ಪುರುಷರೇ ಹಾಸಿಗೆಯಲ್ಲಿ ಹುಷಾರ್!‌ ಹೆಣ್ಣಿನಲ್ಲಿ ಈ ಗುಣಗಳು ಪುರುಷನಿಗಿಂತಲೂ 6 ಪಟ್ಟು ಹೆಚ್ಚಂತೆ!!

Chanakya Niti on Husband wife relationship: ಮಹಿಳೆಯರು ಪುರುಷರಿಗಿಂತ ಕೆಲವು ವಿಷಯಗಳಲ್ಲಿ ಬಲಿಷ್ಠರಾಗಿರುತ್ತಾರಂತೆ. ಆಹಾರ ಸೇವನೆ, ನಾಚಿಕೆ, ಧೈರ್ಯ, ಕಾಮ, ರೂಪ-ಯೌವನ, ಮಧುರ ಮಾತು, ದಯೆ, ಸಹಾನುಭೂತಿ ಹಾಗೂ ಬುದ್ಧಿವಂತಿಕೆಯಲ್ಲಿ ಮಹಿಳೆಯರು ಪುರುಷರಿಗಿಂತ ಹಲವು ಪಟ್ಟು ಬಲಿಷ್ಠರಾಗಿರುತ್ತಾರಂತೆ.

Chanakya Neeti on Women: ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಪುರುಷರಿಗಿಂತ ಕೆಲವು ವಿಷಯಗಳಲ್ಲಿ ಬಲಿಷ್ಠರಾಗಿರುತ್ತಾರಂತೆ. ಆಹಾರ ಸೇವನೆ, ನಾಚಿಕೆ, ಧೈರ್ಯ, ಕಾಮ, ರೂಪ-ಯೌವನ, ಮಧುರ ಮಾತು, ದಯೆ, ಸಹಾನುಭೂತಿ ಹಾಗೂ ಬುದ್ಧಿವಂತಿಕೆಯಲ್ಲಿ ಮಹಿಳೆಯರು ಪುರುಷರಿಗಿಂತ ಹಲವು ಪಟ್ಟು ಬಲಿಷ್ಠರಾಗಿರುತ್ತಾರಂತೆ. ಆಚಾರ್ಯ ಚಾಣಕ್ಯರ ಪ್ರಕಾರ, ಪುರುಷನಿಗಿಂತಲೂ ಹೆಣ್ಣಿನಲ್ಲಿ ಯಾವ ಗುಣಗಳು ಹೆಚ್ಚಿರುತ್ತದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಆಚಾರ್ಯ ಚಾಣಕ್ಯರು ತಮ್ಮ ಅರ್ಥಶಾಸ್ತ್ರದಲ್ಲಿ ಹೇಳಿರದ ವಿಷಯಗಳೇ ಇಲ್ಲವೆನ್ನಬಹುದು. ಅದರಲ್ಲೂ ಗಂಡು-ಹೆಣ್ಣಿನ ಗುಣಗಳ ಬಗ್ಗೆ, ಹೆಣ್ಣು ಗಂಡಿನೊಡನೆ ಮತ್ತು ಗಂಡು ಹೆಣ್ಣಿನೊಡನೆ ಹೇಗೆ ವರ್ತಿಸುತ್ತಾರೆ? ಅನ್ನೋದರ ಹಲವು ವಿಚಾರಗಳನ್ನ ಮುಕ್ತವಾಗಿಯೇ ಉಲ್ಲೇಖಿಸಿದ್ದಾರೆ. ಈ ಪೈಕಿ ಕೆಲವು ವಿಚಾರಗಳು ಪ್ರಸ್ತುತವಲ್ಲವೆಂದು ಭಾವಿಸಬಹುದಾಗದ್ದರೂ, ಹಲವಾರು ವಿಷಯಗಳು ಇಂದಿಗೂ ಪ್ರಸ್ತುತವಾಗಿಯೇ ಇವೆ.  

2 /7

ಪುರುಷರಿಗಿಂತಲೂ ಮಹಿಳೆಯರು ದುರ್ಬಲರು ಎಂಬುದು ಸಾಮಾನ್ಯವಾದ ನಂಬಿಕೆ. ಆದರೆ ಇದು ನಿಜವಲ್ಲ. ಪುರುಷರಿಗಿಂತ ಮಹಿಳೆಯರು ಕೆಲವೊಂದು ವಿಚಾರಗಳಲ್ಲಿ ಅತ್ಯಂತ ಬಲಿಷ್ಠರಾಗಿರಾಗಿದ್ದು, ಸಮರ್ಥರಾಗಿರುತ್ತಾರೆ. ಪುರುಷರಿಗೆ ಮಹಿಳೆಯರನ್ನು ಈ 5 ವಿಚಾರಗಳಲ್ಲಿ ಸೋಲಿಸಲು ಸಾಧ್ಯವೇ ಇಲ್ಲವೆನ್ನುತ್ತಾರೆ ಆಚಾರ್ಯ ಚಾಣಕ್ಯ. ಆ 5 ವಿಚಾರಗಳು ಯಾವುವು ಎಂದು ತಿಳಿಯಿರಿ..  

3 /7

'ಸ್ತ್ರೀಣಾಂ ದ್ವಿಗುಣ ಆಹಾರೋ, ಲಜ್ಜಾ, ಚಾಪಿ ಚತುರ್ಗುಣ| ಸಾಹಸಂ ಷಡ್ಗುಣಂ ಚೈವ ಕಾಮಶ್ಚಾಷ್ಟಗುಣಃ ಸ್ಮೃತಃ|| ಚಾಣಕ್ಯ ನೀತಿಯಲ್ಲಿ ಮಹಿಳೆಯರ ಬಗೆಗಿನ ಸೂತ್ರವಿದು. ಇದರರ್ಥ ಹೀಗಿದೆ... ಮಹಿಳೆಯರಲ್ಲಿ ಆಹಾರ ಎಂದರೆ ಹಸಿವು ಪುರುಷರಿಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ. ನಾಚಿಕೆ ಎನ್ನುವಂತಹದ್ದು ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ. ಧೈರ್ಯವು ಪುರುಷನಿಗಿಂತ ಆರು ಪಟ್ಟು ಹೆಚ್ಚಾಗಿರುತ್ತದೆ. ಆದ್ದರಿಂದಲೇ ಮಹಿಳೆಯರನ್ನು ಶಕ್ತಿ ಸ್ವರೂಪಿಯೆಂದೂ ಪರಿಗಣಿಸಲಾಗುತ್ತದೆ. ಅದೇ ರೀತಿ ಮಹಿಳೆಯರಲ್ಲಿ ಲೈಂಗಿಕ ಬಯಕೆಯು ಪುರುಷರಿಗಿಂತ ಎಂಟು ಪಟ್ಟು ಹೆಚ್ಚಾಗಿರುತ್ತದೆ ಅಂತಾ ಹೇಳಲಾಗಿದೆ. ಅಂದರೆ ಹಾಸಿಗೆಯಲ್ಲಿ ಹೆಣ್ಣನ್ನು ಮಣಿಸಲು ಪುರುಷನಿಗೆ ಎಂದೂ ಸಾಧ್ಯವಿಲ್ಲವಂತೆ. 

4 /7

ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಈ 8 ವಿಚಾರಗಳಲ್ಲಿ ಪುರುಷರಿಗಿಂತ ಹೆಚ್ಚು ಸಮರ್ಥರಾಗಿರುತ್ತಾರೆ. ಅವು ಯಾವುವು ಎಂದರೆ ಆಹಾರ ಸೇವನೆ, ನಾಚಿಕೆ, ಧೈರ್ಯ, ಕಾಮ, ರೂಪ ಮತ್ತು ಯೌವನ, ಮಧುರವಾದ ಮಾತು, ದಯೆ ಮತ್ತು ಸಹಾನುಭೂತಿ, ಬುದ್ಧಿವಂತಿಕೆ. 

5 /7

''ಬಹುವೀರ್ಯಬಲಂ ರಾಜ್ಯೋ ಬ್ರಾಹ್ಮಣೋ ಬ್ರಹ್ಮವಿದ್ ಬಲಿ| ರೂಪ-ಯೌವನ-ಮಾಧುರ್ಯಂ ಸ್ತ್ರೀಣಾಂ ಬಲಮನುತ್ತಮಂ||'' ಎಂತಲೂ ಚಾಣಕ್ಯರು ಹೇಳಿದ್ದಾರೆ. ಅಂದರೆ ರಾಜರ ಬಲವೆಂದರೆ ಸ್ನಾಯು ಶಕ್ತಿ ಅಂದರೆ ದೈಹಿಕ ಶಕ್ತಿ, ಆಯುಧಗಳು ಮತ್ತು ಅವರ ಸೈನ್ಯ. ಬ್ರಾಹ್ಮಣನ ಶಕ್ತಿ ಅಂದರೆ ಜ್ಞಾನ ಮತ್ತು ಬ್ರಹ್ಮವಿದ್ಯೆ. ಆದರೆ ಸ್ತ್ರೀಯರ ಶಕ್ತಿಯೆಂದರೆ ಮಧುರ ಮಾತು, ರೂಪ, ನಮ್ರತೆ ಮತ್ತು ಯೌವನವಾಗಿದೆ. 

6 /7

ಅರ್ಥಶಾಸ್ತ್ರದ ಅಧ್ಯಾಯ 14ರಲ್ಲಿ (ಶ್ಲೋಕ ನಂ.11) ಚಾಣಕ್ಯರು ಉಲ್ಲೇಖಿಸಿದ್ದಾರೆ, "ನಾವು ಯಾವಾಗಲೂ ಬೆಂಕಿ, ನೀರು, ಮಹಿಳೆಯರು, ಮೂರ್ಖ ಜನರು, ಸರ್ಪಗಳು ಮತ್ತು ರಾಜಮನೆತನದ ಸದಸ್ಯರೊಂದಿಗೆ ಜಾಗರೂಕತೆಯಿಂದ ವ್ಯವಹರಿಸಬೇಕು; ಏಕೆಂದರೆ ಅವರು ಸಂದರ್ಭ ಬಂದಾಗ, ತಕ್ಷಣವೇ ನಮ್ಮ ಸಾವಿಗೆ ಕಾರಣವಾಗಬಹುದು.ʼʼ ಅಂದರೆ ಹೆಣ್ಣನ್ನು ಕಡೆಗಣಿಸಿ ವ್ಯವಹರಿಸಬಾರದು, ಯಾವಾಗಲೂ ಆಕೆಯೊಂದಿಗೆ ಜಾಗರೂಕತೆಯಿಂದ, ಪ್ರೇಮದಿಂದ ನಡೆದುಕೊಳ್ಳಬೇಕು ಎಂಬುದು ಇದರರ್ಥವಾಗಿದೆ.  

7 /7

ಚಾಣಕ್ಯರ ಪ್ರಕಾರ, ʼತಮ್ಮ ಹೆಂಡತಿ ಅಥವಾ ಗೆಳತಿಯನ್ನ ಯಾವಾಗಲೂ ಗೌರವದಿಂದ ಕಾಣುವ ವ್ಯಕ್ತಿಯ ಸಂಬಂಧ ತುಂಬಾ ಗಟ್ಟಿಯಾಗಿರುತ್ತದೆ. ಅಂತಹ ವ್ಯಕ್ತಿಯು ಗೌರವ ಪಡೆಯುತ್ತಾನೆ ಮತ್ತು ಆತನ ಲೈಂಗಿಕ ಜೀವನ ಯಾವಾಗಲೂ ಸಂತೋಷದಿಂದ ಕೂಡಿರುತ್ತದೆ. ಉತ್ತಮ ಲೈಂಗಿಕ ಶಕ್ತಿ ಹೊಂದಿದ ಪುರುಷ ಅಥವಾ ಸ್ತ್ರೀಯ ಚಿತ್ತ ಸೆಳೆಯಲು ಅನ್ಯರು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇದನ್ನು ಕಾಲ ಕಸದಂತೆ ಕಾಣಬೇಕು. ಜಗತ್ತಿನಲ್ಲಿ ಲೈಂಗಿಕ ಸುಖವುಳ್ಳ ಉತ್ತಮ ದಾಂಪತ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ.ʼವೆಂದು ಹೇಳಿದ್ದಾರೆ.