ದೀಪಾವಳಿ ದಿನ ಲಕ್ಷ್ಮೀ ಯಂತ್ರವನ್ನು ಈ ರೀತಿ ಪೂಜಿಸಿದರೆ ಮನೆಯಲ್ಲಿ ತುಂಬಿ ತುಳುಕುವುದು ಅಷ್ಟೈಶ್ವರ್ಯ

Diwali Lakshmi Yantra Puja:ದೀಪಾವಳಿಯ ಪೂಜೆಯಲ್ಲಿ ಧನ ಲಕ್ಷ್ಮೀ ಯಂತ್ರವನ್ನು  ಸ್ಥಾಪಿಸಿದರೆ ಸಂಪತ್ತಿನ ದೇವತೆ ಸಂತೋಷದಿಂದ ಭಕ್ತರ ಮೇಲೆ  ತಮ್ಮ ಕೃಪಾ ದೃಷ್ಟಿ ಹರಿಸುತ್ತಾಳೆ ಎಂದು ಹೇಳಲಾಗುತ್ತದೆ.   

Written by - Ranjitha R K | Last Updated : Oct 24, 2022, 11:23 AM IST
  • ದೀಪಾವಳಿ ಪೂಜೆಯಲ್ಲಿ ಲಕ್ಷ್ಮೀಗೆ ವಿಶೇ ಷ ಸ್ಥಾನವನ್ನು ನೀಡಲಾಗಿದೆ.
  • ಈ ದಿನವನ್ನು ಲಕ್ಷ್ಮೀ ದೇವಿಗೆ ಸಮರ್ಪಿಸಲಾಗಿದೆ.
  • ಲಕ್ಷ್ಮೀ ದೇವಿಗೆ ಪ್ರಿಯವಾದ ವಸ್ತುಗಳನ್ನು ಪೂಜೆಯಲ್ಲಿ ಸೇರಿಸಲಾಗುತ್ತದೆ.
ದೀಪಾವಳಿ ದಿನ ಲಕ್ಷ್ಮೀ ಯಂತ್ರವನ್ನು ಈ ರೀತಿ ಪೂಜಿಸಿದರೆ ಮನೆಯಲ್ಲಿ ತುಂಬಿ ತುಳುಕುವುದು ಅಷ್ಟೈಶ್ವರ್ಯ  title=
Dhan Lakshmi Yantra

Diwali Lakshmi Yantra Pooja : ದೀಪಾವಳಿ ಪೂಜೆಯಲ್ಲಿ ಲಕ್ಷ್ಮೀಗೆ  ವಿಶೇ ಷ ಸ್ಥಾನವನ್ನು ನೀಡಲಾಗಿದೆ. ಈ ದಿನವನ್ನು  ಲಕ್ಷ್ಮೀ ದೇವಿಗೆ ಸಮರ್ಪಿಸಲಾಗಿದೆ. ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುವ ಸಲುವಾಗಿ, ಈ ದಿನ  ಲಕ್ಷ್ಮೀ ಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಲಕ್ಷ್ಮೀ ದೇವಿಗೆ ಪ್ರಿಯವಾದ ವಸ್ತುಗಳನ್ನು ಪೂಜೆಯಲ್ಲಿ ಸೇರಿಸಲಾಗುತ್ತದೆ. ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಈ ದಿನ, ಲಕ್ಷ್ಮೀ -ಗಣೇಶನ ಪೂಜೆಯ ಸಮಯದಲ್ಲಿ ಧನ ಲಕ್ಷ್ಮೀಯ ಯಂತ್ರವನ್ನು ಸ್ಥಾಪಿಸಲಾಗುತ್ತದೆ. ದೀಪಾವಳಿಯ ಪೂಜೆಯಲ್ಲಿ ಧನ ಲಕ್ಷ್ಮೀಯ ಯಂತ್ರವನ್ನು ಸ್ಥಾಪಿಸಿದರೆ ಸಂಪತ್ತಿನ ದೇವತೆ ಸಂತೋಷದಿಂದ ಭಕ್ತರ ಮೇಲೆ ತಮ್ಮ ಕೃಪಾ ದೃಷ್ಟಿ ಹರಿಸುತ್ತಾಳೆ ಎಂದು ಹೇಳಲಾಗುತ್ತದೆ. 

ಧನಲಕ್ಷ್ಮೀ  ಯಂತ್ರದ ಪ್ರಯೋಜನಗಳು : 
- ಈ ಯಂತ್ರವನ್ನು ಪೂಜೆಯಲ್ಲಿ ಸ್ಥಾಪಿಸುವುದರಿಂದ  ಲಕ್ಷ್ಮೀ ಕೃಪೆ ಮನೆಯಲ್ಲಿ  ನೆಲೆಯಾಗುತ್ತದೆ. 
-ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ. ಸದಾ ಸಂತೋಷ ಮತ್ತು ಶಾಂತಿ ಇರುತ್ತದೆ. 
ಎಲ್ಲಾ ರೀತಿಯ ಆರ್ಥಿಕ ತೊಂದರೆಗಳನ್ನು ತಪ್ಪಿಸಲು ಈ ಯಂತ್ರವು ಅದ್ಭುತವಾಗಿದೆ ಎಂದು ನಂಬಲಾಗಿದೆ. 
- ಕುಟುಂಬದ ಸದಸ್ಯರು ದೀರ್ಘಕಾಲದದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ,  ವಿಧಿವತ್ತಾಗಿ ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗದಿಂದ ಮುಕ್ತರಾಗಲು ಸಹಾಯ ಮಾಡುತ್ತದೆ. 
- ಈ ಯಂತ್ರವನ್ನು ಪೂಜಿಸುವುದರಿಂದ ಬಾಕಿ ಉಳಿದಿರುವ ಹಣ ಕೂಡಾ ಕೈ ಸೇರುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿ ಸಾಲದಿಂದ ಮುಕ್ತನಾಗುತ್ತಾನೆ ಎಂದು ಹೇಳಲಾಗುತ್ತದೆ. 
-ಈ ಯಂತ್ರವನ್ನು ನಿಯಮಿತವಾಗಿ ಪೂಜಿಸಿದರೆ, ಹಣ ಸಂಪಾದಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. 

ಇದನ್ನೂ ಓದಿ : 2000 ವರ್ಷಗಳ ಬಳಿಕ ದೀಪಾವಳಿ ದಿನವೇ ರೂಪುಗೊಳ್ಳುತ್ತಿದೆ ಈ ಐದು ಯೋಗ, ಬೆಳಕಿನ ಹಬ್ಬ ಬೆಳಗಲಿದೆ ಈ ರಾಶಿಯವರ ಜೀವನ

ಧನಲಕ್ಷ್ಮೀ ಯಂತ್ರವನ್ನು ಈ ರೀತಿ ಸ್ಥಾಪಿಸಿ :
ಸಂತೋಷ, ಸಮೃದ್ಧಿ ಮತ್ತು ಖ್ಯಾತಿಯನ್ನು ಪಡೆಯಲು ವಿಧಿವತ್ತಾಗಿ ಧನ ಲಕ್ಷ್ಮೀ ಯಂತ್ರವನ್ನು ಸ್ಥಾಪಿಸಬೇಕು. ಸ್ನಾನ ಮಾಡಿ ಮಡಿಯುಟ್ಟು ಯಂತ್ರವನ್ನು ಪಂಚಾಮೃತ ಮತ್ತು ಗಂಗಾಜಲದಿಂದ ಸ್ವಚ್ಛಗೊಳಿಸಬೇಕು. ನಂತರ ಈಶಾನ್ಯ ಮೂಲೆಯಲ್ಲಿ ಕೆಂಪು ಬಣ್ಣದ ಬಟ್ಟೆಯ ಮೇಲೆ ಈ ಯಂತ್ರವನ್ನು ಸ್ಥಾಪಿಸಬೇಕು. ಪೂಜೆಯ ವೇಳೆ ಓಂ ಶ್ರೀ ಹ್ರೀಂ ಶ್ರೀ ನಮಃ ಅಥವಾ ಓಂ ಶ್ರೀ ಹ್ರೀಂ ಶ್ರೀ ಮಂತ್ರವನ್ನು ಪಠಿಸಬೇಕು. 

ಧನ ಲಕ್ಷ್ಮೀ ಯಂತ್ರದ ಪೂಜಾ ವಿಧಾನ :
 - ಲಕ್ಷ್ಮೀ ಯಂತ್ರದ ಪೂಜಾ ವಿಧಾನವು ಬೆಳಿಗ್ಗೆಯಿಂದಲೇ ಪ್ರಾರಂಭವಾಗುತ್ತದೆ.  ಇದಕ್ಕಾಗಿ ಮುಂಜಾನೆ ಸ್ನಾನ ಮಾಡಿ ಹಳದಿ ಬಟ್ಟೆಯನ್ನು ಧರಿಸಿ. 
-ಪೂಜೆಗೂ ಮುನ್ನ ಶ್ರೀ ಯಂತ್ರವನ್ನು ಪಂಚಾಮೃತದಲ್ಲಿ ಇರಿಸಲಾಗುತ್ತದೆ. 
-ನಂತರ  ಅದರ ಮೇಲೆ ಕೆಂಪು ಚಂದನವನ್ನು ಸಿಂಪಡಿಸಿ. 
-ಈಗ ಕೆಂಪು ಗುಲಾಬಿ ಹೂವುಗಳು ಮತ್ತು ಅಕ್ಕಿಯನ್ನು ತೆಗೆದುಕೊಂಡು ಯಂತ್ರದ ಮೇಲೆ ಹಾಕಿ  
-ತುಪ್ಪದ ದೀಪವನ್ನು ಹಚ್ಚಿ ಯಂತ್ರದ ಆರತಿ ಮಾಡಿ. ಈ ದಿನ ದುರ್ಗಾ ಸಪ್ತಮಿಯನ್ನು ಕೂಡಾ ಪಠಿಸಬಹುದು. 
 - ಓಂ ಶ್ರೀ ಹ್ರೀಂ ಶ್ರೀ ಕಮಲೇ ಕಮಲಯೇ ಪ್ರಸೀದ್ ಪ್ರಸೀದ್, ಓಂ ಶ್ರೀ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೈ ನಮಃ. ಈ ಯಂತ್ರವನ್ನು ಪಠಿಸಿ. 

 ಶಾಸ್ತ್ರ ಬದ್ದವಾಗಿ ಈ ಯಂತ್ರವನ್ನು ಪೂಜಿಸುವುದರಿಂದ ಶೀಘ್ರವೇ ಪೂಜಾ ಫಲ ಕೂಡಾ ಲಭಿಸುವುದು. 

ಇದನ್ನೂ ಓದಿ : Diwali 2022: ತಾಯಿ ಲಕ್ಷ್ಮಿಯ ವಿಶೇಷ ದೇವಾಲಯ, ದೀಪಾವಳಿಯಂದು ಭಕ್ತರಿಗೆ ಹಣ, ಚಿನ್ನ, ಬೆಳ್ಳಿಯೇ ಪ್ರಸಾದ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News