೆಗೆ ಸಿಂಧೂರ ಹಚ್ಚುತ್ತಾನೆ. ವರನ ಈ ನಡವಳಿಕೆಯಿಂದ ವಧು ನಾಚಿದ್ದಂತೂ ಸುಳ್ಳಲ್ಲ. ವಧು ಮಾತ್ರ ಯಾಕೆ ವಧುವಿನ ಪಕ್ಕದಲ್ಲಿ ನಿಂತಿದ್ದ ವಧುವಿನ ತಾಯಿ ಕೂಡಾ ನಾಚುತ್ತಾರೆ. ಆದರೆ ವರನ ಈ ಕೃತ್ಯದ ಹಿಂದೆ ಬಹಳಷ್ಟು ಅರ್ಥ ಅಡಗಿದೆ ಎಂದರೂ ತಪ್ಪಲ್ಲ.
ಇದನ್ನೂ ಓದಿ : Viral Video: ಆಸ್ಪತ್ರೆ ಒಳಗೆ ಪ್ರವೇಶಿಸಿದ ದೈತ್ಯ ಆನೆ, ಮುಂದೆ...
the_wedding_dance_india ಹೆಸರಿನ Instagram ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ವೀಕ್ಷಣೆಗಳು ಬಂದಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.