Viral News: ಸಖತ್ ವೈರಲ್ ಆಗುತ್ತಿದೆ 4ನೇ ಕ್ಲಾಸ್ ವಿದ್ಯಾರ್ಥಿ ಬರೆದ ಪುಟ್ಟ ಕವನ!

4ನೇ ಕ್ಲಾಸಿನಲ್ಲಿ ಓದುತ್ತಿರುವ  ಬಾಲಕ ಬರೆದಿರುವ 2 ಚಿಕ್ಕ ಪಂದ್ಯಗಳು ಇದೀಗ ಸೊಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Written by - Puttaraj K Alur | Last Updated : Oct 29, 2022, 01:16 PM IST
  • 4ನೇ ಕ್ಲಾಸಿನ ವಿದ್ಯಾರ್ಥಿ ಬರೆದ ಕವನಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ 2 ಚಿಕ್ಕ ಪದ್ಯ ಬರೆದಿರುವ ಪುಟ್ಟ ಬಾಲಕ
  • ಪುಟ್ಟ ಬಾಲಕ ಬರೆದಿರುವ ಕವನಗಳಿಗೆ ಫಿದಾ ಆಗಿರುವ ಸೋಷಿಯಲ್ ಮೀಡಿಯಾ ಬಳಕೆದಾರರು
Viral News: ಸಖತ್ ವೈರಲ್ ಆಗುತ್ತಿದೆ 4ನೇ ಕ್ಲಾಸ್ ವಿದ್ಯಾರ್ಥಿ ಬರೆದ ಪುಟ್ಟ ಕವನ! title=
ಪುಟ್ಟ ಬಾಲಕನ ಕವನಗಳು ವೈರಲ್

ನವದೆಹಲಿ: ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಅನ್ನೋದು ಇರುತ್ತದೆ. ಬಾಲ್ಯದಲ್ಲಿ ತುಂಟಾಟ ಮಾಡುವ ಮಕ್ಕಳು ಬೆಳೆದಂತೆಲ್ಲಾ ತಮ್ಮಲ್ಲಿರುವ ಕೌಶಲಗಳನ್ನು ಹೊರಹಾಕುತ್ತಿರುತ್ತಾರೆ. ಹಾಡುವುದು, ನೃತ್ಯ ಮಾಡುವುದು, ಓದುವುದು-ಬರೆಯುವುದು ಹೀಗೆ ಹಲವಾರು ರೀತಿಯಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನ ವ್ಯಕ್ತಪಡಿಸುತ್ತಾರೆ. ಮಕ್ಕಳ ಈ ಪ್ರತಿಭೆಯನ್ನು ಗುರುತಿಸಿ ಪೋಷಕರು ಅವರಿಗೆ ಪ್ರೋತ್ಸಾಹ ನೀಡಬೇಕು.

ಇಷ್ಟೆಲ್ಲಾ ಹೇಳಲು ಕಾರಣವೇ 4ನೇ ಕ್ಲಾಸಿನಲ್ಲಿ ಓದುತ್ತಿರುವ ಬಾಲಕ. ಈ ಬಾಲಕ ಬರೆದಿರುವ 2 ಚಿಕ್ಕ ಪಂದ್ಯಗಳು ಇದೀಗ ಸೊಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನೆಟ್ಟಿಗರ ಮನ ಗೆದ್ದಿರುವ ಈ ಕವನಗಳನ್ನು ಬಾಲಕ ಬರೆದಿರುವುದು 2 ವರ್ಷಗಳ ಹಿಂದಿನ ಕೊರೊನಾ ಸಮಯದಲ್ಲಿ. ಈ ಕವನಗಳನ್ನು ಆತನ ತಂದೆ ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿವೆ.

ಇದನ್ನೂ ಓದಿ:  Medical Miracle: ಏಳು ತಿಂಗಳು ಕೋಮಾದಲ್ಲಿದ್ದೇ ಮಗುವಿಗೆ ಜನ್ಮ ನೀಡಿದ ‘ಮಹಾತಾಯಿ’

ಬಾಲಕ ಬರೆದಿರುವ ಒಂದು ಕವನದಲ್ಲಿ ‘ನನಗೆ ಕವಿತೆಯ ಕಲ್ಪನೆ ಇತ್ತು ಎಂದು ನಾನು ಭಾವಿಸುತ್ತೇನೆ, ಆದರೆ ಈಗ ಅದು ನನ್ನ ಮನಸ್ಸಿನಿಂದ ಹೊರಬರುತ್ತಿಲ್ಲ. ಅದು ನಮ್ಮ ಮನೆಯ ಸುತ್ತಮುತ್ತ ಅಲೆದಾಡುತ್ತಿದೆ’ ಅಂತಾ ಹೇಳಿದ್ದಾನೆ. ತನ್ನ ತಾಯಿಗೆ ಅರ್ಪಿಸುವ ಇನ್ನೊಂದು ಕವನದಲ್ಲಿ ಬಾಲಕ, ‘ನೀವು ಮುಳ್ಳುಗಳಿರುವ ಕಾಂಡದ ಮೇಲೆ ಗುಲಾಬಿಯಮತೆ ಸುಂದರವಾಗಿದ್ದೀರಿ. ಏಕೆಂದರೆ ಕೆಲವೊಮ್ಮೆ ನೀವು ಕೋಪಗೊಳ್ಳುತ್ತೀರಿ’ ಅಂತಾ ಬರೆದಿದ್ದಾನೆ.

4ನೇ ಕ್ಲಾಸಿನ ಬಾಲಕನ ಈ ಕವನಗಳನ್ನು ಓದಿ ಲಕ್ಷಾಂತರ ಸೋಷಿಯಲ್ ಮೀಡಿಯಾ ಬಳಕೆದಾರರು ಖುಷಿಪಟ್ಟಿದ್ದಾರೆ. ಬಾಲಕ ಕಲ್ಪನಾ ಸಾಮರ್ಥ್ಯಕ್ಕೆ ಮಾರುಹೋಗಿದ್ದಾರೆ. ಸಣ್ಣ ಕವನಗಳಾದರೂ ಬಾಲಕ ಬುದ್ದಿಸಾಮರ್ಥ್ಯ ಮೆಚ್ಚುವಂತಹದ್ದು ಅಂತಾ ಶ್ಲಾಘಿಸಿದ್ದಾರೆ. ಲಕ್ಷಾಂತರ ಜನರು ಲೈಕ್ ಮಾಡಿರುವ ಈ ಕವನವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Rasagulla Crime: ರಸಗುಲ್ಲಕ್ಕಾಗಿ ಬಿತ್ತು ಹೆಣ: ರಣರಂಗವಾಯ್ತು ಮದುವೆ ಮನೆ!! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News