ಖಾತೆಯಲ್ಲಿ ಹಣವಿಲ್ಲದಿದ್ದರೂ ಚಿಂತಿಸಬೇಕಿಲ್ಲ, ಜೀರೋ ಬ್ಯಾಲೆನ್ಸ್ ಅಕೌಂಟ್ ನಲ್ಲಿಯೂ ಮಾಡಿಸಬಹುದು EMI

Zero Down Payment Mobile Phone Online:ICICI ಬ್ಯಾಂಕಿನ ಈ ಸೌಲಭ್ಯದ ಹೆಸರು EMI @ ಇಂಟರ್ನೆಟ್ ಬ್ಯಾಂಕಿಂಗ್. ಇದರಲ್ಲಿ, ಪ್ರಿ ಅಪ್ಪ್ರೋವ್ದ್  ಗ್ರಾಹಕರು 50,000 ರಿಂದ 5 ಲಕ್ಷದವರೆಗಿನ ಖರೀದಿಗಳನ್ನು ಇಎಂಐ ಆಗಿ ಪರಿವರ್ತಿಸಬಹುದು. ಈ ಸೌಲಭ್ಯವು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಲಭ್ಯವಿರುತ್ತದೆ.  

Written by - Ranjitha R K | Last Updated : Oct 3, 2022, 11:47 AM IST
  • ಈ ಸೇವೆಯನ್ನು ಆರಂಭಿಸಿದ ಐಸಿಐಸಿಐ ಬ್ಯಾಂಕ್
  • ನಿಮಗೆ ಬೇಕಾದ EMI ಮಾಡಿಕೊಳ್ಳಬಹುದು
  • ಒಪ್ಪಂದಕ್ಕೆ ಸಹಿ ಹಾಕಿದ ಐಸಿಐಸಿಐ ಬ್ಯಾಂಕ್
ಖಾತೆಯಲ್ಲಿ ಹಣವಿಲ್ಲದಿದ್ದರೂ ಚಿಂತಿಸಬೇಕಿಲ್ಲ, ಜೀರೋ ಬ್ಯಾಲೆನ್ಸ್  ಅಕೌಂಟ್ ನಲ್ಲಿಯೂ ಮಾಡಿಸಬಹುದು EMI  title=
Zero Down Payment Mobile Phone Online (file photo)

Zero Down Payment Mobile Phone Online : ಹಬ್ಬ ಹರಿದಿನಗಳಲ್ಲಿ ಪ್ರತಿಯೊಬ್ಬರೂ ಏನನ್ನಾದರೂ ಖರೀದಿಸಲು ಇಚ್ಚಿಸುತ್ತಾರೆ. ಏಕೆಂದರೆ ಈ ಸಮಯದಲ್ಲಿ ಎಲ್ಲಾ ಶಾಪಿಂಗ್ ವೆಬ್‌ಸೈಟ್‌ಗಳು ಆಕರ್ಷಕ ಕೊಡುಗೆಗಳನ್ನು ನೀಡುತ್ತಿರುತ್ತವೆ. ಈ ಆಕರ್ಷಕ ಕೊಡುಗೆಗಳ ಲಾಭ ಪಡೆಯಲು ಗ್ರಾಹಕರು ಕೂಡ ಶಾಪಿಂಗ್ ಮಾಡುತ್ತಿದ್ದಾರೆ. ಆದರೆ ಅನೇಕರ ಬಳಿ ಶಾಪಿಂಗ್ ಮಾಡಲು ಬೇಕಾಗುವಷ್ಟು ಹಣ ಇರುವುದಿಲ್ಲ.   ಹೀಗಾದಾಗ ತಾವು ಇಷ್ಟಪಡುವ ವಸ್ತುವನ್ನು ಖರೀದಿಸದೆ ಉಳಿಯಬೇಕಾಗುತ್ತದೆ. ಆದರೆ, ಈ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಸುಲಭವಾಗಿ ಶಾಪಿಂಗ್ ಮಾಡಬಹುದು. ಇದಕ್ಕಾಗಿ ನಿಮ್ಮ ಖಾತೆಯಲ್ಲಿಯೂ ಹಣ ಇರಬೇಕೆಂದಿಲ್ಲ. 

ಈ ಸೇವೆಯನ್ನು ಆರಂಭಿಸಿದ ಐಸಿಐಸಿಐ ಬ್ಯಾಂಕ್ :
ICICI ಬ್ಯಾಂಕಿನ ಈ ಸೌಲಭ್ಯದ ಹೆಸರು EMI @ ಇಂಟರ್ನೆಟ್ ಬ್ಯಾಂಕಿಂಗ್. ಇದರಲ್ಲಿ, ಪ್ರಿ ಅಪ್ಪ್ರೋವ್ದ್  ಗ್ರಾಹಕರು 50,000 ರಿಂದ 5 ಲಕ್ಷದವರೆಗಿನ ಖರೀದಿಗಳನ್ನು ಇಎಂಐ ಆಗಿ ಪರಿವರ್ತಿಸಬಹುದು. ಈ ಸೌಲಭ್ಯವು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಲಭ್ಯವಿರುತ್ತದೆ.  

ಇದನ್ನೂ ಓದಿ : 5G ಸ್ಮಾರ್ಟ್‌ಫೋನ್ ಖರೀದಿಸುವಾಗ ನೆನಪಿರಲಿ ಈ 3 ಪ್ರಮುಖ ವಿಷಯ.! ಇಲ್ಲದಿದ್ದರೆ ಸಿಗುವುದು 4Gಗಿಂತಲೂ ಕಡಿಮೆ ಸ್ಪೀಡ್

ನಿಮಗೆ ಬೇಕಾದ EMI ಮಾಡಿಕೊಳ್ಳಬಹುದು :   
ICICI ಬ್ಯಾಂಕಿನ ಈ ಸೌಲಭ್ಯದ ಮೂಲಕ, ಉಳಿತಾಯ ಖಾತೆಯಿಂದ ನಿಮ್ಮ ಆಯ್ಕೆಯ ಗ್ಯಾಜೆಟ್ ಅನ್ನು ಖರೀದಿಸಬಹುದು. ವಿಮಾ ಪ್ರೀಮಿಯಂ ಪಾವತಿಸಬಹುದು. ಮಗುವಿನ ಶಾಲಾ ಶುಲ್ಕವನ್ನು ಠೇವಣಿ ಮಾಡಬಹುದು. ನಂತರ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಈ ವೆಚ್ಚವನ್ನು ಸುಲಭ ಕಂತುಗಳಲ್ಲಿ ಪಾವತಿಸಬಹುದು. ಗ್ರಾಹಕನು ತನ್ನ ಆಯ್ಕೆಯ ಪ್ರಕಾರ 3 ತಿಂಗಳು, 6 ತಿಂಗಳು, 9 ತಿಂಗಳು ಮತ್ತು 12 ತಿಂಗಳುಗಳ EMI ನಲ್ಲಿ ವೆಚ್ಚವನ್ನು ಪಾವತಿಸಬಹುದು. 

ಒಪ್ಪಂದಕ್ಕೆ ಸಹಿ ಹಾಕಿದ ಐಸಿಐಸಿಐ ಬ್ಯಾಂಕ್ : 
ICICI ಬ್ಯಾಂಕ್ EMI ಸೌಲಭ್ಯಕ್ಕಾಗಿ BillDesk ಮತ್ತು Razorpay ನಂತಹ ಪ್ರಮುಖ ಆನ್‌ಲೈನ್ ಪಾವತಿ ಗೇಟ್‌ವೇ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರಸ್ತುತ, ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳು, ವಿಮೆ, ಪ್ರಯಾಣ, ಶಿಕ್ಷಣ, ಶಾಲಾ ಶುಲ್ಕಗಳು ಮತ್ತು ಎಲೆಕ್ಟ್ರಾನಿಕ್ಸ್ ಸರಪಳಿಗಳನ್ನು ಒಳಗೊಂಡಿರುವ EMI @ ಇಂಟರ್ನೆಟ್ ಬ್ಯಾಂಕಿಂಗ್‌ನಲ್ಲಿ 1000 ವ್ಯಾಪಾರಿಗಳು ಸಕ್ರಿಯರಾಗಿದ್ದಾರೆ. 

ಇದನ್ನೂ ಓದಿ : 5G Services : Jio, Airtel ಮತ್ತು Vi ನ 5G ಸೇವೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಇದರ ಪ್ರಯೋಜನ ಪಡೆದುಕೊಳ್ವಳುವುದು ಹೇಗೆ ? :
ಮೊದಲಿಗೆ, ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಖರೀದಿಸಲು ಬಯಸುವ ಉತ್ಪನ್ನವನ್ನು ಆಯ್ಕೆಮಾಡಿ. ಇದರ ನಂತರ, ಪೇಮೆಂಟ್ ಮಾಡುವ ಹೊತ್ತಿಗೆ ಐಸಿಐಸಿಐ ಬ್ಯಾಂಕ್ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್‌ವರ್ಡ್ ಹಾಕಿ. ನಂತರ Convert to EMI instantly  ಕ್ಲಿಕ್ ಮಾಡಬೇಕು. ಎಷ್ಟು ತಿಂಗಳ EMI ಪಡೆಯಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ, OTP ನಮೂದಿಸುವ ಮೂಲಕ  ಪೇಮೆಂಟ್ ಮಾಡಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News