Poltics On Cheetah: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು (ಸೆಪ್ಟೆಂಬರ್ 17) ನಮೀಬಿಯಾದಿಂದ ತಂದ 8 ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಗೊಳಿಸಿದ್ದಾರೆ. ಈ ಚಿರತೆಗಳ ಆಗಮನದಿಂದ ದೇಶದಲ್ಲಿ ಒಂದೆಡೆ ಸಂತಸದ ವಾತಾವರಣ ಇದ್ದರೆ, ಮತ್ತೊಂದೆಡೆ ರಾಜಕೀಯವೂ ಶುರುವಾಗಿದೆ. ಮೊದಲಿಗೆ ಈ ಚಿರತೆಗಳನ್ನು ಭಾರತಕ್ಕೆ ತರಲು ಕಾಂಗ್ರೆಸ್ ತನ್ನ ಹಕ್ಕು ಮಂಡಿಸಿತ್ತು ಮತ್ತು ಇದೀಗ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ 8 ಚಿರತೆಗಳ ನೆಪ ಮಾಡಿಕೊಂಡು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು, "ಮೋದಿ ಸರ್ಕಾರ ತಂದ 8 ಚಿರತೆಗಳ ಹೆಸರುಗಳು: 1) ನಿರುದ್ಯೋಗ 2) ಹಣದುಬ್ಬರ 3) ಬಡತನ 4) ಹಸಿವು 5) ಕೋಮುವಾದ 6) ದ್ವೇಷ 7) ಹಿಂಸಾಚಾರ 8) ಹತ್ತಿಕ್ಕುವಿಕೆ ಆಗಿದ್ದು, ಅವುಗಳನ್ನು ಭಾರತದ ಜನರಿಗೆ ಮುಕ್ತವಾಗಿ ಬಿಡಲಾಗಿದೆ", ಎಂದಿದ್ದಾರೆ.
मोदी सरकार द्वारा लाए किए गए 8 चीतों के नाम:
1) बेरोज़गारी
2) महँगाई
3) गरीबी
4) भुखमरी
5) सम्प्रदायिकता
6) नफ़रत
7) हिंसा
8) दमनऔर उन्हें भारत के लोगों पर खुला छोड़ दिया गया है।
— Mallikarjun Kharge (@kharge) September 19, 2022
ಜೈರಾಮ್ ರಮೇಶ್ ಹೇಳಿದ್ದೇನು?
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ನಮೀಬಿಯಾದಿಂದ ತಂದ ಚಿರತೆಗಳ ಬಗ್ಗೆ ಈ ಮೊದಲು ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಕುರಿತು ಟ್ವೀಟ್ ಮಾಡಿದ್ದ ಅವರು, "ಪ್ರಧಾನಿ ಆದಲಿತಗಳಲ್ಲಿನ ನಿರಂತರತೆಯನ್ನು ಅಪರೂಪವಾಗಿ ಒಪ್ಪಿಕೊಳ್ಳುತ್ತಾರೆ. ಚೀತಾ ಯೋಜನೆಗಾಗಿ 25.04.2010 ರಂದು ಕೇಪ್ ಟೌನ್‌ಗೆ ನಾನು ಭೇಟಿ ನೀಡಿದ್ದು ಇತ್ತೀಚಿನ ಉದಾಹರಣೆಯಾಗಿದೆ. #BharatJodoYatra ಅನ್ನು ಹತ್ತಿಕ್ಕುವ ಮತ್ತು ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಇದಾಗಿದೆ" ಎಂದಿದ್ದರು.
ಇದನ್ನೂ ಓದಿ-ಸಹಕಾರಿ ಸಂಸ್ಥೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಭಾರೀ ಹಿನ್ನಡೆ...!
ಇದಕ್ಕೂ ಮುಂದುವರೆದು ಮಾತನಾಡಿದ್ದ ಜೈರಾಮ್ ರಮೇಶ್, ತಮ್ಮ ಮುಂದಿನ ಟ್ವೀಟ್‌ನಲ್ಲಿ, "2009-11ರಲ್ಲಿ ಮೊದಲ ಬಾರಿಗೆ ಪನ್ನಾ ಮತ್ತು ಸರಿಸ್ಕಾಗೆ ಹುಲಿಗಳನ್ನು ಸ್ಥಳಾಂತರಿಸಿದಾಗ ಅನೇಕ ಜನರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಅವರ ಆತಂಕ ತಪ್ಪು ಎಂದು ಸಾಬೀತಾಗಿದೆ. ಚೀತಾ ಯೋಜನೆಯಲ್ಲಿ ಇದೇ ರೀತಿಯ ಭವಿಷ್ಯವಾಣಿಗಳು ಮಾಡಲಾಗುತ್ತಿದೆ. ಆದರೆ ಯೋಜನೆಯಲ್ಲಿರುವ ವೃತ್ತಿಪರರು ತುಂಬಾ ಒಳ್ಳೆಯವರು. ಈ ಯೋಜನೆಗೆ ನಾನು ನಿಮಗೆ ಶುಭ ಹಾರೈಸುತ್ತೇನೆ!" ಎಂದಿದ್ದರು.
ಇದನ್ನೂ ಓದಿ-Watch: ಪುಟ್ಟ ಬಾಲಕಿಗೆ ಚಪ್ಪಲಿ ಧರಿಸಲು ನೆರವಾದ ರಾಹುಲ್ ಗಾಂಧಿ..!
ಕಿಡಿ ಕಾರಿದ್ದ ಕನ್ಹಯ್ಯಾ ಕುಮಾರ್
ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಕೂಡ ಚಿರತೆಗಳ ಪುನರ್ವಸತಿ ಕುರಿತು ಪ್ರತಿಕ್ರಿಯೆ ನೀಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಕನ್ಹಯ್ಯಾ, "ವಿದೇಶದಲ್ಲಿರುವ ಕಪ್ಪುಹಣ ತರುತ್ತೇವೆ ಎಂದಿದ್ದರು, ಆದರೆ ಚಿರತೆ ತಂದಿದ್ದಾರೆ!! ಇದೇ ಸರ್ಕಾರದ ದೊಂಬರಾಟ, ರೇಷನ್ ಬೇಕು, ಭಾಷಣ ಕೊಡುತ್ತಾರೆ, ನೌಕರಿ ಬೇಕು, ನಾಟಕ ಮಾಡುತ್ತಾರೆ" ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.