ಡೆಹ್ರಾಡೂನ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2022 ರ ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು ಇಂಗ್ಲೆಂಡ್ ಲೆಜೆಂಡ್ಸ್ ವಿರುದ್ಧ 40 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಇಂಗ್ಲೆಂಡ್ ಲೆಜೆಂಡ್ಸ್ ತಂಡವು ಟಾಸ್ ಗೆದ್ದು ಮೊದಲು ಇಂಡಿಯಾ ಲೆಜೆಂಡ್ಸ್ ಗೆ ಬ್ಯಾಟಿಂಗ್ ಅವಕಾಶ ನೀಡಿತು.ಈ ಅವಕಾಶವನ್ನು ಬಳಸಿಕೊಂಡ ಇಂಡಿಯಾ ಲೆಜೆಂಡ್ಸ್ ತಂಡವು ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದಾಗಿ 15 ಓವರ್ ಗಳ ಪಂದ್ಯದಲ್ಲಿ ಐದು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು.
The clock has turned back! The Master Blaster is on fire as the @India__Legends openers add 62 runs quickly in the powerplay!#INDLvsENGL #RoadSafetyWorldSeries #RSWS #YehJungHaiLegendary pic.twitter.com/sTnMA0QXmi
— Road Safety World Series (@RSWorldSeries) September 22, 2022
ಇದನ್ನೂ ಓದಿ: ಚಾಮರಾಜನಗರದಲ್ಲಿ ಡಿಜೆ ಆಫ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಕಲ್ಲೆಸೆದ ಕಿಡಿಗೇಡಿಗಳು!
That's it from Match 14! A brilliant allround show from the @India__Legends brings them their 2nd win of the season as they reach the top of the table!#INDLvsENGL #RoadSafetyWorldSeries #RSWS #YehJungHaiLegendary pic.twitter.com/NrLzNITbmb
— Road Safety World Series (@RSWorldSeries) September 22, 2022
ಇಂಡಿಯಾ ಲೆಜೆಂಡ್ಸ ತಂಡವು ನೀಡಿದ 171 ರನ್ ಗಳ ಬೃಹತ್ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಲೆಜೆಂಡ್ಸ್ 130 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.ಇಂಡಿಯಾ ಲೆಜೆಂಡ್ಸ್ ತಂಡದ ಪರವಾಗಿ ರಮೇಶ್ ಪವಾರ್ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.