Funny Viral Video: ಬಂಡೆ ಮೇಲಿಂದ ಕೋತಿಯನ್ನು ದೂಡಿದ ಕೋಳಿಗೆ ಬಿತ್ತು ಗೂಸಾ! ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ

ಈ ವಿಡಿಯೋ ಕ್ಲಿಪ್ ಅನ್ನು Instagram ನಲ್ಲಿ 'animalsinthenaturetoday' ಎಂಬ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ 160k ವೀಕ್ಷಣೆಯಾಗಿದೆ. ಬೆಟ್ಟದ ಮೇಲೆ ಬೃಹದಾಕಾರದ ದೇವರ ವಿಗ್ರಹವೊಂದಿದ್ದು, ಅದರ ಬಳಿ ಕೋತಿ ಮತ್ತು ಕೋಳಿ ಜಗಳವಾಡುವುದನ್ನು ನೋಡಬಹುದು.

Written by - Bhavishya Shetty | Last Updated : Sep 24, 2022, 09:44 PM IST
    • ಕೋಳಿಯೊಂದು ಕೋತಿಯನ್ನು 'ಕೊಲ್ಲಲು' ಪ್ರಯತ್ನಿಸುತ್ತಿದೆ
    • ಕೋಳಿ ತನ್ನ ಕೊಕ್ಕಿನಿಂದ ಕೋತಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ
    • ಕೋತಿ ಮತ್ತು ಕೋಳಿ ಜಗಳವಾಡುವುದನ್ನು ಈಗಾಗಲೇ 160k ಮಂದಿ ವೀಕ್ಷಣೆ ಮಾಡಿದ್ದಾರೆ
Funny Viral Video: ಬಂಡೆ ಮೇಲಿಂದ ಕೋತಿಯನ್ನು ದೂಡಿದ ಕೋಳಿಗೆ ಬಿತ್ತು ಗೂಸಾ! ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ title=
Chicken monkey fight

ಸಾಮಾಜಿಕ ಮಾಧ್ಯಮದಲ್ಲಿ ವಿಲಕ್ಷಣ ಮತ್ತು ತಮಾಷೆಯ ವಿಷಯಗಳು ಹೇರಳವಾಗಿ ಹರಿದಾಡುತ್ತವೆ. ಕೆಲವೊಂದು ವಿಡಿಯೋಗಳನ್ನು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಅಂತಹ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಕೋಳಿಯೊಂದು ಕೋತಿಯನ್ನು 'ಕೊಲ್ಲಲು' ಪ್ರಯತ್ನಿಸುತ್ತಿದೆ ಎಂದರೆ ನೀವು ನಂಬಲೇ ಬೇಕು. ಈ ಫನ್ನು ವಿಡಿಯೋವನ್ನು ನೀವೂ ಒಮ್ಮೆ ನೋಡಿ.

ಇದನ್ನೂ ಓದಿ: ಎಟಿಎಂನಲ್ಲಿ ಮೂತ್ರ ಮಾಡಿ ಅಡ್ಡ ಮಲಗಿದ ಹಸು: ಮೂಗು ಮುಚ್ಚಿಕೊಂಡೇ ಹಣ ಡ್ರಾ ಮಾಡಿದ ವ್ಯಕ್ತಿ

ವಿಡಿಯೋ ಕ್ಲಿಪ್ ಅನ್ನು Instagram ನಲ್ಲಿ 'animalsinthenaturetoday' ಎಂಬ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ 160k ವೀಕ್ಷಣೆಯಾಗಿದೆ. ಬೆಟ್ಟದ ಮೇಲೆ ಬೃಹದಾಕಾರದ ದೇವರ ವಿಗ್ರಹವೊಂದಿದ್ದು, ಅದರ ಬಳಿ ಕೋತಿ ಮತ್ತು ಕೋಳಿ ಜಗಳವಾಡುವುದನ್ನು ನೋಡಬಹುದು. ಶಾಂತವಾಗಿ ಬಂಡೆಯ ತುದಿಯಲ್ಲಿ ಕುಳಿತು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದ ಕೋತಿಯ ಕಡೆಗೆ ಕೋಳಿ ಬರುತ್ತದೆ. 

 

 

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ವ್ಯಕ್ತಿಯನ್ನ ದೇವರಂತೆ ಬಂದು ಕಾಪಾಡಿದ: ವಿಡಿಯೋ ನೋಡಿ!

ಇದ್ದಕ್ಕಿದ್ದಂತೆ, ಕೋಳಿ ತನ್ನ ಕೊಕ್ಕಿನಿಂದ ಕೋತಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಅಷ್ಟೇ ಅಲ್ಲದೆ ಬಂಡೆಯಿಂದ ಕೋತಿಯನ್ನು ತಳ್ಳಲು ಪ್ರಯತ್ನಿಸುತ್ತದೆ. ಆದರೆ, ಕೋತಿ ಜಗಳವಾಡಿ ಕೋಳಿಗೆ ಸರಿಯಾಗಿ ಬಡಿಯುತ್ತದೆ. ಪರಸ್ಪರ ಹೊಡೆದಾಟ ಕೆಲ ಸಮಯದವರೆಗೆ ನಡೆಯುತ್ತದೆ. ಈ ವೀಡಿಯೊವನ್ನು ತಮಾಷೆಯ ಸ್ಲ್ಯಾಪ್ ಶಬ್ದಗಳೊಂದಿಗೆ ಎಡಿಟ್ ಮಾಡಲಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News