Shani Gochar 2023: ಹೊಸ ವರ್ಷದಲ್ಲಿ ಈ ರಾಶಿಯವರನ್ನು ಬೆಂಬಿಡದೆ ಕಾಡಲಿದ್ದಾನೆ ಶನಿ ದೇವ

Shani Gochar 2023 Effect: ಕರ್ಮಫಲದಾತ, ನ್ಯಾಯದ ದೇವರು ಎಂದೇ ಬಣ್ಣಿಸಲಾಗುವ ಶನಿ ದೇವನು ಹೊಸ ವರ್ಷದಲ್ಲಿ ಕೆಲವು ರಾಶಿಯವರಿಗೆ ಭಾರೀ ಸಂಕಷ್ಟಗಳನ್ನು ತಂದೊಡ್ಡಲಿದ್ದಾನೆ ಎಂದು ಹೇಳಲಾಗುತ್ತಿದೆ.

Shani Gochar 2023 Effect: ಹೊಸ ವರ್ಷ 2023ರ ಮೊದಲೇ ತಿಂಗಳೇ ಅಂದರೆ ಜನವರಿಯಲ್ಲಿ ಕರ್ಮಫಲದಾತ, ನ್ಯಾಯದ ದೇವರು ಎಂದೇ ಬಣ್ಣಿಸಲಾಗುವ ಶನಿಯು ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಶನಿ ರಾಶಿ ಪರಿವರ್ತನೆಗೊಂಡು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 2023ರ ಜನವರಿ 17 ರಂದು ಕುಂಭ ರಾಶಿಗೆ ಶನಿಯ ಪ್ರವೇಶದಿಂದ ಮೂರು ರಾಶಿಯ ಜನರಿಗೆ ಶನಿ ಸಾಡೇ ಸಾತಿಯ ಪ್ರಭಾವ ಆರಂಭವಾಗಲಿದೆ. ಇದರೊಂದಿಗೆ ಎರಡು ರಾಶಿಯವರಿಗೆ ಶನಿ ಧೈಯಾ ಆರಂಭವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ಶನಿ ದೇವನು ಈ ಐದು ರಾಶಿಯವರನ್ನು ಬೆಂಬಿಡದೆ ಕಾಡುತ್ತಾನೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೀನ ರಾಶಿ:  2023ರ ಜನವರಿಯಲ್ಲಿ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಬಳಿಕ ಕುಂಭ ರಾಶಿಯವರಿಗೆ ಮೊದಲನೇ ಘಟ್ಟದ ಶನಿ ಸಾಡೇ ಸಾತಿ ಪ್ರಭಾವ ಆರಂಭವಾಗಲಿದೆ. ಇದರೊಂದಿಗೆ ಮೀನ ರಾಶಿಯ ಜನರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. 

2 /5

ಮಿಥುನ ರಾಶಿ: ಹೊಸ ವರ್ಷದಲ್ಲಿ ಶನಿ ರಾಶಿ ಪರಿವರ್ತನೆಯ ಪರಿಣಾಮವಾಗಿ ಮಿಥುನ ರಾಶಿಯವರಿಗೆ ಸಾಡೇ ಸಾತಿ ಶನಿಯ ಎರಡನೇ ಘಟ್ಟ ಆರಂಭವಾಗಲಿದೆ. ಇದರ ಪ್ರಭಾವದಿಂದಾಗಿ ಮಿಥುನ ರಾಶಿಯ ಜನರು ಉದ್ಯೋಗ ವ್ಯವಹಾರಗಳಲ್ಲಿ ಭಾರೀ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಬಹಳ ಜಾಗರೂಕರಾಗಿರಿ.

3 /5

ಮಕರ ರಾಶಿ:  2023ರ ಜನವರಿಯಲ್ಲಿ ಶನಿಯ ಸಂಚಾರದಿಂದ ಮಕರ ರಾಶಿಯವರಿಗೆ ಸಾಡೇ ಸಾತಿ ಶನಿಯ ಮೂರನೇ ಘಟ್ಟ ಆರಂಭವಾಗಲಿದೆ. ಇದರಿಂದ ಈ ರಾಶಿಯವರಿಗೆ ಆರ್ಥಿಕ ನಷ್ಟದ ಜೊತೆಗೆ ಹಲವು ರೀತಿಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕೂಡ ಕಾಡಬಹುದು. 

4 /5

ಕರ್ಕಾಟಕ ರಾಶಿ:   ಹೊಸ ವರ್ಷದಲ್ಲಿ ಕುಂಭ ರಾಶಿಗೆ ಶನಿಯ ಪ್ರವೇಶವು ಕರ್ಕಾಟಕ ರಾಶಿಯವರಿಗೆ ಹೆಚ್ಚು ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ ಕರ್ಕಾಟಕ ರಾಶಿಯ ಜನರಿಗೆ ಶನಿಯ ಧೈಯಾ ಪ್ರಭಾವದಿಂದ ಆರ್ಥಿಕ ಸಂಕಷ್ಟಗಳು ಎದುಗಾರಬಹುದು. ಮಾತ್ರವಲ್ಲ, ಆರೋಗ್ಯವೂ ಹದಗೆಡಬಹುದು.

5 /5

ವೃಶ್ಚಿಕ ರಾಶಿ: ಜನವರಿಯಲ್ಲಿ ಶನಿ ರಾಶಿ ಪರಿವರ್ತನೆಯಿಂದ ವೃಶ್ಚಿಕ ರಾಶಿಯ ಜನರಿಗೆ ಶನಿಯ ಧೈಯಾ ಪ್ರಭಾವ ಶುರುವಾಗಲಿದೆ. ಈ ಸಮಯದಲ್ಲಿ ವೃಶ್ಚಿಕ ರಾಶಿಯವರು ಉದ್ಯೋಗ-ವ್ಯವಹಾರಗಳಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿ, ವಾದ-ವಿವಾದಗಳಿಂದ ದೂರ ಉಳಿಯುವುದರಿಂದ ಕೊಂಚ ರಿಲೀಫ್ ಪಡೆಯಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.