Expensive Marriage: 500 ಕೋಟಿ ವೆಚ್ಚದ ಮದುವೆ, 17 ಕೋಟಿ ಸೀರೆ ಉಟ್ಟ ವಧು, 50 ಸಾವಿರ ಅತಿಥಿಗಳು!

Janardhan Reddy Daughter: ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಬರೋಬ್ಬರಿ 500 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದು ಭಾರತದ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಿದೆ.

ವಿಶ್ವದ ಅತ್ಯಂತ ದುಬಾರಿ ಮದುವೆ: ಭಾರತದಲ್ಲಿ ಧರ್ಮ, ಸಮಾಜ, ಪ್ರದೇಶಕ್ಕೆ ಅನುಗುಣವಾಗಿ ಮದುವೆಯ ಸಂಪ್ರದಾಯಗಳಿವೆ. ಸುಂದರ ಅಲಂಕಾರ, ಸಂಗೀತ, ನೃತ್ಯ, ಬಟ್ಟೆಗಳು ಇವೆಲ್ಲವೂ ಭಾರತೀಯ ವಿವಾಹಗಳ ವಿಶೇಷ ಲಕ್ಷಣಗಳಾಗಿವೆ. ಆದರೆ ಕೆಲವು ಮದುವೆಗಳು ನೆನಪಾಗುವುದು ಇವುಗಳಿಂದಲ್ಲ, ಖರ್ಚು ಮತ್ತು ರಾಜಮನೆತನದ ಕಾರಣಕ್ಕೆ. ಈ ಪೈಕಿ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಯೂ ಒಂದಾಗಿದೆ. ಈ ಮದುವೆಗೆ ಬರೋಬ್ಬರಿ 500 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದು ಭಾರತದ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಿದೆ. ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಣಿಯ ವಿವಾಹವು 2016ರ ನವೆಂಬರ್ 6ರಂದು ನಡೆದಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

5 ದಿನಗಳ ಈ ಮದುವೆ ಸಮಾರಂಭದಲ್ಲಿ ಸುಮಾರು 50 ಸಾವಿರ ಅತಿಥಿಗಳು ಆಗಮಿಸಿದ್ದರು. ಮದುವೆಗೆ ಆಗಮಿಸಿದ್ದ ಅತಿಥಿಗಳ ತಂಗಲು ಬೆಂಗಳೂರಿನ 5 ಮತ್ತು 3 ಸ್ಟಾರ್ ಹೋಟೆಲ್‌ಗಳ 1500 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಸ್ಥಳದಲ್ಲಿ ಭದ್ರತೆಗಾಗಿ 3 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಮದುವೆಯಲ್ಲಿ ರೆಡ್ಡಿ ಕುಟುಂಬದ ಹೆಮ್ಮೆ, ಸಂತಸ ಎದ್ದು ಕಾಣುತ್ತಿತ್ತು. ಕುಟುಂಬ ಸದಸ್ಯರು 5 ಕೋಟಿ ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳನ್ನು ಧರಿಸಿದ್ದರು.

2 /5

ವಧುವಿಗೆ ಕಾಂಜೀವರಂ ಸೀರೆಯನ್ನು ವಿಶೇಷವಾಗಿ ತಯಾರಿಸಲಾಗಿದ್ದು, ಇದಕ್ಕೆ 17 ಕೋಟಿ ರೂ. ವೆಚ್ಚವಾಗಿದೆ. ಮದುವೆಯಲ್ಲಿ ಸುಮಾರು 50 ಮೇಕಪ್ ಕಲಾವಿದರನ್ನು ನೇಮಿಸಲಾಯಿತು. ಈ ಪೈಕಿ ಒಬ್ಬರನ್ನು ಮುಂಬೈನಿಂದ ವಿಶೇಷವಾಗಿ ಕರೆಸಲಾಗಿತ್ತು. ಈ ಸಂಪೂರ್ಣ ವ್ಯವಸ್ಥೆಗೆ 30 ಲಕ್ಷ ರೂ. ಖರ್ಚು ಮಾಡಲಾಗಿತ್ತು.

3 /5

ಮದುವೆಯ ಆಮಂತ್ರಣ ಪತ್ರಗಳನ್ನು LCD ಪರದೆಯ ಕಾರ್ಡ್‌ಗಳ ಮೂಲಕ ಅತಿಥಿಗಳಿಗೆ ಕಳುಹಿಸಲಾಯಿತು. ಈ ವಿಶೇಷ ಆಮಂತ್ರಣ ಪತ್ರ ತೆರೆದಾಗ LCD ಪರದೆಯು ಜೊತೆಗೆ ಸಂಗೀತವನ್ನು ಪ್ಲೇ ಆಗುತ್ತಿತ್ತು. ಆ ಸಮಯದಲ್ಲಿ ಈ ದುಬಾರಿ ಮೌಲ್ಯದ ಕಾರ್ಡ್ ವೈರಲ್ ಆಗಿತ್ತು. ಇದರಲ್ಲಿ ರೆಡ್ಡಿ ಕುಟುಂಬದವರು ವಿಡಿಯೋ ಮೂಲಕ ಅತಿಥಿಗಳನ್ನು ಆಹ್ವಾನಿಸುತ್ತಿರುವುದು ಕಂಡುಬಂದಿತ್ತು.

4 /5

ಮದುವೆಗೆ ಬಂದ ಅತಿಥಿಗಳಿಗೆ ಗೇಟ್‌ನಲ್ಲೇ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಒಳಗೆ ಕರೆದೊಯ್ಯಲು 40 ರಾಜಮನೆತನದ ಎತ್ತಿನ ಬಂಡಿಗಳ ವ್ಯವಸ್ಥೆ ಇತ್ತು. ಬಾಲಿವುಡ್‍ನ ಕಲಾ ನಿರ್ದೇಶಕರು ವಿಜಯನಗರ ಶೈಲಿಯಲ್ಲಿ ಹಲವು ದೇವಾಲಯಗಳನ್ನು ಸಿದ್ಧಪಡಿಸಿದ್ದರು. ಊಟದ ಪ್ರದೇಶಕ್ಕೆ ಬಳ್ಳಾರಿ ಹಳ್ಳಿಯ ಲುಕ್ ನೀಡಲಾಗಿತ್ತು.

5 /5

ಅತಿಥಿಗಳನ್ನು ಕರೆತರಲು 2 ಸಾವಿರ ಟ್ಯಾಕ್ಸಿಗಳು ಮತ್ತು 15 ಹೆಲಿಕಾಪ್ಟರ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕುತೂಹಲವೆಂದರೆ ಜನಾರ್ದನ ರೆಡ್ಡಿ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು, ಆದ್ದರಿಂದ ಎಲ್ಲಾ ಪಕ್ಷಗಳು ಈ ಮದುವೆ ಕಾರ್ಯಕ್ರಮವನ್ನು ವಿರೋಧಿಸಿದವು. ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ರೆಡ್ಡಿ ಮಗಳ ಮದುವೆಗೆ ಖರ್ಚು ಮಾಡಲು 500 ಕೋಟಿ ರೂ. ಎಲ್ಲಿಂದ ಬಂತು ಎಂದು ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸಿದ್ದರು.