ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಮರುದಿನವೇ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಬೆಳ್ಳಿ ದರ ಹೀಗಿದೆ!!

Gold Rate Today: ದೇಶಾದ್ಯಂತ ದಸರಾ ಸಂಭ್ರಮ ಮುಗಿದಿದೆ. ಇದರೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ದೀಪಾವಳಿಯತ್ತ ಗಮನ ಹರಿಸಲಾಗಿದೆ. ಅದರಲ್ಲೂ ದೀಪಾವಳಿ ನಂತರ ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಬಂಗಾರದ ಬೆಲೆ ಗರಿಗೆದರುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದು, ಇದು ಆಭರಣ ಪ್ರಿಯರನ್ನು ಬೆಚ್ಚಿ ಬೀಳಿಸಿದೆ. ಬೆಳ್ಳಿ ಬೆಲೆ ಕೂಡ ಚಿನ್ನದ ಹಾದಿಯಲ್ಲಿಯೇ ಸಾಗುತ್ತಿದೆ. 
 

1 /7

ವಾಸ್ತವವಾಗಿ, ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಚಿನ್ನದ ಬೆಲೆ ಸ್ಥಿರವಾಗಿಲ್ಲ. ಒಂದು ದಿನ ಚಿನ್ನದ ಬೆಲೆ ತೀವ್ರವಾಗಿ ಕುಸಿದರೆ, ಮರುದಿನ ಅದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಆದರೆ, 2014ರ ಕೊನೆಯ ತ್ರೈಮಾಸಿಕದಲ್ಲಿ ಚಿನ್ನದ ಬೆಲೆ ಕುಸಿತದಿಂದ ಭಾರಿ ಬೇಡಿಕೆ ಉಂಟಾಗಿತ್ತು. ಹೆಚ್ಚು ಹೆಚ್ಚು ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದರು.. ಹಾಗಾದ್ರೆ ಇಂದು ಪ್ರಮುಖ ನಗರದಲ್ಲಿ (ಅಕ್ಟೋಬರ್ 13) ಪ್ರಸ್ತುತ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ.  

2 /7

ದಸರಾ ಹಬ್ಬದ ದಿನದಂದು ಹೆಚ್ಚಿದ ಚಿನ್ನದ ಬೆಲೆ ಇಂದು ಕೂಡ ಕೊಂಚ ಏರಿಕೆ ದಾಖಲಿಸಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆ 24 ಕ್ಯಾರೆಟ್‌ಗೆ 10 ಗ್ರಾಂ. 40 ಹೆಚ್ಚಿಸಿ ರೂ. 76,430 ಆಗಿದ್ದರೆ, ಪ್ರತಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ. 70,061 ತಲುಪಿದೆ.  

3 /7

ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 69,813 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 76,160 ಮುಂದುವರಿದಿದೆ.  

4 /7

ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 69,988.. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 76,350,  

5 /7

ಮುಂಬೈನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 76,290, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ. 69,933  

6 /7

ಚೆನ್ನೈನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 76,520, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ. 70,143  

7 /7

ಬೆಳ್ಳಿ ಬೆಲೆ: ದೀಪಾವಳಿ ಸಮೀಪಿಸುತ್ತಿದ್ದಂತೆ, ಚಿನ್ನದ ನಂತರ ಬೆಳ್ಳಿಯ ಬೆಲೆ ಕೂಡ ಸ್ವಲ್ಪ ಹೆಚ್ಚಳವನ್ನು ದಾಖಲಿಸಿದೆ. ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 91,840 ಇದೆ. ಆದರೆ ದೆಹಲಿಯಲ್ಲಿ ಬೆಳ್ಳಿಯ ಬೆಲೆ ಕೆಲವು ರಾಜ್ಯಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ. ಇದರಿಂದಾಗಿ ಇಂದು ದೆಹಲಿಯಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ ರೂ. 91,540 ಮುಂದುವರಿದಿದೆ.