ನಿಂಗಿದು ಬೇಕಿತ್ತಾ ಮಗನೇ : ಬೆಂಕಿ ಉಗುಳಲು ಹೋಗಿ ಗಡ್ಡ ಸುಟ್ಟಕೊಂಡ ಯುವಕ..!

ಸರಿಯಾದ ತಯಾರಿ, ಅನುಭವ, ಅಭ್ಯಾಸ ಇಲ್ಲದೆ ಯಾವತ್ತೂ ಯಾವ ಕೆಲಸಕ್ಕೂ ಹುಚ್ಚರ ರೀತಿ ಕೈ ಹಾಕಲು ಹೋಗಬಾರದು ಅಂತಾರೆ ದೊಡ್ಡವರು. ಅದರಂತೆ ಯುವಕನೊಬ್ಬ ಬಾಯಿಂದ ಬೆಂಕಿ ಉಗುಳಲು ಹೋಗಿ ಗಡ್ಡ ಸುಟ್ಟುಕೊಂಡು ಆಸ್ಪತ್ರೆ ಸೇರಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Oct 30, 2022, 03:20 PM IST
  • ಬೆಂಕಿ ಉಗುಳಲು ಹೋಗಿ ಗಡ್ಡ ಸುಟ್ಟಕೊಂಡ ಯುವಕ
  • ಘಟನೆಯ ವಿಡಿಯೋ ಸೋಷಿಯಲ್‌ ಮೀಡಿದಾಲ್ಲಿ ವೈರಲ್‌
  • ಕೈ ಯಿಂದ ಗಡ್ಡಕ್ಕೆ ಹತ್ತಿದ್ದ ಬೆಂಕಿ ಆರಿಸಿದ ಯುವಕರು
ನಿಂಗಿದು ಬೇಕಿತ್ತಾ ಮಗನೇ : ಬೆಂಕಿ ಉಗುಳಲು ಹೋಗಿ ಗಡ್ಡ ಸುಟ್ಟಕೊಂಡ ಯುವಕ..! title=

Viral video : ಸರಿಯಾದ ತಯಾರಿ, ಅನುಭವ, ಅಭ್ಯಾಸ ಇಲ್ಲದೆ ಯಾವತ್ತೂ ಯಾವ ಕೆಲಸಕ್ಕೂ ಹುಚ್ಚರ ರೀತಿ ಕೈ ಹಾಕಲು ಹೋಗಬಾರದು ಅಂತಾರೆ ದೊಡ್ಡವರು. ಅದರಂತೆ ಯುವಕನೊಬ್ಬ ಬಾಯಿಂದ ಬೆಂಕಿ ಉಗುಳಲು ಹೋಗಿ ಗಡ್ಡ ಸುಟ್ಟುಕೊಂಡು ಆಸ್ಪತ್ರೆ ಸೇರಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಬಾಯಲ್ಲಿ ಪೆಟ್ರೋಲ್‌ ತುಂಬಿಕೊಂಡು ಬೆಂಕಿ ಹಚ್ಚಿದ ಕೋಲಿನ್ನು ಹಿಡಿದು ಅದಕ್ಕೆ ಮುಖ ಮಾಡಿ ಪೆಟ್ರೋಲ್‌ ಉಗುಳಲು ಹೋಗುತ್ತಾನೆ. ಆಗ ಬೆಂಕಿಯು ಅವನ ಗಡ್ಡಕ್ಕೆ ಹತ್ತಿಕೊಳ್ಳುತ್ತದೆ. ಇದನ್ನು ಗಮನಿಸಿದ ಆತ ಬೆಂಕಿಯನ್ನು ಕೈ ಯಿಂದ ನಂದಿಸಲು ಪ್ರಯತ್ನ ಮಾಡುತ್ತಾನೆ. ಆದ್ರೆ ಅದು ಸಾಧ್ಯವಾಗಲ್ಲ. ಆಗ ಪಕ್ಕದಲ್ಲಿರುವ ಯುವಕರು ಬಂದು ಕೈಯಿಂದ ಬೆಂಕಿಯನ್ನು ನಂದಿಸುತ್ತಾರೆ.

ಇದನ್ನೂ ಓದಿ: ಸಹಾಯ ಮಾಡಿದ ಯುವತಿಗೆ ಧನ್ಯವಾದ ಹೇಳಿದ ಮರಿ ಆನೆ : ಕ್ಯೂಟ್‌ ವಿಡಿಯೋ ವೈರಲ್‌..!

ಈ ಘಟನೆ ಎಲ್ಲಿ ನಡೆದಿದೆ.. ಯಾವ ದಿನದಂದು ನಡೆದಿದೆ..? ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಬಳಕೆದಾರರು ರವಿ ಪಾಟಿದಾರ್ ಪೋಸ್ಟ್ ಮಾಡಿದ್ದಾರೆ. ವೀಡಿಯೊವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಅಕ್ಟೋಬರ್ 6 ರಂದು ವಿಡಿಯೋ ಪೋಸ್ಟ್ ಮಾಡಲಾಗಿದೆ. ಅಲ್ಲದೆ, ವಿಡಿಯೋ 12.3 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News