Ghee for hair: ಹವಾಮಾನದಲ್ಲಿ ಬದಲಾವಣೆಯಾದರೆ, ಅದರ ಪರಿಣಾಮವು ಚರ್ಮ ಮತ್ತು ಕೂದಲಿನ ಮೇಲೆ ಖಂಡಿತವಾಗಿಯೂ ಬೀರುತ್ತದೆ. ಅದರಲ್ಲೂ ಕೂದಲಂತೂ ವಿಪರೀತವಾಗಿ ಉದುರಲು ಪ್ರಾರಂಭಿಸುತ್ತದೆ. ದಪ್ಪನೆ ಕೂದಲು ತೆಳ್ಳಗಾಗುತ್ತಿರುವಾಗ ಇದು ನಿಮ್ಮನ್ನು ಅತಂಕಕೊಳಗಾಗಿಸಬಹುದು. ನಿಮ್ಮ ಕೂದಲನ್ನು ಉದುರದಂತೆ ಕಾಪಾಡಿಕೊಳ್ಳಲು ನೀವು ಹಲವು ಮಾರ್ಗಗಳನ್ನು ಅನುಸರಿಸಬಹುದು. ಆದರೆ, ಈ ಸಲಹೆಯನ್ನು ಅನುಸರಿಸಿ ನಿಮ್ಮ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಅದು ಹೇಗೆ? ಈ ಸ್ಟೋರಿ ಓದಿ...
ಹವಾಮಾನದಲ್ಲಿ ಬದಲಾವಣೆಯಾದರೆ, ಅದರ ಪರಿಣಾಮವು ಚರ್ಮ ಮತ್ತು ಕೂದಲಿನ ಮೇಲೆ ಖಂಡಿತವಾಗಿಯೂ ಬೀರುತ್ತದೆ. ಅದರಲ್ಲೂ ಕೂದಲಂತೂ ವಿಪರೀತವಾಗಿ ಉದುರಲು ಪ್ರಾರಂಭಿಸುತ್ತದೆ. ದಪ್ಪನೆ ಕೂದಲು ತೆಳ್ಳಗಾಗುತ್ತಿರುವಾಗ ಇದು ನಿಮ್ಮನ್ನು ಅತಂಕಕೊಳಗಾಗಿಸಬಹುದು. ನಿಮ್ಮ ಕೂದಲನ್ನು ಉದುರದಂತೆ ಕಾಪಾಡಿಕೊಳ್ಳಲು ನೀವು ಹಲವು ಮಾರ್ಗಗಳನ್ನು ಅನುಸರಿಸಬಹುದು. ಆದರೆ, ಈ ಸಲಹೆಯನ್ನು ಅನುಸರಿಸಿ ನಿಮ್ಮ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಅದು ಹೇಗೆ? ಈ ಸ್ಟೋರಿ ಓದಿ...
ತುಪ್ಪದಿಂದ ಕೂದಲಿನ ಸಮಸ್ಯೆ ಬಗೆಯರಿಯುತ್ತದೆ. ಇದು ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.
ಒಂದು ಕಪ್‌ನಲ್ಲಿ ಸಮಾನವಾದ ಪ್ರಮಾಣದಲ್ಲಿ ತುಪ್ಪ ಹಾಗೂ ತೆಂಗಿನ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ.
ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಒಂದು ಗಂಟೆಯ ಕಾಲ ಕೂದಲಿನಲ್ಲಿ ಬಿಟ್ಟು ನಿಮ್ಮ ಕೂದಲನ್ನು ಶಾಂಪುವಿನಿಂದ ತೊಳೆಯಿರಿ.
ಈ ಟಿಪ್ ನಿಮ್ಮ ಕೂದಲನ್ನು ಕಪ್ಪಾಗಿಸುವುದಷ್ಟೆ ಅಲ್ಲದೆ ಕೂದಲು ಉದುರುವುದನ್ನು ಕಡಿಮಾಡುತ್ತದೆ ಅಷ್ಟೆ ಅಲ್ಲದೆ ನಿಮ್ಮ ತಲೆ ಕೂದಲಲ್ಲಿನ ಡ್ಯಾಂಡ್ರಫ್ ಅನ್ನು ನಿವಾರಿಸುತ್ತದೆ.
ಇದು ನಿಮ್ಮ ಕೂದಲನ್ನು ಒಳಗಿನಿಂದ ಪೋಷಿಸಿ ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ.
ವಾರದಲ್ಲಿ ಎರಡು ಭಾರಿ ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ವೇಗವಾಗಿ ಬೆಳೆಯಲು ಆರಂಭಿಸುತ್ತದೆ.
ತುಪ್ಪವನ್ನು ನೀವು ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಈರುಳ್ಳಿ ರಸ, ಆಮ್ಲಾ ರಸ ಜೊತೆಗೆ ಬೆರಸಿ ಉಪಯೋಗಿಸಬಹುದು.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.