Viral Video : ಮಾವುತನ ಪಿಸು ಮಾತು ಕೇಳಲು ಮಂಡಿಯೂರಿದ ಗಜರಾಜ

Elephant Viral Video : ಮಾವುತನ ಬಗೆಗೆ ಆನೆಗಳಿಗೆ ಅತಿಯಾದ ಪ್ರೀತಿ ಇರುತ್ತದೆ. ತನ್ನ ಯಜಮಾನನ ಮಾತನ್ನು ಅವುಗಳು ಚಾಚೂ ತಪ್ಪದೇ ಪಾಲಿಸುತ್ತವೆ. 

Written by - Ranjitha R K | Last Updated : Oct 11, 2022, 03:45 PM IST
  • ಮಾವುತನ ಮಾತಿಗೆ ಕಿವಿಯಾದ ಆನೆ
  • ಮಾವುತನ ಮಾತು ಕೇಳಿಸಿಕೊಳ್ಳಲು ಮಂಡಿಯೂರಿ ಕುಳಿತ ಆನೆ
  • ವೈರಲ್ ಆಯಿತು ಆನೇ ಮತ್ತು ಮಾವುತನ ವಿಡಿಯೋ
Viral Video : ಮಾವುತನ ಪಿಸು ಮಾತು ಕೇಳಲು ಮಂಡಿಯೂರಿದ ಗಜರಾಜ   title=
Elephant Viral Video (photo instagram)

Elephant Viral Video : ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಆನೆ. ಆದರೆ ಆನೆಗಳಿಗೆ ಮಗುವಿನಂಥಹ ಮನಸ್ಸು ಇರುತ್ತದೆ ಎಂದು ಹೇಳಲಾಗುತ್ತದೆ. ಆನೆಗಳು ಕೂಡಾ ಆಟವಾಡುತ್ತವೆ, ಚೇಷ್ಟೆ ಮಾಡುತ್ತವೆ. ಆನೆಗಳ ನೀರಾಟ ನೋಡಿ ಆನಂದ ಪಡದವರು ಅತಿ ವಿರಳ. ಇನ್ನು ಆನೆಗಳಿಗೂ ತಾನು ತನ್ನವರು ಎನ್ನುವ ಭಾವ ತುಸು ಹೆಚ್ಚೇ ಇರುತ್ತದೆ. ಅದರಲ್ಲೂ ಮಾವುತನ ಬಗೆಗೆ ಆನೆಗಳಿಗೆ ಅತಿಯಾದ ಪ್ರೀತಿ ಇರುತ್ತದೆ. ತನ್ನ ಯಜಮಾನನ ಮಾತನ್ನು ಅವುಗಳು ಚಾಚೂ ತಪ್ಪದೇ ಪಾಲಿಸುತ್ತವೆ. ಕೆಲವೊಮ್ಮೆ ಮಾವುತನ ಮುಖ ಭಾವದಿಂದಲೇ ಆತನ ಮನಸ್ಸಿನ ಭಾವನೆಯನ್ನು ಕೂಡಾ ಅರಿತು ಕೊಳ್ಳುತ್ತದೆ. 

ಆನೆ ಮತ್ತು ಮಾವುತನ ವಿಡಿಯೋವೊಂದು ವೈರಲ್ ಆಗುತ್ತಿದೆ. ಇಲ್ಲಿ ಮಾವುತ ಆನೆಯ ಬಳಿ ಮಾತನಾಡುತ್ತಿರುತ್ತಾನೆ. ಆದರೆ ಮಾವುತನ ಮಾತು ಆನೆಗೆ ಸರಿಯಾಗಿ ಕೇಳಿಸುವುದಿಲ್ಲ. ಹಾಗಂತ ಅದು ಸುಮ್ಮನೆ ನಿಲ್ಲುವುದಿಲ್ಲ. ಕುಳಿತು ಮಾತನಾಡುತ್ತಿರುವ ಮಾವುತನ ಮಾತಿಗೆ ಕಿವಿಯಾಗುತ್ತದೆ. ಇದಕ್ಕಾಗಿ ಮಾವುತನ ಬಳಿ ತನ್ನ ದೇಹವನ್ನು ಪೂರ್ತಿಯಾಗಿ ಬಾಗಿಸುತ್ತದೆ. ಆದರೂ ಕೂಡಾ ಮಾವುತನ ಪಿಸು ಮಾತು ಗಜರಾಜನ ಕಿವಿಗೆ ಸರಿಯಾಗಿ ಬೀಳುವುದಿಲ್ಲ. ಈ ಕಾರಣಕ್ಕಾಗಿ ಸಂಪೂರ್ಣ ಮಂಡಿಯೂರಿ ಬಿಡುತ್ತದೆ ಆನೆ. 

ಇದನ್ನೂ ಓದಿ : Funny Video : ಮೊಬೈಲ್‌ಗಾಗಿ ಮಗುವಿನ ಜೊತೆ ಮಂಗನ ಜಗಳ.. ವಿಡಿಯೋ ವೈರಲ್‌.!

ಪ್ರಾಣಿಗಳು ಒಮ್ಮೊಮ್ಮೆ ಭಾವನೆ ವ್ಯಕ್ತಪಡಿಸುವುದರಲ್ಲಿ ಮನುಷ್ಯರನ್ನೇ ಮೀರಿಸಿ ಬಿಡುತ್ತವೆ. ಈ ಆನೆ  ಕೂಡಾ ಹಾಗೆ. ತನ್ನ ಯಜಮಾನನ ಮನದ ಭಾವನೆಗೆ ಸ್ಪಂದಿಸುವ ಸರ್ವ ಪ್ರಯತ್ನವನ್ನೂ ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

 

ಇದನ್ನೂ ಓದಿ : Teacher Viral Video : ತರಗತಿಯಲ್ಲಿ ಮಕ್ಕಳ ಮುಂದೆಯೇ ಬಿಯರ್ ಕುಡಿಯುವ ಶಿಕ್ಷಕ.!

ಕುಂಭಕೋಣಂನ ದೇವಸ್ಥಾನದ  ವಿಡಿಯೋ ಇದಾಗಿದ್ದು, ಸೂರ್ಯಪುತ್ರನ್ ಕರ್ಣನ್ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ವಿಡಿಯೋವನ್ನು ಅನೇಕ ಮಡಿ ಲೈಕ್ ಮಾಡಿದ್ದು, ಹಲವರು ತಮ್ಮ ಕಾಮೆಂಟ್‌ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News