ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿಯೇ ಟೀಂ ಇಂಡಿಯಾ ಮುಗ್ಗರಿಸಿದೆ. ಬೃಹತ್ ಮೊತ್ತದ ಟಾರ್ಗೆಟ್ ನೀಡಿದರೂ ಸಹ ಕಳಪೆ ಬೌಲಿಂಗ್‍ನಿಂದಾಗಿ ರೋಹಿತ್ ಪಡೆ ಸೋಲು ಕಾಣಬೇಕಾಯಿತು. ಹಾಗಾದ್ರೆ ಮೊಹಾಲಿ ಪಂದ್ಯದ ಸೋಲಿಗೆ ಯಾರು ಹೊಣೆ? ಇದಕ್ಕೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಉತ್ತರಿಸಿದ್ದಾರೆ. ಆಸೀಸ್ ಎದುರು ಹೆಚ್ಚು ರನ್ ಬಿಟ್ಟುಕೊಟ್ಟ ಅನುಭವಿ ವೇಗಿ ಮೇಲೆ ಅವರು ಗರಂ ಆಗಿದ್ದಾರೆ.
ಹೌದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಡೆತ್ ಓವರ್‌ಗಳಲ್ಲಿ ಪದೇ ಪದೇ ತಂಡದ ವೈಫಲ್ಯಕ್ಕೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಕಾರಣವೆಂದು ಆರೋಪಿಸಿದ್ದಾರೆ. ಮೊಹಾಲಿಯಲ್ಲಿ ಮಂಗಳವಾರ ನಡೆದ 3 ಪಂದ್ಯಗಳ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್‍ಗಳ ಸವಾಲಿನ ಮೊತ್ತ ಪೇರಿಸಿತ್ತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಹೊರತಾಗಿಯೂ ಭಾರತ ತಂಡ 4 ವಿಕೆಟ್‍ಗಳಿಂದ ಸೋಲು ಕಾಣಬೇಕಾಯಿತು.
ಇದನ್ನೂ ಓದಿ: IND vs AUS T20i: ಭಾರತ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ: ಮೊದಲ ಪಂದ್ಯದಲ್ಲೇ ಸೋಲು ಕಂಡ ಟೀಂ ಇಂಡಿಯಾ!
4 ಓರ್‍ಗಳಲ್ಲಿ 52 ರನ್ ಬಿಟ್ಟುಕೊಟ್ಟ ಭುವಿ!
ಅನುಭವಿ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಭುವಿ ಇನಿಂಗ್ಸ್‌ನ ಅತ್ಯಂತ ನಿರ್ಣಾಯಕ 19ನೇ ಓವರ್‌ನಲ್ಲಿ ಬೌಲ್ ಮಾಡಿ 16 ರನ್ ಬಿಟ್ಟುಕೊಟ್ಟರು. ಈ ಓವರ್ ಪಂದ್ಯದ ಭವಿಷ್ಯವನ್ನೇ ನಿರ್ಧರಿಸುವಂತಿತ್ತು. ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 13 ಎಕಾನಮಿ ರೇಟ್‌ನಲ್ಲಿ 52 ರನ್ ಬಿಟ್ಟುಕೊಟ್ಟರು. ಭಾರತೀಯ ಬೌಲರ್‌ಗಳ ಪೈಕಿ ಭುವ ಬೌಲಿಂಗ್ ಪ್ರದರ್ಶನವು ಅತ್ಯಂತ ಕಳಪೆಯಾಗಿತ್ತು.
ಕಳವಳ ವ್ಯಕ್ತಪಡಿಸಿದ ಗವಾಸ್ಕರ್
ಭಾರತ ತಂಡದ ಕಳಪೆ ಬೌಲಿಂಗ್ ಬಗ್ಗೆ ಸುನಿಲ್ ಗವಾಸ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ. ‘ನಾವು ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ. ಇದು ನಮಗೆ ದೊಡ್ಡ ಆತಂಕವನ್ನು ತಂದೊಡ್ಡಿದೆ. ಭುವನೇಶ್ವರ್ ಕುಮಾರ್‍ರಂತಹ ಅನುಭವಿ ಬೌಲರ್ ಪ್ರತಿ ಬಾರಿಯೂ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಹೀಗಾಗಿಯೇ ಭಾರತವನ್ನು ಪಾಕಿಸ್ತಾನ, ಶ್ರೀಲಂಕಾ ಮತ್ತು ಈಗ ಆಸ್ಟ್ರೇಲಿಯಾ ಸೋಲಿಸಿವೆ. ಆಸೀಸ್ ವಿರುದ್ಧ 4 ಓವರ್‍ಗಳಲ್ಲಿ ಭುವಿ 52 ರನ್ ನಿಟ್ಟಿದ್ದಾರೆ. ಪ್ರತಿ ಎಸೆತಕ್ಕೆ ಅವರು 2.16ರಂತೆ ರನ್ ನೀಡಿದ್ದಾರೆ. ಕಳೆದ 3 ಪಂದ್ಯಗಳ ಡೆತ್ ಓವರ್‍ಗಳಲ್ಲಿ ಅವರು ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ತಂಡದ ಸೋಲಿಗೆ ಕಾರಣವಾಗಿದೆ’ ಅಂತಾ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Virat Kohli: ದ್ರಾವಿಡ್ ದಾಖಲೆ ಸರಿಗಟ್ಟಲು ಕಿಂಗ್ ಕೊಹ್ಲಿ ಸಜ್ಜು: ‘ಬಿಗ್ ಇಂಡಿಯಾ’ ರೆಕಾರ್ಡ್ ಮಾಡ್ತಾರಾ ವಿರಾಟ್!
ದುಬಾರಿಯಾದ ಹರ್ಷಲ್ ಪಟೇಲ್!
‘ಭುವನೇಶ್ವರ್ ಹೊರತಾಗಿ ವೇಗಿ ಹರ್ಷಲ್ ಕೂಡ ದುಬಾರಿ ಎನಿಸಿದರು. ಗಾಯದಿಂದ ಮರಳಿದ ನಂತರ ಅವರು ತಮ್ಮ ಮೊದಲ ಪಂದ್ಯ ಆಡಿದರು. ಹರ್ಷಲ್ ತಮ್ಮ 4 ಓವರ್‌ಗಳ ಕೋಟಾದಲ್ಲಿ 49 ರನ್ ಬಿಟ್ಟುಕೊಟ್ಟರು. ಆದರೆ ಹರ್ಷಲ್ ವಾಪಸಾದ ನಂತರ ಇದು ಮೊದಲ ಪಂದ್ಯ’ವಾಗಿದೆ. ಹೀಗಾಗಿ ಅವರು ಮುಂದಿನ ಪಂದ್ಯಗಳಿಗೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿದೆ’ ಎಂದು ಗವಾಸ್ಕರ್ ಹೇಳಿದ್ದಾರೆ.
ಟಿ-20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ಬೌಲರ್‌ಗಳು ಸಾಕಷ್ಟು ಓವರ್‌ಗಳನ್ನು ಬೌಲ್ ಮಾಡಿ ಅಭ್ಯಾಸ ಮಾಡಬೇಕು. ಇದೇ ರೀತಿ ಬೌಲಿಂಗ್ ಮಾಡಿದರೆ ಲೀಗ್ ಹಂತದಲ್ಲಿಯೇ ಭಾರತ ತಂಡ ಸೋತು ನಿರ್ಗಮಿಸಬೇಕಾದ ಸ್ಥಿತಿ ಬಂದರೂ ಬರಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್‍ಗಳು ಚರ್ಚಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.