"ಪೇ ಸಿಎಂ ಅಭಿಯಾನವನ್ನು ಕಾಂಗ್ರೆಸ್ ದಯವಿಟ್ಟು ಮಾಡಲಿ. ನಾವು ಅದನ್ನು ಸ್ವಾಗತಿಸುತ್ತೇವೆ"

ಕಾಂಗ್ರೆಸ್ ಪಕ್ಷ  ಅಧ:ಪತನ ವಾಗುತ್ತಿದೆ. ಪೇ ಸಿಎಂ ಅಭಿಯಾನವನ್ನು ಕಾಂಗ್ರೆಸ್ ದಯವಿಟ್ಟು ಮಾಡಲಿ. ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

Written by - Zee Kannada News Desk | Last Updated : Sep 25, 2022, 05:12 PM IST
  • ವೈಯಕ್ತಿಕ ಟೀಕೆಗಳು ಹೆಚ್ಚಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಸದನದಲ್ಲಿ ಚರ್ಚೆ ಮಾಡಲು ವಿಪುಲ ಅವಕಾಶವಿತ್ತು.
  • ಅಲ್ಲಿ ಪ್ರಸ್ತಾಪ ಮಾಡಲು ಅವರ ಬಳಿ ಸರಕಿಲ್ಲ. ಹೀಗಾಗಿ ಕೀಳು ಮಟ್ಟದ ಅಭಿಯಾನ ಮಾಡುತ್ತಿದ್ದಾರೆ ಎಂದರು.
"ಪೇ ಸಿಎಂ ಅಭಿಯಾನವನ್ನು ಕಾಂಗ್ರೆಸ್ ದಯವಿಟ್ಟು ಮಾಡಲಿ. ನಾವು ಅದನ್ನು ಸ್ವಾಗತಿಸುತ್ತೇವೆ" title=
file photo

ಮೈಸೂರು, ಸೆಪ್ಟೆಂಬರ್ 25: ಕಾಂಗ್ರೆಸ್ ಪಕ್ಷ  ಅಧ:ಪತನ ವಾಗುತ್ತಿದೆ. ಪೇ ಸಿಎಂ ಅಭಿಯಾನವನ್ನು ಕಾಂಗ್ರೆಸ್ ದಯವಿಟ್ಟು ಮಾಡಲಿ. ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

ಮೋಸದ ಸುದ್ದಿ

ತನ್ನ ತಟ್ಟೆಯಲ್ಲಿ ಸರಣಿ ಹಗರಣಗಳಲ್ಲಿಟ್ಟುಕೊಂಡು ಈ ರೀತಿಯ ಡರ್ಟಿ ಅಭಿಯಾನ ಮಾಡುತ್ತಿದ್ದಾರೆ. ಅದರಲ್ಲೇನಿದೆ? ಯಾವುದಾದರೂ ಪ್ರಕರಣವಿದೆಯೇ? ಇದೊಂದು ಅಭಿಯಾನವಷ್ಟೇ. ಜನ ಇನ್ನು ನೋಡಿಯಾಗಿದೆ. ಆಪ್, ಅಂತರ್ಜಾಲದಿಂದ  ಕೂತಲ್ಲೇ ಏನೆಲ್ಲಾ ಮಾಡಬಹುದು ಎಂದು ಸಣ್ಣ  ಸಣ್ಣ ಯುವಕರಿಗೂ ಗೊತ್ತಿದೆ. ಇದೊಂದು ಮೋಸದ ಸುದ್ದಿ ಎಂದು ಸ್ಪಷ್ಟವಾಗಿದೆ. ಲಿಂಗಾಯತ ಸಮುದಾಯದ ಸಿಎಂ ಗಳನ್ನು ಗುರಿ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಅಭಿಯಾನ ಮಾಡಿದಾಗ ಕೆಲವರು ಸಿಟ್ಟು ಬಂದು ಮಾತನಾಡಿರಬಹುದು. ಆದರೆ ಅದರಲ್ಲಿ ನಾನಿಲ್ಲ ಎಂದರು. ಸಾರ್ವಜನಿಕರಿಗೆ ಇದು ಅರ್ಥವಾಗುತ್ತದೆ. ತಮ್ಮ ಸ್ವಾರ್ಥಕ್ಕೆ, ಅಧಿಕಾರಕ್ಕೆ  ಬರಲು ರಾಜ್ಯದ ಮರ್ಯಾದೆ, ಹೆಸರನ್ನೂ ಬಲಿಕೊಡಲು ಸಿದ್ಧರಿರುವ ಸ್ವಾರ್ಥಿಗಳು ಎಂದು ತಿಳಿಸಿದರು.

Nostradamus : ನಾಸ್ಟ್ರಾಡಾಮಸ್‌ನ ಈ ಭಯಾನಕ ಭವಿಷ್ಯವಾಣಿ ನಿಜವಾಗುವುದೇ?

ವೈಯಕ್ತಿಕ ಟೀಕೆಗಳು ಹೆಚ್ಚಾಗಿರುವ  ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಸದನದಲ್ಲಿ ಚರ್ಚೆ ಮಾಡಲು ವಿಪುಲ ಅವಕಾಶವಿತ್ತು. ಅಲ್ಲಿ ಪ್ರಸ್ತಾಪ ಮಾಡಲು ಅವರ ಬಳಿ ಸರಕಿಲ್ಲ. ಹೀಗಾಗಿ  ಕೀಳು ಮಟ್ಟದ ಅಭಿಯಾನ ಮಾಡುತ್ತಿದ್ದಾರೆ ಎಂದರು. 

ರಾಹುಲ್ ಗಾಂಧಿ ಪ್ರಚಾರ ಮಾಡಿದಲ್ಲಿ ಬಿಜೆಪಿ ಕಮಲ ಅರಳಿದೆ

ರಾಹುಲ್ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಅಭಿಯಾನ ವಾಗುತ್ತಿದೆಯೇ ಎಂಬ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಡರ್ಟಿ ಪಾಲಿಟಿಕ್ಸ್ ಮಾಡುವವರನ್ನೇ ಕೇಳಬೇಕು. ರಾಹುಲ್ ಗಾಂಧಿ ಬರುತ್ತಾರೆ, ಹೋಗುತ್ತಾರೆ. ಹಿಂದಿನ ಚುನಾವಣೆ ಯಲ್ಲಿ ರಾಹುಲ್ ಗಾಂಧಿ ಯಾವ್ಯಾವ ಕ್ಷೇತ್ರಗಳಿಗೆ ಹೋಗಿದ್ದಾರೆ ಅಲ್ಲೆಲ್ಲ ಬಿಜೆಪಿ ಕಮಲ ಅರಳಿದೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News