5 ಲಕ್ಷಕ್ಕಿಂತ ಕಡಿಮೆ ಬೆಲೆಯ 7 ಸೀಟರ್ .! ಖರೀದಿಗೆ ಮುಗಿ ಬಿದ್ದ ಜನ .!

Cheapest 7 seater car:ಮಾರುತಿಯ ಈ ಅಗ್ಗದ ಕಾರು ಸೆಪ್ಟೆಂಬರ್ 2022 ರಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ 7  ಸೀಟರ್  ಕಾರು ಆಗಿದೆ. ಇದರ ಬೆಲೆ 5 ಲಕ್ಷ ರೂಪಾಯಿಗಿಂತ ಕಡಿಮೆ ಎನ್ನುವುದೇ ಈ ಕಾರಿನ ವಿಶೇಷತೆ.  

Written by - Ranjitha R K | Last Updated : Oct 12, 2022, 01:21 PM IST
  • ಕಾರು ಕಂಪನಿಗಳಿಗೆ ಸೆಪ್ಟೆಂಬರ್ ಅದೃಷ್ಟ ತಿಂಗಳಾಗಿ ಸಾಬೀತಾಗಿದೆ
  • ಬಹುತೇಕ ಕಂಪನಿಗಳು ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ.
  • ಸೆಪ್ಟೆಂಬರ್ 2022ರಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ 7 ಸೀಟರ್ ಕಾರು
 5 ಲಕ್ಷಕ್ಕಿಂತ ಕಡಿಮೆ ಬೆಲೆಯ 7 ಸೀಟರ್ .! ಖರೀದಿಗೆ ಮುಗಿ ಬಿದ್ದ ಜನ .! title=
Cheapest 7 seater car (file photo)

Cheapest 7 seater car : ಕಾರು ಕಂಪನಿಗಳಿಗೆ ಸೆಪ್ಟೆಂಬರ್  ಅದೃಷ್ಟ ತಿಂಗಳಾಗಿ ಸಾಬೀತಾಗಿದೆ. ಬಹುತೇಕ ಕಂಪನಿಗಳು ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ. ಮಾರುತಿ ಸುಜುಕಿಯ ಆಲ್ಟೊ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುತಿ ಸುಜುಕಿಯ ಆಲ್ಟೊವಿನ 24,844 ಯುನಿಟ್‌ಗಳು ಮಾರಾಟವಾಗಿವೆ. ಮತ್ತೊಂದೆಡೆ, ಮಾರುತಿ ಬ್ರೆಝಾ ದೇಶದಲ್ಲಿ ಹೆಚ್ಚು ಮಾರಾಟವಾಗುವ SUV ಆಗಿ ಹೊರ ಹೊಮ್ಮಿದೆ.  ಈ ನಡುವೆ, ಮತ್ತೊಂದು ಮಾರುತಿ ಕಾರು ಮಾರಾಟ ದಾಖಲೆ  ಮಟ್ಟದಲ್ಲಿ ಮಾರಾಟವಾಗಿದೆ. ಕಂಪನಿಯ ಈ ಅಗ್ಗದ ಕಾರು ಸೆಪ್ಟೆಂಬರ್ 2022 ರಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ 7  ಸೀಟರ್  ಕಾರು ಆಗಿದೆ. ಇದರ ಬೆಲೆ 5 ಲಕ್ಷ ರೂಪಾಯಿಗಿಂತ ಕಡಿಮೆ ಎನ್ನುವುದೇ ಈ ಕಾರಿನ ವಿಶೇಷತೆ.  

ಹೌದು, ಮಾರುತಿ ಸುಜುಕಿ ಇಕೋ ಹೆಚ್ಚು ಮಾರಾಟವಾಗುವ 7 ಆಸನಗಳ ಕಾರಾಗಿದೆ. ಇದು ದೇಶದ ಅತ್ಯಂತ ಅಗ್ಗದ 7 ಆಸನಗಳ ಕಾರು ಮಾತ್ರವಲ್ಲದೆ, ದೇಶದಲ್ಲಿ ಹೆಚ್ಚು ಮಾರಾಟವಾಗುವ 7 ಆಸನಗಳ ಕಾರು ಕೂಡ ಆಗಿದೆ. ಕಳೆದ ತಿಂಗಳಲ್ಲಿ ಈ ವಾಹನದ  12,697  ಯೂನಿಟ್ ಗಳು ಮಾರಾಟವಾಗಿವೆ. ಸೆಪ್ಟೆಂಬರ್ 2021 ರಲ್ಲಿ, ಈ ವಾಹನದ 7,844 ಯುನಿಟ್‌ಗಳು ಮಾರಾಟವಾಗಿವೆ. ಈ ಮೂಲಕ ಮಾರುತಿ ಇಕೋ ಮಾರಾಟದಲ್ಲಿ  ಶೇ.61ರಷ್ಟು ಗ್ರೋಥ್ ಕಂಡು ಬಂದಿದೆ. 

ಇದನ್ನೂ ಓದಿ : ಪಿಎಂ ಕಿಸಾನ್ ಕಂತಿಗೂ ಮುನ್ನ ರೈತರಿಗೆ ಸಿಗಲಿದೆ ಸಿಹಿ ಸುದ್ದಿ. ! ಇಂದೇ ಸರ್ಕಾರದ ನಿರ್ಧಾರ ಪ್ರಕಟ

ಮಾರುತಿ ಇಕೋ ಬೆಲೆ ಮತ್ತು ವೈಶಿಷ್ಟ್ಯಗಳು : 
ಮಾರುತಿ ಇಕೋ ಬೆಲೆಯು 4.63 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದರ ಎಕ್ಸ್ ಶೋರೂಂ ಬೆಲೆ 5.94 ಲಕ್ಷದಷ್ಟಾಗುತ್ತದೆ. ಇದರ ಉದ್ದ 3,675 ಮಿಮೀ, ಅಗಲ 1,475 ಮಿಮೀ ಮತ್ತು ಎತ್ತರ 1,800 ಮಿಮೀ. ಆಗಿದೆ. ವೀ ಲ್‌ಬೇಸ್ ಕುರಿತು ಮಾತನಾಡುವುದಾದರೆ, ಇದು 2,350 ಮಿ.ಮೀನದ್ದಾಗಿದೆ. ಮಾರುತಿ ಇಕೋ ಉತ್ತಮ ಎಸಿ ಜೊತೆಗೆ ಡ್ಯುಯಲ್ ಟೋನ್ ಇಂಟೀರಿಯರ್, ಐಷಾರಾಮಿ ಕ್ಯಾಬಿನ್ ಸ್ಪೇಸ್, ​​ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 

ಮಾರುತಿ ಇಕೋ ವಾಹನವು ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳಲ್ಲಿ ಲಭ್ಯವಿದೆ. ಇದು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 73PS ಪವರ್ ಮತ್ತು 98Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಿಎನ್‌ಜಿ ಕಿಟ್‌ನೊಂದಿಗೆ ಅದರ ಎಂಜಿನ್ 63 ಪಿಎಸ್ ಪವರ್ ಮತ್ತು 85 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ರೂಪಾಂತರವು 16.11kmpl ಮೈಲೇಜ್ ನೀಡುತ್ತದೆ ಮತ್ತು CNG ರೂಪಾಂತರವು 20.88kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.  

ಇದನ್ನೂ ಓದಿ : Gold Price Today : ಇಳಿಕೆಯಾಗುತ್ತಲೇ ಇದೆ ಬಂಗಾರದ ಬೆಲೆ.! ಬೆಳ್ಳಿ ಬೆಲೆ ಎಷ್ಟು ತಿಳಿಯಿರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News