ಧನತ್ರಯೋದಶಿ ದಿನ ಪೊರಕೆ ಖರೀದಿ ಮತ್ತು ಪೂಜಾ ನಿಯಮ ಹೀಗಿದ್ದರೆ ಶುಭ . !

ಧನತ್ರಯೋದಶಿಯ ದಿನ ಪೊರಕೆಯನ್ನು ಪೂಜಿಸಲಾಗುತ್ತದೆ. ಆದರೆ ಈ ದಿನ ಪೊರಕೆಯನ್ನು ಖರೀದಿಸುವಾಗ ಕೆಲವು ಪ್ರಮುಖ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.   

Written by - Ranjitha R K | Last Updated : Oct 20, 2022, 09:01 AM IST
  • ಧನತ್ರಯೋದಶಿಯಂದು ಲಕ್ಷ್ಮೀ, ಕುಬೇರ ಮತ್ತು ಧನ್ವಂತರಿಯನ್ನು ಪೂಜಿಸಲಾಗುತ್ತದೆ .
  • ಈ ದಿನ ಪೊರಕೆ ಖರೀದಿಸುವುದು ತುಂಬಾ ಒಳ್ಳೆಯ ಫಲ ನೀಡಲಿದೆ
  • ಧನತ್ರಯೋದಶಿಯಂದು ಪೊರಕೆ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ಧನತ್ರಯೋದಶಿ ದಿನ ಪೊರಕೆ ಖರೀದಿ ಮತ್ತು ಪೂಜಾ ನಿಯಮ ಹೀಗಿದ್ದರೆ ಶುಭ . ! title=
dhantrayodashi broom pooja

ಬೆಂಗಳೂರು : ಕಾರ್ತಿಕ ಮಾಸದ ತ್ರಯೋದಶಿ ತಿಥಿ ಅಂದರೆ ಧನತ್ರಯೋದಶಿಯಂದು ಲಕ್ಷ್ಮೀ, ಕುಬೇರ ಮತ್ತು ಧನ್ವಂತರಿಯನ್ನು ಪೂಜಿಸಲಾಗುತ್ತದೆ . ಹಾಗೆಯೇ ಈ ದಿನ ಚಿನ್ನ ಬೆಳ್ಳಿ, ಪಾತ್ರೆ, ವಾಹನ, ಕೊತ್ತಂಬರಿ ಬೀಜ, ಗೋಮತಿ ಚಕ್ರ ಮುಂತಾದ ವಸ್ತುಗಳಧನ ತ್ರಯೋದಶಿಯ ದಿನ ಪೊರಕೆ ಖರೀದಿಸುವುದು ತುಂಬಾ ಒಳ್ಳೆಯ ಫಲ ನೀಡಲಿದೆ ಎಂದು ಹೇಳಲಾಗುತ್ತದೆ.  ಧನತ್ರಯೋದಶಿಯ ದಿನ ಪೊರಕೆಯನ್ನು ಪೂಜಿಸಲಾಗುತ್ತದೆ. ಆದರೆ ಈ ದಿನ ಪೊರಕೆಯನ್ನು ಖರೀದಿಸುವಾಗ ಕೆಲವು ಪ್ರಮುಖ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಲಾಭದ ಬದಲು ನಷ್ಟವೇ ಸಂಭವಿಸಬಹುದು.  

ಧನತ್ರಯೋದಶಿಯಂದು ಪೊರಕೆ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ :
ಧನತ್ರಯೋದಶಿಯಂದು ಸಾಂಪ್ರದಾಯಿಕ ಪೊರಕೆಯನ್ನೇ ಖರೀದಿಸಿ. ಪ್ಲಾಸ್ಟಿಕ್ ಪೊರಕೆ ಖರೀದಿಸುವುದು ಒಳ್ಳೆಯದಲ್ಲ. ಧನತ್ರಯೋದಶಿಯ ಶುಭ ದಿನದಂದು ಪ್ಲಾಸ್ಟಿಕ್‌ನಿಂದ ತಯಾರಿಸಿದ ಯಾವ ವಸ್ತುವನ್ನು ಕೂಡಾ  ಖರೀದಿಸಬೇಡಿ. ಸಾಂಪ್ರದಾಯಿಕ ಕಡ್ಡಿ ಪೊರಕೆಯನ್ನು ಖರೀದಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. 

ಇದನ್ನೂ ಓದಿ : Personality Test: ಮೊಸಳೆ/ಹಡಗು? ನೀವು ನೋಡಿದ ಮೊದಲ ಚಿತ್ರ ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿಸುತ್ತೆ!

ಹೊಸ ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಇರಿಸಿ. ಅದನ್ನು  ತೊಜೋರಿ ಬಳಿ, ಹಾಸಿಗೆಯ ಕೆಳಗೆ, ಅಡುಗೆಮನೆ ಅಥವಾ ಮಲಗುವ ಕೋಣೆಯಲ್ಲಿ ಇಡಬೇಡಿ. 

ಪೊರಕೆಯನ್ನು ಖರೀದಿಸುವಾಗ, ಪೊರಕೆ ತೆಳ್ಳಗಿರುವ ಪೊರಕೆಯನ್ನು ಖರೀದಿಸಬೇಡಿ. ಹೆಚ್ಚು ಕಡ್ಡಿಗಳಿರುವ ಉತ್ತಮ ಸ್ಥಿತಿಯಲ್ಲಿರುವ ಪೊರಕೆ ಖರೀದಿಸಿ. ಹಾಗೆಯೇ ಪೊರಕೆಯ ಕಡ್ಡಿಗಳು ಮುರಿಯದಂತೆ ನೋಡಿಕೊಳ್ಳಬೇಕು. 

ಇದನ್ನೂ ಓದಿ : Astro Tips : ಲವಂಗದ ಈ ಪರಿಹಾರ ಜೀವನದ ದಿಕ್ಕನ್ನೇ ಬದಲಾಯಿಸುತ್ತೆ!

ಪೊರಕೆ ಪೂಜೆ  :
ಧನತ್ರಯೋದಶಿಯಂದು ಪೊರಕೆಯನ್ನು ಖರೀದಿಸಿದ ನಂತರ, ಅದನ್ನು ಪೂಜಿಸಿ. ಇದಕ್ಕಾಗಿ ಮೊದಲು ಹಳೆಯ ಪೊರಕೆಯನ್ನು ಪೂಜಿಸಿ ನಂತರ ಹೊಸ ಪೊರಕೆಗೆ ಕುಂಕುಮ ಅಕ್ಷತೆಯನ್ನು ಹಚ್ಚಿ. ಅದರ ನಂತರ ಹೊಸ ಪೊರಕೆ ಬಳಸಿ. ಇದಲ್ಲದೆ, ಧನತ್ರಯೋದಶಿಯಂದು ದೇವಸ್ಥಾನಕ್ಕೆ ಹೊಸ ಪೊರಕೆಯನ್ನು ದಾನ ಮಾಡುವುದು ಸಹ ತುಂಬಾ ಒಳ್ಳೆಯದು. ಧನತ್ರಯೋದಶಿ ನಂತರ ಕೂಡಾ ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಇರಿಸಿ. ಪೊರಕೆಯನ್ನು ಎಂದಿಗೂ ಕಾಲಿನಿಂದ ತುಳಿಯಬೇಡಿ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News