Mobile Data Tips: ನಿಮ್ಮ ಮೊಬೈಲ್ ಡೇಟಾ ಕೂಡ ಬೇಗನೆ ಖಾಲಿಯಾಗುತ್ತಾ? ಈ 4 ಟ್ರಿಕ್ಸ್ ಅನುಸರಿಸಿ

              

ಸ್ಮಾರ್ಟ್ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಸ್ಮಾರ್ಟ್‌ಫೋನ್‌ಗಳ ಮೂಲಕ ದೊಡ್ಡ ಮತ್ತು ಚಿಕ್ಕ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು. ಅದರಲ್ಲೂ  ಸಾಂಕ್ರಾಮಿಕ ರೋಗದ ನಂತರ, ಸ್ಮಾರ್ಟ್ಫೋನ್ ಕೆಲಸಗಳಿಗೆ ಮಾತ್ರವಲ್ಲ, ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ಬೆಂಬಲವಾಗಿದೆ. ಆನ್‌ಲೈನ್ ಶಾಪಿಂಗ್, ಆನ್‌ಲೈನ್ ಪಾವತಿ ಅಥವಾ ಆನ್‌ಲೈನ್ ಕ್ಲೈಮ್ ಆಗಿರಲಿ ಎಲ್ಲವೂ ಸ್ಮಾರ್ಟ್‌ಫೋನ್ ಮೂಲಕವೇ ನಡೆಯುತ್ತಿದೆ. ಆದರೆ, ಇದೆಲ್ಲದಕ್ಕೂ ಮುಖ್ಯವಾಗಿ ಮೊಬೈಲ್ ಡೇಟಾ ಬೇಕೇ ಬೇಕು. ಮನೆಯಲ್ಲಿ ವೈ-ಫೈ ಇರುವವರು ಆತಂಕ ಪಡಬೇಕಾಗಿಲ್ಲ. ಆದರೆ ಮೊಬೈಲ್ ಡೇಟಾ ನೆಚ್ಚಿಕೊಂಡಿರುವವರಿಗೆ ಇದು ಆತಂಕದ ಸಂಗತಿ. ಪ್ರಸ್ತುತ ಟೆಲಿಕಾಂ ಕಂಪನಿಗಳು ಹಲವು ಡೇಟಾ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಹಲವು ದಿನಕ್ಕೆ 3GB ಡೇಟಾವನ್ನು ನೀಡುತ್ತವೆ. ಆದರೆ ಹೆಚ್ಚಿನ ಬಳಕೆಯಿಂದಾಗಿ, ಮೊಬೈಲ್ ಡೇಟಾ ಬೇಗನೆ ಖಾಲಿಯಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ದಿನವಿಡೀ ಡೇಟಾವನ್ನು ಹೇಗೆ ಬಳಸುವುದು ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ದಿನವಿಡೀ ಡೇಟಾ ಬಳಸಲು ಏನು ಮಾಡಬೇಕು? ಇಂದು ನಾವು ನಿಮಗೆ ಇದಕ್ಕೆ ಸಂಬಂಧಿಸಿದ ನಾಲ್ಕು ರಹಸ್ಯ ತಂತ್ರಗಳ ಬಗ್ಗೆ ಹೇಳಲಿದ್ದೇವೆ, ಅದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಯಾವುದೇ ಟೆನ್ಶನ್ ಇಲ್ಲದೆ ದಿನವಿಡೀ ಡೇಟಾವನ್ನು ಬಳಸಬಹುದು. ಇದರೊಂದಿಗೆ, ನೀವು ಮತ್ತೆ ಮತ್ತೆ ಡೇಟಾವನ್ನು ರೀಚಾರ್ಜ್ ಮಾಡುವ ತೊಂದರೆಯಿಂದಲೂ ಪಾರಾಗಬಹುದು.

2 /5

ಮೊಬೈಲ್ ಡೇಟಾವನ್ನು ಬಳಸುವಾಗ, ಹೆಚ್ಚು ಡೇಟಾವನ್ನು ಬಳಸುವ ಅಪ್ಲಿಕೇಶನ್‌ಗಳ ಬಳಕೆಯನ್ನು ಕಡಿಮೆ ಮಾಡಿ. ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊಗಳನ್ನು ವೀಕ್ಷಿಸುವುದರಿಂದ ಹೆಚ್ಚಿನ ಡೇಟಾವನ್ನು ಬಳಸುತ್ತದೆ. ಅಲ್ಲದೆ, ಹೆಚ್ಚು ಜಾಹೀರಾತುಗಳನ್ನು ತೋರಿಸುವ ಅಪ್ಲಿಕೇಶನ್‌ಗಳಿಂದ ದೂರವಿರಿ. ಇದು ನಿಮ್ಮ ಡೇಟಾ ಬೇಗನೆ ಖಾಲಿಯಾಗುವುದನ್ನು ತಪ್ಪಿಸುತ್ತದೆ. ನೀವು ಈ ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಲ್ಲಿಸಿದರೆ, ನಂತರ ಡೇಟಾ ವ್ಯರ್ಥವಾಗುವುದಿಲ್ಲ.

3 /5

ಡೇಟಾ ಮಿತಿಯನ್ನು ಹೊಂದಿಸುವುದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ, ನೀವು ಡೇಟಾ ಬಳಕೆಯ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇದಕ್ಕಾಗಿ ನೀವು ಡೇಟಾ ಮಿತಿ ಮತ್ತು ಬಿಲ್ಲಿಂಗ್ ಸೈಕಲ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನೀವು ಡೇಟಾವನ್ನು ಹೊಂದಿಸಬಹುದು. ನೀವು 1GB ಡಾಟಾ ಮಿತಿಯನ್ನು ಹೊಂದಿಸಿದರೆ, 1GB ಖಾಲಿಯಾದ ನಂತರ ಇಂಟರ್ನೆಟ್ ಅನ್ನು ಮುಚ್ಚಲಾಗುತ್ತದೆ.

4 /5

ಮೊಬೈಲ್ ಡೇಟಾ ರನ್ ಆಗುತ್ತಿರುವಾಗ, ಹಲವು ಆಪ್‌ಗಳು ತಮ್ಮನ್ನು ತಾವು ನವೀಕರಿಸಿಕೊಳ್ಳುತ್ತವೆ. ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಇದನ್ನು ಬದಲಾಯಿಸಬಹುದು. ಇದಕ್ಕಾಗಿ ನೀವು ವೈಫೈ ಮೂಲಕ ಆಟೋ ಅಪ್‌ಡೇಟ್ ಆಪ್‌ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ಮಾಡುವುದರಿಂದ, ನಿಮ್ಮ ಫೋನ್‌ನ ಅಪ್ಲಿಕೇಶನ್‌ಗಳನ್ನು ವೈ-ಫೈನಲ್ಲಿ ಮಾತ್ರ ನವೀಕರಿಸಲಾಗುತ್ತದೆ. ಇದರಿಂದಾಗಿ ಮೊಬೈಲ್ ಡಾಟಾ ಉಳಿಯುತ್ತದೆ.

5 /5

ಡೇಟಾ ಸೇವರ್ ಮೋಡ್ ಸಹ ಉತ್ತಮ ಆಯ್ಕೆಯಾಗಿದೆ. ಡೇಟಾ ಬಳಕೆಯನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ.