ಧನತ್ರಯೋದಶಿ ಶಾಪಿಂಗ್ : ದೀಪಾವಳಿ ಸಂಪತ್ತಿನ ಸ್ವರೂಪ ಮಾತೆ ಧನಲಕ್ಷ್ಮಿ ಒಲಿಸಿಕೊಳ್ಳಲು ಅದ್ಭುತ ಘಳಿಗೆ ಹೊತ್ತು ತರುವ ಹಬ್ಬ. ಇಂದು ಧನತ್ರಯೋದಶಿ, ಇವತ್ತೇನಾದ್ರೂ ನೀವು ಮನೆಗೆ ಈ ಕೆಳಗೆ ಹೇಳಿರುವ ಕೆಲ ವಸ್ತುಗಳನ್ನು ಖರೀದಿ ಮಾಡಿ ತೆಗೆದುಕೊಂಡು ಹೊದ್ರೆ ಲಕ್ಷ್ಮೀದೇವಿಯು ನಿಮ್ಮ ಮನೆಯನ್ನು ತೊರೆಯುತ್ತಾಳೆ. ಆಗಿದ್ರೆ ಆ ವಸ್ತುಗಳು ಯಾವುವು ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳಿದೆ.. ಅಂತ ತಿಳ್ಕೋಳೋಕೆ ಈ ವರದಿ ಓದಿ.
ದೀಪಾವಳಿಯು ಧನತ್ರಯೋದಶಿಯಿಂದ ಪ್ರಾರಂಭವಾಗುತ್ತದೆ. ಧನತ್ರಯೋದಶಿ ದಿನದಂದು ಕೆಲವು ವಿಶೇಷ ವಸ್ತುಗಳ ಖರೀದಿಯು ಲಕ್ಷ್ಮಿಯ ಕೃಪ ಕಟಾಕ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಗೆ ಚಿನ್ನ-ಬೆಳ್ಳಿ, ಪಾತ್ರೆ, ವಾಹನ, ಇತ್ಯಾದಿಗಳನ್ನು ಖರೀದಿಸುವುದು ಶುಭ. ಈ ದಿನ, ಇಂತಹ ವಸ್ತುಗಳನ್ನು ಖರೀದಿಸುವುದರಿಂದ ಧನ್ವಂತರಿ ದೇವರು ಸಂತೋಷಗೊಂಡು ನಿಮ್ಮ ಮನೆಯಲ್ಲಿ ಹಣದ ಮಳೆ ಸುರಿಸುತ್ತಾನೆ ಎಂದು ನಂಬಲಾಗಿದೆ. ಆದರೆ ಜ್ಯೋತಿಷ ಶಾಸ್ತ್ರದಲ್ಲಿ ಕೆಲವು ವಸ್ತುಗಳ ಖರೀದಿಯನ್ನು ಅಶುಭವೆಂದು ಹೇಳಲಾಗುತ್ತದೆ.
ಈ ದಿನ ನೀವು ಮರೆತೂ ಈ ವಸ್ತುಗಳನ್ನು ಖರೀದಿಸಬೇಡಿ
ಕಬ್ಬಿಣದ ವಸ್ತುಗಳು : ಧನತ್ರಯೋದಶಿ ದಿನದಂದು ಏನನ್ನೂ ಖರೀದಿಸುವುದು ಶುಭವಲ್ಲ. ಈ ದಿನದಂದು ನೀವು ಕೆಲವು ವಿಶೇಷ ವಸ್ತುಗಳನ್ನು ಖರೀದಿಸಿದರೆ, ಅದು ನಿಮಗೆ ಬಡತನವನ್ನು ತರುತ್ತದೆ. ಈ ಶುಭ ದಿನದಂದು ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ತಪ್ಪಾಗಿ ಖರೀದಿಸಬಾರದು.
ಚೂಪಾದ ವಸ್ತುಗಳು : ಈ ದಿನ ಸೂಜಿ, ಕತ್ತರಿ, ಚಾಕು, ಕತ್ತಿ ಇತ್ಯಾದಿಗಳನ್ನು ಖರೀದಿಸಬಾರದು. ಈ ವಸ್ತುಗಳ ಖರೀದಿಯಿಂದ ಭಗವಾನ್ ಧನ್ವಂತರಿ ದೇವ ಕೋಪಗೊಳ್ಳುತ್ತಾನೆ ಎಂದು ನಂಬಲಾಗಿದೆ. ಇದರಿಂದ ಮನೆಯಲ್ಲಿ ಅಶಾಂತಿ ಉಂಟಾಗಿ ಸುತ್ತಮುತ್ತಲಿನ ವಾತಾವರಣವೂ ಕೆಡುತ್ತದೆ.
ಗಾಜಿನ ವಸ್ತುಗಳು : ಗಾಜಿನ ಸಾಮಾನುಗಳನ್ನು ಖರೀದಿಸುವುದು ಕೂಡ ಶುಭವಲ್ಲ. ಇದು ಮಂಗಳಕರವಲ್ಲ. ರಾಹುಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದಾಗಿ ದುಂದು ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಮನೆಯಲ್ಲಿ ಅವ್ಯವಸ್ಥೆಗಳು ಉಂಟಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ