Jaya Bachchan on Aishwarya Rai: ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧದಲ್ಲಿ ಸದಾ ಜಗಳ, ಮನಸ್ಥಾಪ ಇದ್ದೇ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು.. ಜಯಾ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಈ ವದಂತಿಗಳು ಹಲವು ಬಾರಿ ಹೊರಹೊಮ್ಮಿದವು, ಆದರೆ ಇಬ್ಬರೂ ಈ ವದಂತಿಗಳ ಬಗ್ಗೆ ಎಂದಿಗೂ ಪ್ರತಿಕ್ರಿಯಿಸಿಲ್ಲ..
ಬಾಲಿವುಡ್ನ ಫೇಮಸ್ ಜೋಡಿಗಳಲ್ಲಿ ಒಂದಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳಿವೆ.. ಇದನ್ನು ನೆಟ್ಟಿಗರು ಸಹ ಗಮನಿಸಿದ್ದಾರೆ. ಹಲವು ಬಾರಿ ಏಕಾಂಗಿಯಾಗಿ ಗುರುತಿಸಿಕೊಂಡಿರುವ ಐಶ್ ಇತ್ತೀಚೆಗಷ್ಟೇ ಗಣಪತಿಯ ಪೂಜಾ ಕಾರ್ಯಕ್ರಮದಲ್ಲಿ ಏಕಾಂಗಿಯಾಗಿ ಕಾಣಿಸಿಕೊಂಡಿದ್ದು ಇಬ್ಬರ ಮಧ್ಯೆ ಯಾವುದು ಸರಿಯಿಲ್ಲ ಎಂದು ಗುಸುಗುಸು ಶುರುವಾಗಿದೆ.. ಆದರೆ, ಈ ವಿಚಾರದಲ್ಲಿ ಇಬ್ಬರೂ ಮೌನವಾಗಿದ್ದಾರೆ.
ಅಭಿಷೇಕ್ ಮಾತ್ರವಲ್ಲದೆ ಅತ್ತೆ ಜಯಾ ಬಚ್ಚನ್ ಮತ್ತು ಮಾವ ಅಮಿತಾಭ್ ಬಚ್ಚನ್ ಅವರೊಂದಿಗೂ ಐಶ್ ಸಂಬಂಧ ಹದಗೆಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಒಮ್ಮೆ ಜಯಾ ಬಚ್ಚನ್ ಅವರೇ ಜಯಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು.. ಇದೀಗ ಆ ಸ್ಟೇಟ್ಮೆಂಟ್ ಮತ್ತೇ ವೈರಲ್ ಆಗುತ್ತಿದೆ..
ಇತ್ತೀಚೆಗೆ, ಐಶ್ವರ್ಯಾ ರೈ ಮಗಳು ಆರಾಧ್ಯ ಅವರೊಂದಿಗೆ 'ಜಲ್ಸಾ' ಹೊರಗೆ ಕಾಣಿಸಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕುಟುಂಬದಲ್ಲಿ ಎಲ್ಲವೂ ಸರಿಯಿದೆ ಎಂದು ಜನ ಭಾವಿಸಿದ್ದರು.
ಆದರೆ ಕೆಲವು ದಿನಗಳ ನಂತರ, ಗಣಪತಿ ಕಾರ್ಯಕ್ರಮದಲ್ಲಿ ನಟಿಯನ್ನು ಏಕಾಂಗಿಯಾಗಿ ನೋಡಿದ ನೆಟ್ಟಿಗರಿಗೆ ಮತ್ತೇ ಅನುಮಾನ ಶುರುವಾಗಿದೆ.. ಅಲ್ಲದೇ ಜಯಾ ಬಚ್ಚನ್ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಸೊಸೆ ಐಶ್ವರ್ಯಾ ಬಗ್ಗೆ ಮಾತನಾಡಿ, ಅವರ ನಡುವೆ ಯಾವ ರೀತಿಯ ಸಂಬಂಧವಿದೆ ಎಂದು ಹೇಳಿದ್ದರು.
ಐಶ್ವರ್ಯಾ ಬೆನ್ನ ಹಿಂದೆ ತಾನು ರಾಜಕೀಯ ಅಥವಾ ಕುತಂತ್ರ ಮಾಡುವುದಿಲ್ಲ.. ಅವರ ಮತ್ತು ನನ್ನ ನಡುವಿನ ಸಂಬಂಧ ಸ್ನೇಹಿತರದ್ದು.. ನಾವಿಬ್ಬರೂ ಸ್ನೇಹಿತರಂತೆ ಇರುತ್ತೇವೆ.. ಅವಳು ಹೇಳುವುದು ನನಗೆ ಇಷ್ಟವಾಗದಿದ್ದರೆ, ನಾನು ಅದನ್ನು ಅವಳ ಮುಖಕ್ಕೆ ಹೇಳುತ್ತೇನೆ. ಅವರ ಬೆನ್ನ ಹಿಂದೆ ನಾನು ರಾಜಕೀಯ ಮಾಡುವುದಿಲ್ಲ. ಅವಳು ಹಾಗೇ ನನ್ನ ನಿರ್ಧಾರ ಒಪ್ಪಿಗೆಯಾಗದಿದ್ದೇ ಅವಳು ಅದನ್ನು ಸ್ವತಃ ವ್ಯಕ್ತಪಡಿಸುತ್ತಾಳೆ"
ಗೌರವಯುತ ನಡವಳಿಕೆಯನ್ನು ನಿರೀಕ್ಷಿಸುವ ಜಯಾ, "ನನಗೆ ಸ್ವಲ್ಪ ಹೆಚ್ಚು ಗೌರವದಿಂದ ವರ್ತಿಸಬೇಕು.. ನನಗೆ ಈಗ ವಯಸ್ಸಾಗುತ್ತಿದೆ.. ಮುಂದೆ ನಾವು ಮನೆಯಲ್ಲಿ ಕುಳಿತು ಮಾತನಾಡುವುದನ್ನು ಆನಂದಿಸುತ್ತೇವೆ.. ಆದರೆ ಐಶ್ವರ್ಯಗೆ ಅದಕ್ಕೆಲ್ಲ ಸಮಯವೇ ಇಲ್ಲ.." ಎಂದು ಜಯಾ ಹೇಳಿದ್ದಾರೆ..